ಬೀದರ: ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆಕಡಿಮೆಯಾಗುತ್ತಿದೆ. ಆದರೆ ರಾಜ್ಯದಲ್ಲಿ ಎರಡನೇ ಅಲೆಪ್ರಾರಂಭವಾಗುವ ಸಾಧ್ಯತೆಗಳು ಇರುವುದರಿಂದ ವೈದ್ಯಾಧಿಕಾರಿಗಳುಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ
ಕಾರ್ಯದರ್ಶಿಗಳಾದ ರಿಚರ್ಡ್ ವಿನ್ಸೆಂಟ್ ಡಿಸೋಜಾ ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಜಿಲ್ಲೆಯ ಆರೋಗ್ಯಾಧಿ ಕಾರಿಗಳೊಂದಿಗೆ ಕೋವಿಡ್-19 ನಿಯಂತ್ರಣ ಕುರಿತು ಸಭೆ ನಡೆಸಿ ಮಾತನಾಡಿದಅವರು, ಕಾಲೇಜುಗಳು ಆರಂಭ ಗೊಂಡಿದ್ದು, ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ ವಹಿಸಬೇಕು. ಎಲ್ಲಾಕಾಲೇಜುಗಳಲ್ಲಿ ಆರೋಗ್ಯ ತಪಾಸಣೆ ಅಚ್ಚುಕಟ್ಟಾಗಿನಡೆಯಬೇಕು. ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆಬೇಕಾಗಿರುವ ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಅಗತ್ಯ
ಸಲಕರಣೆಗಳನ್ನು ಪೂರೈಸಲಾಗಿದೆ. ಇನ್ನೂ ಬೇಕಿದ್ದಲ್ಲಿಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ತರಿಸಿಕೊಳ್ಳಬೇಕು. ಇರುವಸಲಕರಣೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಹೋಮ್ ಐಸೋಲೇಶನ್‌ನಲ್ಲಿರುವ ರೋಗಿಗಳ ಮನೆಗೆವೈದ್ಯರು ಮತ್ತು ಸಿಬ್ಬಂದಿ ನಿಯಮಿತವಾಗಿ ಭೇಟಿ ನೀಡಿ, ಅಗತ್ಯ ಚಿಕಿತ್ಸೆ ನೀಡಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ಲೋಪಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ರಾಮಚಂದ್ರನ್. ಆರ್ ಮಾತನಾಡಿ, ಜಿಲ್ಲೆಯಲ್ಲಿಕೋವಿಡ್-19 ನಿಯಂತ್ರಣ ಜಾಗೃತಿಗಾಗಿ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆಮಾಹಿತಿ ನೀಡಿದರು. ಅಲ್ಲದೇ ಜಿಲ್ಲೆಯಲ್ಲಿ ಹೊಸ ರೋಗಿಗಳ ಪತ್ತೆ, ತಪಾಸಣೆ ಹಾಗೂ ಚಿಕಿತ್ಸೆ ಕುರಿತಂತೆ ಸಭೆಗೆ ವಿವರಣೆ ನೀಡಿದರು. ಕೋವಿಡ್ ಪ್ರಕರಣಗಳಪತ್ತೆ ಹಚ್ಚುವಿಕೆಯಲ್ಲಿ ಬೀದರ ಜಿಲ್ಲೆಯು ರಾಜ್ಯದ ರ್‍ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕೆಲವು ದಿನಗಳಿಂದಹೊಸ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ಗಳನ್ನು ಹಂತ-ಹಂತವಾಗಿತೆಗೆಯಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ್, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ್, ಭುವನ್ ಪಾಟೀಲ್, ಬ್ರಿಮ್ಸ್ ನಿರ್ದೇಶಕ ಡಾ| ಶಿವಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಕೃಷ್ಣಾ ರೆಡ್ಡಿ, ತಾಲ್ಲೂಕು ಆರೋಗ್ಯಾ ಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.
ಬೀದರ ಜಿಲ್ಲೆಯಲ್ಲಿ ಕೋವಿಡ್ ರಿಕವರಿರೇಟ್ ಶೇ.96 ಮತ್ತು ಪಾಸಿಟಿವಿಟಿ ರೇಟ್-ಶೇ.0.4ರಷ್ಟಿದೆ. ಕಾಲೇಜುಗಳು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆಗೆ ಇಲಾಖೆಯಿಂದ ಗುರಿ ನಿಗದಿಪಡಿಸಿದ್ದು,ಅದರಂತೆ ಕರ್ತವ್ಯ ನಿರ್ವಹಿಸಲಾಗುತ್ತಿದೆ.
– ಡಾ| ವಿ.ಜಿ.ರೆಡ್ಡಿ, ಡಿಎಚ್‌ಒ, ಬೀದರ