Advertisement
ಎ. 25ರಂದು ಮೂರನೇ ಸಲ ಜಪಾನ್ ಕೊರೊನಾ ತುರ್ತು ಪರಿಸ್ಥಿತಿ ಜಾರಿಗೊಳಿಸಿತ್ತು. ಟೋಕಿಯೊ, ಒಸಾಕಾ, ಕೋಟೊ, ಹ್ಯೋಗೊ ಮೊದಲಾದ 6 ಪ್ರಾಂತ್ಯಗಳು ಈ ವ್ಯಾಪ್ತಿಗೆ ಬಂದಿದ್ದವು. ಈಗ ಇದನ್ನು ಇನ್ನೂ 3 ಪ್ರಾಂತ್ಯಗಳಿಗೆ ವಿಸ್ತರಿಸಿದೆ. ಇದು ಮೇ 31ರ ತನಕ ಜಾರಿಯಲ್ಲಿರುತ್ತದೆ.
ಇದೇ ವೇಳೆ ಜಪಾನ್‌ನಲ್ಲಿ ಒಲಿಂಪಿಕ್ಸ್ ವಿರೋಧ ಅಭಿಯಾನ ತೀವ್ರಗೊಂಡಿದೆ. ಇದಕ್ಕೆ ಸಹಿ ಹಾಕಿದವರ ಸಂಖ್ಯೆ ಮೇ ಆರಂಭ ದಲ್ಲೇ ಮೂರೂವರೆ ಲಕ್ಷದ ಗಡಿ ದಾಟಿತ್ತು. ಒಲಿಂಪಿಕ್ಸ್‌ಗೆ ವಿನಿಯೋಗಿಸುವ ಮೊತ್ತವನ್ನು ಕೊರೊನಾದಿಂದ ತೀವ್ರ ಆರ್ಥಿಕ ಅಡಚಣೆಗೆ ಸಿಲುಕಿದವರ ನೆರವಿಗೆ ಬಳಸಬೇಕೆಂದು ಟೋಕಿಯೊ ಗವರ್ನರ್ ಯುರಿಕೊ ಕೊçಕೆ ಅವರಿಗೆ ಮನವಿ ಮಾಡಲಾಗಿದೆ.