ಮುಂಬಯಿ: ಮಲಾಡ್ ಪರಿಸರದಲ್ಲಿ ಅತ್ಯಾಧುನಿಕ 2,200 ಹಾಸಿಗೆಗಳ ಕೊರೊನಾ ಚಿಕಿತ್ಸಾ ಕೇಂದ್ರವನ್ನು ನಿರ್ಮಿಸಲು ಮುಂಬಯಿ ಮಟ್ರೋ ಪಾಲಿಟನ್ ಪ್ರದೇಶ ಪ್ರಾಧಿಕಾರ (ಎಂಎಂಆರ್‌ಡಿಎ)ಯು ಈಗಾಗಲೇ ಟೆಂಡರ್ ಘೋಷಿಸಿದ್ದು, ಮೇ 7ರಂದು ಟೆಂಡರ್ ತೆರೆಯಲಾಗುವುದು ಎಂದು ಎಂಎಂಆರ್‌ಡಿಎ ಅಧಿಕಾರಿ ಗಳು ತಿಳಿಸಿದ್ದಾರೆ.
ಕೋವಿಡ್ ಸೆಂಟರ್ ನಿರ್ಮಾ ಣಕ್ಕೆ ಸುಮಾರು 65 ಕೋ. ರೂ. ವೆಚ್ಚ ಅಂದಾಜಿಸಲಾಗಿದೆ.ಆದರೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳ ದ ಕಾರಣ ವೆಚ್ಚವನ್ನು ನಿರ್ಧರಿಸಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೊರೊನಾ 2ನೇ ಅಲೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿ ಆರೋಗ್ಯ ವ್ಯವಸ್ಥೆಯ ಮೇಲೆ ಭಾರೀ ಒತ್ತಡವನ್ನುಂಟು ಮಾಡಿದೆ.
ಕೊರೊನಾ 3ನೇ ಅಲೆಯ ಸಾಧ್ಯತೆಯನ್ನು ವ್ಯಕ್ತಪಡಿಸುತ್ತಿರು ವುದರಿಂದ ಮುಂಬಯಿ ಮನಪಾವು ಮಲಾಡ್ ಪರಿಸರ ದಲ್ಲಿ 2,200 ಹಾಸಿಗೆಗಳ ಜಂಬೋ ಕೋವಿಡ್ ಕೇಂದ್ರಗಳನ್ನು ನಿರ್ಮಿ ಸುವ ಕೆಲಸವನ್ನು ಎಂಎಂಆರ್‌ಡಿಎಗೆ ಹಸ್ತಾಂತರಿಸಿದೆ. ಎಂಎಂ ಆರ್‌ಡಿಎ ಈ ಜಂಬೋ ಆಸ್ಪತ್ರೆಯ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಹೊರಡಿಸಿತ್ತು. 2,200 ಹಾಸಿಗೆಗಳ ಪೈಕಿ 1,400 ಹಾಸಿಗೆಗಳು ಆಮ್ಲಜನಕ ವ್ಯವಸ್ಥೆ ಹೊಂದಿದ್ದರೆ, ಐಸಿಯು ಹಾಸಿಗೆಗಳ ಸಂಖ್ಯೆಯು 200ರಷ್ಟು, ಸಾಮಾನ್ಯ ರೋಗಿಗಳಿಗೆ 600 ಹಾಸಿಗೆಗಳನ್ನು ನಿರ್ಮಿಸಲಾಗುವುದು. ಇದಲ್ಲದೆ ಈ ಕೋವಿಡ್ ಜಂಬೋ ಕೇಂದ್ರದಲ್ಲಿ 18 ಡಯಾಲಿಸಿಸ್ ಘಟಕಗಳು, ಪ್ರಯೋಗಾಲಯಗಳು, ಸಿಟಿ ಸ್ಕ್ಯಾನ್ ವ್ಯವಸ್ಥೆಗಳು ಮತ್ತು ಕೋವಿ ಡ್ ಪರೀಕ್ಷಾ ಯಂತ್ರಗಳ ಸೌಲಭ್ಯ ಗಳನ್ನು ಒದಗಿಸಲಾಗುವುದು.
ಮಲಾಡ್ ಪರಿಸರದಲ್ಲಿ ಜಂಬೋ ಕೋವಿಡ್ ಸೆಂಟರ್ ನಿರ್ಮಿಸಲಿರುವ ಮೈದಾನದಲ್ಲಿ ಮಳೆಗಾಲದಲ್ಲಿ ನೀರು ತುಂಬು ತ್ತದೆ. ಆದರೆ ಜಮೀನು ಖಾಸಗಿ ಒಡೆತನದಲ್ಲಿ ಇರುವುದರಿಂದ ಅದನ್ನು ಭರ್ತಿ ಮಾಡುವಂತೆ ಎಂಎಂಆರ್‌ಡಿಎ ಬಿಎಂಸಿಗೆ ಸೂಚಿಸಿತ್ತು. ಇದರ ಕಾಮಗಾರಿ ಯನ್ನು ಪ್ರಾರಂಭಿಸಿದ್ದ ಮನಪಾ ಎಂಎಂಆರ್‌ಡಿಎಗೆ ಹಸ್ತಾಂತರಿಸಿದ ಬಳಿಕ 15ರಿಂದ 20 ದಿನಗಳಲ್ಲಿ ಕೋವಿಡ್ ಜಂಬೋ ಕೇಂದ್ರ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಎಂಎಂಆರ್‌ಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕಾಗಿ ಈಗಾಗಲೇ ಎಲ್ಲ ಟೆಂಡರ್ ಸ್ವೀಕರಿಸಲಾಗಿದ್ದು, ಮೇ 7ರಂದು ಟೆಂಡರ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗು ವುದು. ಮನಪಾ ವತಿಯಿಂದ ಮೈದಾನವನ್ನು ಸ್ವಾಧೀನಪಡಿಸಿ ಕೊಂಡ ಬಳಿಕ ಜಂಬೋ ಕೋವಿಡ್ ಕೇಂದ್ರಗಳ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ.