Advertisement

ವಲಸಿಗರಿಂದ ಸೋಂಕು ಹೆಚ್ಚಳ: ಆತಂಕ

08:48 PM Apr 30, 2021 | Team Udayavani |

ತುಮಕೂರು: ಬೆಂಗಳೂರಿನಿಂದ ತುಮಕೂರುಜಿಲ್ಲೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.ಇದರಿಂದ ನಮ್ಮ ಹಳ್ಳಿಗಳಲ್ಲಿ ಸೋಂಕು ಹರಡದಂತೆಕ್ರಮಕೈಗೊಳ್ಳಲು ಚೆಕ್‌ಪೋಸ್ಟ್‌ ಸ್ಥಾಪಿಸಲುಅನುಮತಿ ನೀಡಬೇಕೆಂದು ಜಿಲ್ಲಾ ಉಸ್ತುವಾರಿಸಚಿವ ಜೆ.ಸಿ.ಮಾಧುಸ್ವಾಮಿ ಮುಖ್ಯಮಂತ್ರಿಗಳಲ್ಲಿಮನವಿ ಮಾಡಿದರು.

Advertisement

ಕೋವಿಡ್‌ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಡೆಸಿದ ವಿಡಿಯೊ ಕಾನ್ಫರೆನ್ಸ್‌ಸಭೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ವಿಡಿಯೊಕಾನ್ಫರೆನ್ಸ್‌ ಮೂಲಕ ಭಾಗವಹಿಸಿ ಮಾತನಾಡಿದಅವರು, ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಹೆಚ್ಚುತ್ತಿದ್ದು,ಈವರೆಗೆ ನಗರ ಪ್ರದೇಶದಲ್ಲಿ ಕಾಣುತ್ತಿದ್ದ ಕೊರೊನಾಸೋಂಕು ಈಗ ಬೆಂಗಳೂರಿನಿಂದ ಬಂದವರಿಂದಹಳ್ಳಿಗಳಿಗೆ ವ್ಯಾಪಿಸುತ್ತಿದೆ. ಬೆಂಗಳೂರಿನಿಂದತುಮಕೂರಿಗೆ ಬರುವವರನ್ನು ತಪ್ಪಿಸಲು ಚೆಕ್‌ಪೋಸ್ಟ್‌ನಿರ್ಮಿಸಲು ಅನುವು ನೀಡಬೇಕು ಎಂದು ಸಿಎಂಗೆಸಚಿವರು ಮನವಿ ಮಾಡಿದರು.

ರೆಮ್‌ ಡಿಸಿವಿಯರ್‌ ಕೊರತೆ ಆಗದಂತೆ ಕ್ರಮ:ಕಳೆದ ಬಾರಿಯಂತೆ ಈ ಬಾರಿಯೂ ಜಿಲ್ಲಾಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್‌ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿ, ಶ್ರೀದೇವಿವೈದ್ಯಕೀಯ ಕಾಲೇಜನ್ನು ತಾತ್ಕಾಲಿಕವಾಗಿ ಸರ್ಕಾರಿಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿದರೆ ಹಾಸಿಗೆಸಮಸ್ಯೆಯನ್ನು ನಿಯಂತ್ರಿಸಬಹುದು. ಜಿಲ್ಲೆಯಲ್ಲಿಆಮ್ಲಜನಕ, ರೆಮ್‌ ಡಿಸಿವಿಯರ್‌ ಕೊರತೆ ಆಗದಂತೆಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ಜಿಲ್ಲೆಯ ಬೇಡಿಕೆಗೆತಕ್ಕಂತೆ ಆಮ್ಲಜನಕ ಮತ್ತು ರೆಮ್‌ ಡಿಸಿವಿಯರ್‌ಪೂರೈಸಬೇಕು . ಜಿಲ್ಲೆಯಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಮಾಡಲು ಒಂದು ಮೊಬೈಲ್‌ ವ್ಯಾನ್‌ ಅವಶ್ಯಕವಿದೆ.

ಇದರಿಂದ ಮಧುಗಿರಿ, ಪಾವಗಡ, ಶಿರಾ ತಾಲೂಕಿನಕೋವಿಡ್‌ ಪರೀಕ್ಷೆಗಳನ್ನು ಮಾಡಲುಸುಲಭವಾಗುತ್ತದೆ ಎಂದು ತಿಳಿಸಿದರು.ಬೆಂಗಳೂರಿಗೆ ಸಮೀಪವಿರುವ ತುಮಕೂರುಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು,ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತವು ಅಗತ್ಯ ಕ್ರಮಕೈಗೊಳ್ಳಬೇಕು. ಜಿಲ್ಲಾಡಳಿತಕ್ಕೆ ಈ ನಿಟ್ಟಿನಲ್ಲಿಸ್ವಾತಂತ್ರÂವಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಕೋವಿಡ್‌ ಕೇರ್‌ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಮಾತನಾಡಿ, ಈಗಾಗಲೇತುಮಕೂರು ನಗರ ಸೇರಿದಂತೆ ಪ್ರತಿತಾಲೂಕಿನಲ್ಲಿಯೂ ಕೋವಿಡ್‌ ಕೇರ್‌ ಕೇಂದ್ರಸ್ಥಾಪಿಸಲಾಗಿದ್ದು, ಹೋಂ ಐಸೋಲೇಶನ್‌ನಲ್ಲಿಇರುವವರನ್ನು ಕೋವಿಡ್‌ ಕೇರ್‌ಗೆ ಸ್ಥಳಾಂತರಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳಗಮನಕ್ಕೆ ತಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಡಾ.ಕೆ. ವಂಶಿಕೃಷ್ಣ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ,ಉಪ ವಿಭಾಗಾಧಿಕಾರಿ ಅಜಯ್‌, ಡಿಎಚ್‌ಒನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುರೇಶ್‌ಬಾಬು ಹಾಗೂ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next