Advertisement

ಗಡಿ ಭಾಗದಲ್ಲಿ ಕೋವಿಡ್ ಸೋಂಕು ದೃಢ

12:54 PM May 09, 2020 | mahesh |

ಮುಳಬಾಗಿಲು: ಆಂಧ್ರದ ಚಿತ್ತೂರು ಜಿಲ್ಲೆಯ ವಿ.ಕೋಟೆ ಮಂಡಲಂ ವ್ಯಾಪ್ತಿಯ ಪಟ್ರಪಲ್ಲಿ ಗ್ರಾಮದ ಐವರು ರೈತರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಗಡಿ ಗ್ರಾಮಗಳ ಜನ ಆತಂಕಗೊಂಡಿದ್ದು, ಅಬಕಾರಿ ಸಚಿವ ಎಚ್‌.ನಾಗೇಶ್‌ ಸೂಚನೆಯಂತೆ ತಾಲೂಕು ಅಧಿಕಾರಿಗಳು ಗಡಿ ಭಾಗದ ಹಳ್ಳಿಗಳಿಗೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

Advertisement

ಇತ್ತೀಚಿಗೆ ತಮಿಳುನಾಡಿನ ಕೊಯಂ ಬೀಡು ಮಾರುಕಟ್ಟೆಗೆ ತರಕಾರಿ ಹಾಕಿಕೊಂಡು ಹೋಗಿದ್ದ ಆಂಧ್ರದ ಚಿತ್ತೂರು ಜಿಲ್ಲೆಯ ಪಲಮನೇರು ತಾಲೂಕಿನ ವಿ.ಕೋಟೆ ಮಂಡ
ಲಂನ ಪಟ್ರಪಲ್ಲಿ ಗ್ರಾಮದ ಐವರು ರೈತರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌, ಜಿಲ್ಲೆಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.

ಚೆಕ್‌ಪೋಸ್ಟ್‌ಗೆ ಭೇಟಿ: ಇದರಿಂದ ಗ್ರೀನ್‌ ಜೋನ್‌ನಲ್ಲಿದ್ದ ಕೋಲಾರ ಜಿಲ್ಲೆಯ ಮುಳ ಬಾಗಿಲು ತಾಲೂಕಿನ ತಹಶೀಲ್ದಾರ್‌ ರಾಜ ಶೇಖರ್‌, ತಾಲೂಕು ಪಂಚಾಯಿತಿ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ಇಒ ಬಾಬು, ಸಿಪಿಐ ಮಾರ್ಕಂಡಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾವರ್ಣಶ್ರೀ, ಅಬಕಾರಿ ನಿರೀಕ್ಷಕ ಚಿರಂಜೀವಿ ಶುಕ್ರವಾರ ಆಂಧ್ರದ ಗಡಿಯಲ್ಲಿರುವ ಬಿ.ಹೊಸಹಳ್ಳಿ, ತಿಮ್ಮರಾವುತನಹಳ್ಳಿ
ಮತ್ತು ಕುಪ್ಪಂಪಾಳ್ಯ ಚೆಕ್‌ ಪೋಸ್ಟ್‌ಗಳಿಗೆ ಭೇಟಿ ನೀಡಿದರು. ಚೆಕ್‌ ಪೋಸ್ಟ್‌ನಲ್ಲಿ ಇಬ್ಬರು ಪೊಲೀಸರು, ಇಬ್ಬರು ಆಶಾ ಕಾರ್ಯಕರ್ತೆಯರು, ಕಂದಾಯ ಮತ್ತು ಗ್ರಾಪಂನ ಒಟ್ಟು 8
ಸಿಬ್ಬಂದಿಗಳ ಕಾರ್ಯ ವೈಖರಿ ಪರಿಶೀಲಿಸಿದರು.

ಸಂಚಾರ ಬಂದ್‌: ಕರ್ನಾಟಕ ಮತ್ತು ವಿ. ಕೋಟೆ ಸಂಪರ್ಕ ರಸ್ತೆಗಳನ್ನು ಜೆಸಿಬಿಯಿಂದ ಹಳ್ಳ ತೋಡಿ ಕಲ್ಲುಗಳನ್ನು ಅಡ್ಡಹಾಕಿ ಸಂಚಾರ ನಿರ್ಬಂಧಿಸಿದ್ದಾರೆ. ಮಲ್ಲನಾಯಕನಹಳ್ಳಿ,
ತಿಮ ರಾವುತನಹಳ್ಳಿ ಅಪ್ಪಿಕೊಂಡೇನಹಳ್ಳಿ, ಏತೋರ ಹಳ್ಳಿ, ಯಳಚೇಪಲ್ಲಿ, ಬೈರಸಂದ್ರ ಸೇರಿ ಹಲವು ಗಡಿ ಗ್ರಾಮಗಳಿಗೆ ಭೇಟಿ ನೀಡಿ ಆಂಧ್ರಕ್ಕೆ ಜನರು ಹೋಗದಂತೆ ಆಂಧ್ರದಿಂದ
ಗ್ರಾಮಗಳಿಗೆ ಬರ ದಂತೆ ನೋಡಿಕೊಳ್ಳಿ, ಒಂದು ವೇಳೆ ಯಾರಾ ದರೂ ಬಂದರೆ ಕೂಡಲೇ ಪೊಲೀಸ್‌ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಕೋರಿದರು.

ಮದ್ಯ ಕೊಡಬೇಡಿ: ಮಲ್ಲನಾಯಕನಹಳ್ಳಿ ಮತ್ತು ತಾಯಲೂರು ಗ್ರಾಮದ ಮೂರು ಬಾರ್‌ಗಳಿಗೂ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಸ್ಥಳೀಯರಿಗೆ ಮಾತ್ರ ಮದ್ಯ ನೀಡಿ, ಅಲ್ಲದೇ ಯಾವುದೇ ಸ್ಥಳೀಯರು ಆಂಧ್ರದವರಿಗೆ ಮದ್ಯ ಪಡೆದುಕೊಳ್ಳಲು ದಾಖಲೆ ನೀಡಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೇ, ಆಂಧ್ರದಿಂದ ಯಾರೇ ಬಂದರೂ ಮದ್ಯ ನೀಡದೇ ಕೂಡಲೇ ಮಾಹಿತಿ ನೀಡಬೇಕೆಂದು ಬಾರ್‌ ಮಾಲಿಕರಿಗೆ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next