Advertisement

ಕಲ್ಪತರು ನಾಡಿಗೆ ಕೊವ್ಯಾಕ್ಸಿನ್‌ ಸರಬರಾಜು ಇಲ್ಲ

06:36 PM May 06, 2021 | Team Udayavani |

ತುಮಕೂರು: ಕೊರೊನಾ ವೈರಸ್‌ ನಿಯಂತ್ರಣಆಗಬೇಕಾದರೆ 45 ವರ್ಷ ಮೇಲ್ಪಟ್ಟವರು ಲಸಿಕೆಪಡೆಯಿರಿ ಎಂದು ಲಸಿಕೆಯನ್ನು ಕೇಂದ್ರಗಳಲ್ಲಿಇಟ್ಟುಕೊಂಡು ಸರ್ಕಾರ ಪ್ರಚಾರ ಮಾಡಿದರೂ, ಜನಲಸಿಕೆ ಪಡೆಯಲು ಬರಲಿಲ್ಲ, ಕೊರೊನಾ 2ನೇ ಅಲೆತೀವ್ರವಾದ ಹಿನ್ನೆಲೆ ಈಗ ಒಂದೇ ಬಾರಿಗೆ ಎಲ್ಲರೂಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಬರುತ್ತಿದ್ದು, ಈಗಲಸಿಕೆಯ ಕೊರತೆ ಕಂಡು ಬಂದಿದೆ.

Advertisement

ಕಲ್ಪತರು ನಾಡಿನಲ್ಲಿ ಲಸಿಕಾ ಅಭಿಯಾನ ಮಾಡಲುಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿ ಕೊಂಡುಪ್ರಾರಂಭದಿಂದಲೂ ಜನರಿಗೆ ಕೊರೊನಾ ಲಸಿಕೆನೀಡುತ್ತಲೇ ಬಂದಿದ್ದು, ಈವರೆಗೆ ಲಸಿಕೆಗೆ ಬೇಡಿಕೆಇರಲಿಲ್ಲ. ಜನರು ಲಸಿಕೆ ಹಾಕಿಸಿಕೊಳ್ಳಲುಹೆದರುತ್ತಿದ್ದರು. ಇದಕ್ಕೆ ಎಲ್ಲ ಕಡೆ ವ್ಯಾಪಕ ಪ್ರಚಾರಮಾಡಲಾಗಿತ್ತು.

ಲಸಿಕೆ ಇಟ್ಟುಕೊಂಡು ಲಸಿಕೆಪಡೆಯಿರಿ ಎಂದರೂ ಜನ ಲಸಿಕೆ ಪಡೆಯಲಿಲ್ಲ. ಈಗಲಸಿಕೆ ಕೊರತೆ ಎದುರಾಗಿದೆ. ಲಸಿಕೆ ಪಡೆಯಲು ಜನಮುಗಿಬಿದ್ದಿದ್ದಾರೆ.ಜಿಲ್ಲೆಯಲ್ಲಿ 4.7 ಲಕ್ಷ ಜನರಿಗೆ ಲಸಿಕೆ: ಜಿಲ್ಲೆಯಲ್ಲಿಇದುವರೆಗೂ 4.7 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.ಬರುತ್ತಿರುವ ಲಸಿಕೆಯನ್ನು 10 ತಾಲೂಕುಗಳಿಗೂಹಂಚಿಕೆ ಮಾಡಲಾಗಿದೆ.

ಈಗ ಜನರ ಬೇಡಿಕೆಹೆಚ್ಚಾಗುತ್ತಿದೆ. ಆದರೆ, ಬೇಡಿಕೆ ಅನುಗುಣವಾಗಿ ಲಸಿಕೆಬಿಡುಗಡೆ ಮಾಡಲಾಗುತ್ತದೆ. ಶೇ. 25ರಅಭಿಯಾನದಲ್ಲಿ ಜಿಲ್ಲೆಯ 6-7 ಲಕ್ಷ ಜನರಿಗೆ ಲಸಿಕೆನೀಡುವ ಗುರಿ ಹೊಂದಲಾಗಿದೆ. ಯಾವುದೇಅಡ್ಡಪರಿಣಾಮ ವಿಲ್ಲದ ಲಸಿಕೆಯನ್ನುಪಡೆದುಕೊಳ್ಳುವ ಮೂಲಕ ಕೊರೊನಾ ಸೋಂಕುಬಂದರೂ ಗುಣಮುಖರಾಗುತ್ತಿರುವುದನ್ನುಗಮನಿಸಿದ ಜನರು, ಈಗ ಕೋವಿಡ್‌ ಲಸಿಕಾಕೇಂದ್ರಗಳಿಗೆ ಬಂದು ಲಸಿಕೆ ಪಡೆಯಲುಮುಂದಾಗುತ್ತಿದ್ದಾರೆ.

ವ್ಯಾಕ್ಸಿನ್‌ ಬರುತ್ತಿರುವುದೇ 12 ಸಾವಿರ ಡೋಸ್‌:ಜಿಲ್ಲೆಯಲ್ಲಿ ವ್ಯಾಕ್ಸಿನ್‌ ಪಡೆಯುತ್ತಿರುವವರಿಗೆಪ್ರತಿದಿನಕ್ಕೆ 20 ಸಾವಿರ ಡೋಸ್‌ ಬೇಡಿಕೆ ಇದೆ. ಆದರೆ,ಜಿಲ್ಲೆಗೆ ಬರುತ್ತಿರುವುದು ಕೇವಲ 12 ಸಾವಿರ ಡೋಸ್‌ಮಾತ್ರ. ಜನರಿಗೆ ಹಂಚಲು ಲಸಿಕಾ ಕೇಂದ್ರದಲ್ಲಿ ಲಸಿಕೆಸ್ಟಾಕ್‌ ಇಲ್ಲ. ಪ್ರತಿದಿನ 12 ಸಾವಿರ ಲಸಿಕೆ ಜಿಲ್ಲೆಗೆಬರುತ್ತಿದೆ. ಅದನ್ನು ಜಿಲ್ಲೆಯ ಎಲ್ಲ ಕಡೆ ಹಂಚಬೇಕು.ಜನರಿಗೆ ಲಸಿಕೆ ಹಾಕುವ ಕೇಂದ್ರಗಳೂ ಇವೆಸಿಬ್ಬಂದಿಗಳೂ ಇದ್ದಾರೆ.

Advertisement

ಆದರೆ, ಜಿಲ್ಲೆಗೆ ಅಗತ್ಯ ಇರುವಲಸಿಕೆ ಮಾತ್ರ ಜಿಲ್ಲೆಗೆ ಬರುತ್ತಿಲ್ಲ. ಇದರಿಂದ ಎಷ್ಟುಜನರಿಗೆ ಲಸಿಕೆ ಸಿಗುತ್ತೆ ಎನ್ನುವ ಮಾಹಿತಿ ಜನರಿಗೆಸರಿಯಾಗಿ ಸಿಗುತ್ತಿಲ್ಲ.ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೊನಾವಾರಿಯರ್ಸ್‌ ಎಲ್ಲ ಸೇರಿ 4 ಲಕ್ಷ ಏಳು ಸಾವಿರ ಜನರಿಗೆಕೊರೊನಾ ಲಸಿಕೆ ನೀಡಲಾಗಿದೆ. ಅದರಲ್ಲಿ 45 ವರ್ಷಮೇಲ್ಪಟ್ಟಿರುವ 2.95 ಲಕ್ಷ ಜನರು ಲಸಿಕೆ ಪಡೆದಿದ್ದಾರೆ.ಜಿಲ್ಲೆಯಲ್ಲಿ 7 ಲಕ್ಷ ಲಸಿಕೆ ಗುರಿ ಹೊಂದಲಾಗಿತ್ತು.ಆದರೆ ಇಲ್ಲಿಯವರೆಗೆ ಲಸಿಕೆ ಸಮರ್ಪಕವಾಗಿ ಬಾರದಹಿನ್ನೆಲೆ ಲಸಿಕೆ ಹಾಕುವ ಗುರಿ ಸಾಧಿಸಲು ಸಾಧ್ಯವಾಗಿಲ್ಲಎನ್ನುತ್ತಾರೆ ಲಸಿಕೆ ವಿತರಣೆಯ ನಿರ್ವಹಣಾಧಿಕಾರಿಡಾ.ಕೇಶವರಾಜ್‌.

ಹಲವರು ಲಸಿಕೆ ಹಾಕಿಸಿಕೊಂಡರೆವೈರಸ್‌ ಹರಡುವುದು ಕಡಿಮೆಆಗುತ್ತದೆ ಎಂದು ಹೇಳುತ್ತಿದ್ದಾರೆ. ನಾನುಲಸಿಕೆ ಪಡೆಯಲು ಎರಡು ಮೂರು ಕಡೆಹೋದೆ. ಲಸಿಕೆ ಇಂದು ಮುಗಿದಿದೆ, ನಾಳೆಬನ್ನಿ ಎನ್ನುತ್ತಿದ್ದಾರೆ.

ರಾಮಕೃಷ್ಣ, ನಾಗರಿಕ.

 

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next