ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡುಗ್ರಾಮದ ಆರೋಗ್ಯ ಉಪಕೇಂದ್ರಕ್ಕೆ ಕಳೆದ 20ದಿನಗಳಿಂದ ಶ್ರುಶೂಷಕಿ(ನರ್ಸ್) ಗೈರಾದ ಹಿನ್ನೆಲೆಆಸ್ಪತ್ರೆ ಬಾಗಿಲು ಮುಚ್ಚಲಾಗಿದೆ.ಭೀಮನಬೀಡು ಗ್ರಾಮದಲ್ಲಿ 5 ಸಾವಿರಕ್ಕಿಂತಹೆಚ್ಚು ಜನಸಂಖ್ಯೆಯಿದ್ದು, ಉಪಕೇಂದ್ರ ಶುರುವಾದಾಗಿನಿಂದಲೂ ಯಾವೊಬ್ಬ ವೈದ್ಯರೂ ಭೇಟಿ ನೀಡಿಲ್ಲ.
ಪಾಳು ಬೀಳುವ ಹಂತ ತಲುಪಿದ್ದಆರೋಗ್ಯ ಕೇಂದ್ರವು ಗ್ರಾಪಂ ಅಧ್ಯಕ್ಷರ ಕಾಳಜಿಯಿಂದ ಕಳೆದ ಕೆಲ ತಿಂಗಳ ಹಿಂದೆ ದುರಸ್ತಿ ಮಾಡಲಾಗಿತ್ತು. ಗ್ರಾಮಸ್ಥರ ಒತ್ತಾಸೆ ಮೇರೆಗೆ ಓರ್ವನರ್ಸ್ ನೇಮಿಸಲಾಗಿತ್ತು. ಇದೀಗ ಅವರು ಕರ್ತವ್ಯಕ್ಕೆ ಗೈರಾದ ಹಿನ್ನೆಲೆ ಆಸ್ಪತ್ರೆ ಬಂದ್ ಆಗಿದೆ.ಕೊರೊನಾ 2ನೇ ಅಲೆ ಹೆಚ್ಚಳದಿಂದ ಗ್ರಾಮ ದಲ್ಲಿಅಧಿಕ ಮಂದಿಗೆ ಪಾಸಿಟಿವ್ ಕಾಣಿಸಿ ಕೊಂಡುಹಲವು ಮಂದಿ ಹೋಂ ಐಷೋಲೇಷನ್ ಪಡೆದಿದ್ದಾರೆ.
ಇವರ ಆರೋಗ್ಯ ತಪಾಸಣೆಯನ್ನು ಆಶಾಕಾರ್ಯಕರ್ತೆಯರು ಮಾಡುತ್ತಿದ್ದರೂ ಅವರಿಗೆಸೂಚನೆ ನೀಡುವವರು ಯಾರು ಇಲ್ಲ ದಂತಾಗಿದೆ.ಜೊತೆಗೆ ಸಾಮಾನ್ಯವಾಗಿ ಜನರಿಗೆ ಕಾಣಿಸಿಕೊಳ್ಳುವಜ್ವರ, ನೆಗಡಿ, ತಲೆ ನೋವಿಗೂ ಚಿಕಿತ್ಸೆಸಿಗದಂತಾಗಿದೆ.ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟ ಶೇ.95ರಷ್ಟುಜನರು ಮೊದಲ ಹಂತದ ಲಸಿಕೆ ಪಡೆದಿದ್ದಾರೆ.ಇದೀಗ 2ನೇ ಡೋಸ್ ಪಡೆಯಬೇಕಿದ್ದು, ಅವರಿಗೆಲಸಿಕೆ ನೀಡಲು ಸಿಬ್ಬಂದಿ ಇಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಭೀಮನಬೀಡುಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್, ಆರೋಗ್ಯಉಪ ಕೇಂದ್ರವನ್ನು ದುರಸ್ತಿ ಪಡಿಸಲಾಗಿದೆ. ಆದರೆಇಲ್ಲಿಗೆ ನೇಮಕವಾದ ನರ್ಸ್ ಕಳೆದ 20 ದಿನದಿಂದಗೈರಾಗಿದ್ದಾರೆ.
ಕೂಡಲೇ ವೈದ್ಯರು ಹಾಗೂ ಶ್ರುಶೂಷಕಿನೇಮಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.ಕೊರೊನಾ ಪರಿಸ್ಥಿತಿಯಲ್ಲಿ ಜನರ ಆರೋಗ್ಯಬಿಗಡಾಯಿಸದಂತೆ ತಡೆಯಲು ಈ ಉಪ ಆರೋಗ್ಯಕೇಂದ್ರದಲ್ಲಿ ಕಾಯಂ ವೈದ್ಯ ಕೀಯ ಸಿಬ್ಬಂದಿನೇಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಸವರಾಜು ಎಸ್.ಹಂಗಳ