Advertisement
ಸೋಂಕಿನ ತೀವ್ರತೆ ಕಳೆದ ಬಾರಿಗಿಂತ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ 2ನೇ ಅಲೆ ಶುರುವಾಗುತ್ತಿದ್ದಂತೆ ಜಿಲ್ಲಾಡಳಿತ ಕೂಡ ಯುದ್ಧೋಪಾದಿಯಲ್ಲಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಒತ್ತು ನೀಡಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸಾವು ನೋವಿನ ಸಂಖ್ಯೆ ಕೂಡ ಹೆಚ್ಚಾಗಿದೆ. ಕಳೆದ ವಾರ ಒಂದೇ ದಿನ ಒಂದು ಸಾವಿರಕ್ಕೂ ಅಧಿ ಕ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. ಇದರಿಂದ 2ನೇ ಅಲೆಯನ್ನು ಸಮರ್ಥವಾಗಿ ಹಿಮ್ಮೆಟ್ಟಲು ಎಲ್ಲೆಡೆ ಕೋವಿಡ್ ಕೇರ್ ಸೆಂಟರ್‌ಗಳನ್ನು ಪುನಾರಂಭಿಸಿದ್ದಲ್ಲದೇ, ಬೆಡ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
Related Articles
Advertisement
ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ 16,565 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರೆ ಅದರಲ್ಲಿ 14,711ಕ್ಕೂ ಅಧಿಕ ಸೋಂಕಿತರು ವಿವಿಧ ಕೋವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಸಂಪೂರ್ಣ ಗುಣಮುಖರಾಗಿ ಮನೆಗೆ ಹೋಗಿದ್ದರು. ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ ಸೋಂಕಿನಿಂದ 159 ಜನ ಮೃತಪಟ್ಟಿದ್ದರು. 2ನೇ ಅಲೆಯಲ್ಲಿ ಕೇವಲ ಎರಡೇ ತಿಂಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಜಿಲ್ಲೆಯಲ್ಲಿ ಈವರೆಗೆ 32,668 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 25,519 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ ಸೋಂಕಿನಿಂದ 227 ಜನ ಸಾವಿಗೀಡಾಗಿದ್ದಾರೆ.
ಸೋಂಕಿತರ ಸಂಪರ್ಕ ಕಡಿತಗೊಳಿಸಲು ಹೋಮ್ ಐಸೊಲೇಶನ್‌ಗೆ ಒಳಗಾದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು ಎಂದು ಉಸ್ತುವಾರಿ ಸಚಿವರು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 6900ಕ್ಕೂ ಅಧಿ ಕ ಸಕ್ರಿಯ ಪ್ರಕರಗಣಳಿದ್ದು, ಅವರಲ್ಲಿ ತೀವ್ರತರ ಸೋಂಕಿನಿಂದ ಬಳಲುವವರನ್ನು ಆಸ್ಪತ್ರೆಗೆ, ರೋಗದ ಲಕ್ಷಣಗಳಿರುವವರನ್ನು ಕೋವಿಡ್ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸ ಶುರುವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು
ಸೇವಾ ಭಾರತಿ ಸಹಯೋಗದಲ್ಲಿ ಕೇಂದ್ರಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸೇವಾ ಭಾರತಿ ಮತ್ತು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಸಹಯೋಗದಲ್ಲಿ 160 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಲ್ಲಿನ ಆದರ್ಶ ಹಾಸ್ಟೆಲ್ ಬಿಟ್ಟು ಕೊಡಲಾಗಿದೆ. ಅಲ್ಲಿನ ಸೋಂಕಿತರಿಗೆ ಈ ಸಂಸ್ಥೆಗಳಿಂದಲೇ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ. ಚಿಕಿತ್ಸೆಗೆ ಬೇಕಾದ ಮಾತೆ, ಔಷಧಗಳನ್ನು ಜಿಲ್ಲಾಡಳಿತ ಪೂರೈಸುತ್ತಿದೆ. ಕೊರೊನಾ 2ನೇ ಅಲೆಯನ್ನು ಜಿಲ್ಲಾಡಳಿತ ಸಮರ್ಥವಾಗಿ ಎದುರಿಸುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ ಕೋವಿಡ್ ಕೇಂದ್ರಗಳಲ್ಲಿ ಬೆಡ್‌ಗಳ ಸಂಖ್ಯೆ 3 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮಸ್ಕಿ, ಸಿರವಾರದಲ್ಲೂ ಆರಂಭಿಸಲಾಗಿದೆ. ಇನ್ನೂ ಎಲ್ಲ ತಾಲೂಕುಗಳಲ್ಲಿ 50 ಬೆಡ್‌ಗಳ ಕೋವಿಡ್ ಆಸ್ಪತ್ರೆ ಚಾಲನೆಯಲ್ಲಿವೆ. ಹಟ್ಟಿಯಲ್ಲಿ 100 ಆಕ್ಸಿಜನ್ ಬೆಡ್ ಗಳ ಆಸ್ಪತ್ರೆ ಆರಂಭಿಸಲಾಗಿದೆ. ರಿಮ್ಸ್‌ನಲ್ಲಿ 20 ಬೆಡ್‌ಗಳ ಟ್ರಯಜ್ ಆರಂಭಿಸಲಾಗಿದೆ. ಆರ್‌ಟಿಪಿಎಸ್‌ನಿಂದಲೂ ಆಸ್ಪತ್ರೆ ಆರಂಭಿಸಲು ಸೂಚನೆ ನೀಡಲಾಗಿದೆ. ಕೋವಿಡ್ ಕೇರ್ ಸೆಂಟರ್‌ಗಳಿಗೆ ಸೋಂಕಿತರನ್ನು ಸ್ಥಳಾಂತರಿಸುವ ಕೆಲಸ ಶುರುವಾಗಿದೆ. ಅಲ್ಲಿ ಅವರಿಗೆ ಊಟ, ಮನರಂಜನೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ.
ಆರ್.ವೆಂಕಟೇಶ ಕುಮಾರ್, ಜಿಲ್ಲಾಧಿಕಾರಿ *ಸಿದ್ಧಯ್ಯಸ್ವಾಮಿ ಕುಕುನೂರು