Advertisement

ಪಾಕ್‌ ಮಾಜಿ ಪ್ರಧಾನಿಗೂ ಕೋವಿಡ್‌

12:22 PM Jun 15, 2020 | mahesh |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಕೋವಿಡ್‌ ಸೋಂಕು ಹರಡುವಿಕೆ ಪ್ರಮಾಣ ತೀವ್ರ ರೂಪ ತಾಳುತ್ತಿದ್ದು ಅಲ್ಲಿನ ಮಾಜಿ ಪ್ರಧಾನಿ ಯೂಸಫ್ ರಾಜಾ ಗಿಲಾನಿ ಅವರಿಗೂ ಸೋಂಕು ಬಂದಿದೆ.

Advertisement

ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (ಎನ್‌ಎಬಿ) ನಡೆಸುತ್ತಿರುವ ತನಿಖೆಯಲ್ಲಿ ಅವರು ವಿಚಾರಣೆಗೆ ಹಾಜರಾಗಿ ಬಳಿಕ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ಇದಕ್ಕೂ ಮೊದಲು ಪಾಕಿಸ್ಥಾನದ ವಿಪಕ್ಷ ನಾಯಕ, ಮುಸ್ಲಿಂ ಲೀಗ್‌ನ ಶೆಬಾಜ್‌ ಅವರು ಇದೇ ತನಿಖಾ ಸಂಸ್ಥೆ ಮುಂದೆ ಪ್ರಕರಣವೊಂದರ ವಿಚಾರಣೆಗೆ ಹಾಜರಾಗಿದ್ದು ಬಳಿಕ ಅವರಿಗೂ ಕೋವಿಡ್‌ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಯ ಕೇಂದ್ರದಿಂದಲೇ ಕೋವಿಡ್‌ ಸೋಂಕು ಹಬ್ಬುತ್ತಿದೆಯೇ ಎನ್ನುವ ಶಂಕೆಗಳು ಬಲವಾಗಿವೆ. ಜತೆಗೆ ಗಿಲಾನಿ ಅವರಿಗೆ ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಪುತ್ರ ಕಾಸಿಮ್‌ ಅವರು ಟ್ವೀಟ್‌ ಮಾಡಿದ್ದು ನನ್ನ ತಂದೆಯವರ ಜೀವನವನ್ನು ಅಪಾಯದತ್ತ ನೂಕಿದ್ದಕ್ಕಾಗಿ ಇಮ್ರಾನ್‌ ಖಾನ್‌, ತನಿಖಾ ಸಂಸ್ಥೆಗೆ ಧನ್ಯವಾದಗಳು. ಅವರಿಗೀಗ ಕೋವಿಡ್‌ ದೃಢ ಪಟ್ಟಿದೆ ಎಂದು ಹೇಳಿದ್ದಾರೆ. ಪಾಕ್‌ನಲ್ಲಿ ಒಟ್ಟು ಪ್ರಕರಣ ಗಳ ಸಂಖ್ಯೆ 1.32 ಲಕ್ಷ ಮತ್ತು ಸಾವಿನ ಸಂಖ್ಯೆ 2,551 ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next