ಬೆಂಗಳೂರು: ದೇಶಕ್ಕೆ ಕೊರೊನಾ ನಾಲ್ಕನೇ ಅಲೆ ಕಾಲಿಟ್ಟಿದ್ದು, ಈಗಾಗಲೇ ಹೊಸದಿಲ್ಲಿ, ಮುಂಬಯಿಯಲ್ಲಿ ಸೋಂಕು ಹೆಚ್ಚಳವಾಗಿದೆ.
ಮುಂದಿನ 4ರಿಂದ 6 ವಾರಗಳೊಳಗೆ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಮೂರು ಅಲೆಗಳಲ್ಲಿ ಕೊರೊನಾ ಪ್ರಕರಣಗಳು ಮೊದಲಿಗೆ ಹೊಸದಿಲ್ಲಿ, ಮುಂಬಯಿ, ಕೇರಳದ ಬಳಿಕ ಕರ್ನಾಟಕವನ್ನು ಪ್ರವೇಶಿಸಿದೆ.
ಪ್ರಸ್ತುತ ಅದೇ ಮಾದರಿಯನ್ನು ನಾವು ನಾಲ್ಕನೇ ಅಲೆಯಲ್ಲಿ ನೋಡಬಹುದಾಗಿದೆ. ರಾಜ್ಯದಲ್ಲಿ ಎಲ್ಲ ಚಟುವಟಿಕೆಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಮುಂದಿನ ಒಂದೂವರೆ ತಿಂಗಳಲ್ಲಿ ಸೋಂಕಿನ ಸಂಖ್ಯೆ ಏರಿಕೆಯಾಗಲಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.1.37ಕ್ಕೆ ಏರಿಕೆಯಾಗಿದೆ. ಕಳೆದ ವಾರ ಪಾಸಿಟಿವ್ ದರ ಶೇ.0.75 ದಾಖಲಾಗಿತ್ತು. ಸೋಂಕು ಹರಡುವಿಕೆ ಪ್ರಮಾಣ ಶೇ.16.67ರಿಂದ ಶೇ.35.25ಕ್ಕೆ ಏರಿಕೆಯಾಗಿದೆ.
aಕಳೆದೊಂದು ತಿಂಗಳಲ್ಲಿ ನಿತ್ಯ 35ರಿಂದ 50 ಅಸುಪಾಸಿನಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳು ಈಗ ಏಕಾಏಕಿ ಎರಡು ಪಟ್ಟು ಏರಿಕೆಯಾಗಿರುವುದು ನಾಲ್ಕನೇ ಅಲೆಯ ಮುನ್ಸೂಚನೆ ಎನ್ನಲಾಗುತ್ತಿದೆ.