Advertisement
ವಿದೇಶಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೂ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ. ಅದರಂತೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿ ಸುವ ವಿದೇಶಿ ಪ್ರಯಾಣಿಕರಲ್ಲಿ ಶೇ. 2ರಷ್ಟು ಮಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ವೇಳೆ ಕೋವಿಡ್ ದೃಢಪಟ್ಟರೆ ಆ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್‌ಗ ಕಳುಹಿಸಲಾಗು ತ್ತದೆ. ಕೋವಿಡ್ ದೃಢಪಟ್ಟ ವ್ಯಕ್ತಿಗಳಿಗೆ ಐಸೊಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಭವಿಷ್ಯದಲ್ಲಿ ಕೋವಿಡ್ ಅನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಆರೋಗ್ಯಅಣಕು ಪ್ರದರ್ಶನ ಮಂಗಳವಾರ ವೆನಾÉಕ್ ಸಹಿತ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ನಡೆಯಿತು. ಐಸೊಲೇಶನ್ ಬೆಡ್‌ಗಳ ಸಾಮರ್ಥ್ಯ, ಆಕ್ಸಿಜನ್ ವ್ಯವಸ್ಥೆಯಿರುವ ಬೆಡ್‌ಗಳು, ಐಸಿಯು ಬೆಡ್‌ಗಳು, ವೆಂಟಿಲೇಟರ್ ಇರುವ ಬೆಡ್‌ಗಳ ಲಭ್ಯತೆ ಮುಂತಾದ ಆರೋಗ್ಯ ಸೌಕರ್ಯಗಳನ್ನು ಅಣಕು ಪ್ರದರ್ಶನ ವೇಳೆ ಪರಿಶೀಲಿಸಲಾಯಿತು. ಡಿಎಚ್‌ಒ ಡಾ| ಕಿಶೋರ್ ಕುಮಾರ್, ವೆನಾÉಕ್ ಡಿಎಂಒ ಡಾ| ಸದಾಶಿವ ಶ್ಯಾನ್‌ಬೋಗ್ ಮೊದಲಾದವರು ಇದ್ದರು. ಹೊಸ ವರ್ಷಾಚರಣೆಗೆ ಮಾರ್ಗಸೂಚಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31 ಮತ್ತು ಜ. 1ಕ್ಕೆ ಅನ್ವಯವಾಗುವಂತೆ ಜಿಲ್ಲಾಡಳಿತ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ.
Related Articles
Advertisement
ಸಭಾಂಗಣ, ತೆರೆದ ಸ್ಥಳ/ಹೊರಾಂಗಣ ಪ್ರದೇಶಗಳಾದ ಕಲ್ಯಾಣ ಮಂಟಪ, ಸಭಾ ಭವನ, ಸರ್ವೀಸ್ ಅಪಾರ್ಟ್‌ಮೆಂಟ್, ಕಡಲ ತೀರ, ಹೋಂಸ್ಟೇ, ಮಾಲ್ ಇತ್ಯಾದಿ ತೆರೆದ ಪ್ರದೇಶಗಳಲ್ಲಿ ಡಿಜೆ/ಡಾಲ್ಬಿ ಡ್ಯಾನ್ಸ್‌ಗಳನ್ನು ನಡೆಸುಂತಿಲ್ಲ. ವಿಶೇಷ ಪಾರ್ಟಿ, ಇತ್ಯಾದಿ ಆಯೋಜಿಸುವ ಮುನ್ನ ಕಡ್ಡಾಯವಾಗಿ ನಗರ ಸ್ಥಳೀಯ ಸಂಸ್ಥೆ/ಗ್ರಾಮೀಣ ಸ್ಥಳೀಯ ಸಂಸ್ಥೆ ಮತ್ತು ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು. ಧಾರ್ಮಿಕ ಕಾರ್ಯಕ್ರಮ ನಡೆಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವ ಮೇಲ್ವಿಚಾರಕರು/ಆಯೋಜಕರು ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ಮತ್ತು ಸರಕಾರದ ನಿಯಮಾವಳಿಗೆ ಒಳಪಟ್ಟು ಕ್ರಮ ಕೈಗೊಳ್ಳಬೇಕು. ದಿನನಿತ್ಯ ನಡೆಯುವ ಕ್ಲಬ್/ಪಬ್/ರೆಸ್ಟೋರೆಂಟ್‌ಗಳ ದೈನಂದಿನ ವ್ಯವಹಾರ ನಡೆಸಲು ಹಾಗೂ ಪರ್ಮಿಟ್‌ನಂತೆ ನಿಗದಿತ ಸಮಯದೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು.
3 ಗಸ್ತು ಪಡೆ
ಅಧಿಕೃತ/ನೋಂದಾಯಿತ ಕೇಂದ್ರಗಳಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು, ಅಪರಿಚಿತರು, ಸಮಾಜ ಘಾತಕ ಶಕ್ತಿಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ, ಪಾಲಿಕೆ, ಪ್ರವಾಸೋದ್ಯಮ ಇಲಾಖೆ, ಅಬಕಾರಿ ಇಲಾಖೆಗೆ ಮಾಹಿತಿ ನೀಡಬೇಕು. ಪೊಲೀಸ್ ಇಲಾಖೆ, ಪಾಲಿಕೆಯ ಅಧಿಕಾರಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳನ್ನೊಳಗೊಂಡ ಮೂರು ತಂಡಗಳ ಗಸ್ತು ಪಡೆಯನ್ನು ರಚಿಸಲಾಗಿದೆ.
ಮಂಗಳೂರು ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಎಲ್ಲ ಸರ್ವಿಸ್ ಅಪಾರ್ಟ್‌ಮೆಂಟ್, ಹೊಟೇಲ್, ಪಬ್, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರ ಸಭೆ ಕರೆದು ಹೊಸ ವರ್ಷ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಬೇಕು ಎಂದು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮತ್ತು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.