ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ ಮತ್ತೆ ಹೊಸದಾಗಿ ಮೂರು ಕೋವಿಡ್-19 ಪ್ರಕರಣ ದೃಢಪಟ್ಟಿವೆ. ಓರ್ವ ಸೋಂಕಿತ ಮೃತಪಟ್ಟಿದ್ದಾರೆ.
ರೋಗಿ ನಂಬರ್ 7778ರ ಸಂಪರ್ಕದಿಂದ 38 ವರ್ಷದ ವ್ಯಕ್ತಿ(ರೋಗಿ ನಂಬರ್ 8490) ಹಾಗೂ 30 ವರ್ಷದ ಮಹಿಳೆ(ರೋಗಿ ನಂಬರ್ 8491) ಸೋಂಕು ಕಾಣಿಸಿಕೊಂಡಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ 54 ವರ್ಷದ ವೃದ್ಧೆ(ರೋಗಿ ನಂಬರ್ 8492) ಸೋಂಕು ದೃಢಪಟ್ಟಿದೆ.
ಕೋವಿಡ್-19 ಸೋಂಕಿಗೆ ತುತ್ತಾಗಿದ್ದ 90 ವರ್ಷದ ವಯೋವೃದ್ಧ(ರೋಗಿ ನಂಬರ್ 7208) ಶನಿವಾರ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಜೂ.13 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟಾರೆ 7 ಜನರು ಮಹಾಮಾರಿ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಕೋವಿಡ್‌ದಿಂದ ಗುಣಮುಖರಾದ ರೋಗಿ ನಂಬರ 6040, 5169, 6575, 6576, 6577 ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟು 248 ಪ್ರಕರಣಗಳಲ್ಲಿ ಇದುವರೆಗೆ 220 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 7 ಜನರು ಮೃತಪಟ್ಟಿದ್ದು, 21 ಸಕ್ರಿಯ ಪ್ರಕರಣಗಳಿವೆ.
ಶುಕ್ರವಾರ ಕೋವಿಡ್-19 ಚಿಕಿತ್ಸೆಗೆ ದಾಖಲಾಗಿದ್ದ ಐವರು ಗರ್ಭಿಣಿಯರಲ್ಲಿ 20 ವರ್ಷದ ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಐವರ ಸೋಂಕಿನ ಬಗ್ಗೆ ಖಚಿತಪಡಿಸಿಕೊಳ್ಳಲು ಗಂಟಲು ದ್ರವ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ. ಭಾನುವಾರ ವರದಿ ದೊರೆಯುವ ಸಾಧ್ಯತೆ ಇದೆ.