Advertisement

ಕೊವಿಡ್ ಸೋಂಕು‌ ಹೆಚ್ಚುತ್ತಲೇ ಇದೆ, ಸರ್ಕಾರದ ಅಸಮರ್ಪಕತೆ ಮುಂದುವರಿದಿದೆ: ಎಚ್.ಕೆ ಪಾಟೀಲ್

01:56 PM Aug 19, 2020 | Mithun PG |

ಬೆಂಗಳೂರು: ಬಿಇಐಸಿಯಲ್ಲಿ ಕೋವಿಡ್ ಸೆಂಟರ್ ಮಾಡಿದ್ದಾರೆ ಅಲ್ಲಿ ಕುಡಿಯುವ ನೀರಿಲ್ಲ. 15 ರೂಂಗೆ ಒಂದು ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ. ಇದು ಸರ್ಕಾರದ ಬೇಜವಾಬ್ದಾರಿತನಕ್ಕೆ ಕಾರಣ. ಇದರ ಕುರಿತಾಗಿ ಮಾನವಹಕ್ಕುಗಳ ಆಯೋಗಕ್ಕೆ ವಿವರಿಸಿದ್ದೇನೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿಕೆ ನೀಡಿದ್ದಾರೆ.

Advertisement

ಕೊವಿಡ್ ಸೋಂಕು‌ ಹೆಚ್ಚುತ್ತಲೇ ಇದೆ. ಸರ್ಕಾರದ ಅಸಮರ್ಪಕತೆ ಮುಂದುವರಿದಿದೆ. ಜನ ಇನ್ನೂ ಹೆಚ್ಚಾಗಿ  ಸಮಸ್ಯೆಗೆ ತುತ್ತಾಗುತ್ತಲೇ ಇದ್ದಾರೆ. ಬೆಡ್, ಸಿಬ್ಬಂದಿ, ಔಷಧಿಗಳ ಕೊರತೆ ಮುಂದುವರಿದಿದೆ. ಆಕ್ಸಿಜನ್ ಕೊರತೆಯು ಇದೀಗ ಹೆಚ್ಚಾಗಿ ಕಂಡು ಬರುತ್ತಿದೆ.

25 ಸಾವಿರ ರೋಗಿಗಳಿಗೆ ಗೆ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ.  ಇದರಲ್ಲಿ ಒಂದು ಸಾವಿರ ಮಂದಿಯ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ‌ಆಕ್ಸಿಜನ್ ಕೊರತೆ ಮುಂದುವರಿದಿದೆ. ಸರ್ಕಾರದ ಒಂದು ಟಾಸ್ಕ್ ಪೋರ್ಸ್ ಮಾಡಬೇಕು. ಆಕ್ಸಿಜನ್, ಬೆಡ್ ಪೂರೈಕೆ ಇತರ ಸಮಸ್ಯೆ ಬಗ್ಗೆ ಗಮನಹರಿಸಬೇಕು.

ಗುಜರಾತ್ ಕಂಪನಿಗೆ ಆಕ್ಸಿಜನ್ ಟೆಂಡರ್ ಕೊಟ್ಟು ವಾಪಸ್ ಪಡೆದರು. ಲಿಕ್ವಿಡ್ ಆಕ್ಸಿಜನ್ ಫೈಪ್ ಲೈನ್ ಹಾಕಿಲ್ಲ. ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿದರೆ ಸರ್ಕಾರವೇ ಹೊಣೆ. ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್.ಕೆ.ಪಾಟೀಲ್ ಕಿಡಿಕಾರಿದ್ದಾರೆ.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅನುಷ್ಟಾನ ವಿಚಾರವಾಗಿ ಮಾತನಾಡಿದ ಹೆಚ್.ಕೆ.ಪಾಟೀಲ್, ಸುಗ್ರೀವಾಜ್ಙೆ ಮೂಲಕ ತಿದ್ದುಪಡಿಯನ್ನು ಸರ್ಕಾರ ತಂದಿದೆ. ಉಳುವವನಿಂದ ಭೂಮಿ ಕಿತ್ತು ಉಳ್ಳವನಿಗೆ ನೀಡಿದೆ. ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ನಮ್ಮ ಪಕ್ಷ ಇದನ್ನ ವಿರೋಧಿಸಿದೆ ಎಂದರು.

Advertisement

ಕಾನೂನನ್ನು ಧಿಕ್ಕರಿಸಿ ಬೆಂಗಳೂರು ಸೇರಿ ಇತರ ಕಡೆ ಭೂಮಿ ಖರೀದಿ ಮಾಡಿದ್ದಾರೆ. ಅದನ್ನ ರೆಗ್ಯೂಲರ್ ಮಾಡಲು ‌ಸರ್ಕಾರ ಈ ಕಾಯ್ದೆ ಜಾರಿಗೆ ತಂದಿದೆ. ಆರ್ಡಿನೆನ್ಸ್ ಮೂಲಕ ರೈತರ ಹೊಲ ಮಾರೋಕೆ ಅವಕಾಶ ಕೊಟ್ಟಿದ್ದಾರೆ. ಸದನದಲ್ಲಿ ಚರ್ಚೆಯಾಗುವವರೆಗೆ ಕಾಯ್ದೆ ಅನುಷ್ಠಾನ ಬೇಡ. ಮಾಡಿದ್ದರೆ ಅದನ್ನ ವಾಪಸ್ ಪಡೆಯಬೇಕು ಸರ್ಕಾರಕ್ಕೆ ಹೆಚ್.ಕೆ.ಪಾಟೀಲ್ ಆಗ್ರಹಿಸಿದರು.

ತೆರಿಗೆ ಹಣ ಸಂಗ್ರಹದಲ್ಲಿ ಖೋತಾ ವಿಚಾರದ ಬಗ್ಗೆ ನಮ್ಮ‌ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚಿಸುತ್ತೇವೆ ನಂತರ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ‌ ವಿಚಾರವಾಗಿ ಮಾತನಾಡಿ, ಮಲಪ್ರಭಾದಲ್ಲಿ 22 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಮಳೆಯ ಪ್ರಮಾಣ ನೋಡಿದರೆ ಅನಾಹುತ ಖಂಡಿತಾ. ಕಳೆದ ಬಾರಿಯೂ ಸಾಕಷ್ಟು ಸಮಸ್ಯೆಯಾಗಿತ್ತು. ಜನರಿಗೆ ಪರಿಹಾರದ ಕೆಲಸ ಆಗಿರಲಿಲ್ಲ ಈ ಭಾರಿ ಅಂತಹ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next