ಕೊರೊನಾ ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಪ್ರಸ್ತುತ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಯಾವುದೇ ಶಿಕ್ಷಕರು ಅಥವಾ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿಲ್ಲ ಎನ್ನುವುದು ಸಮಾಧಾನಕರ ವಿಚಾರ.
Advertisement
50 ಶಿಕ್ಷಕರಿಗೆ ಪಾಸಿಟಿವ್ಉಡುಪಿ: ಜಿಲ್ಲೆಯಲ್ಲಿ ಇದುವರೆಗೆ ಸುಮಾರು 50 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ಶಿಕ್ಷಕರ ಸಂಘದ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಸೋಂಕಿತ ಓರ್ವ ಶಿಕ್ಷಕಿಯ ಸಾವು ಸಂಭವಿಸಿದೆ. ಇವರು ಬ್ರಹ್ಮಾವರ ವಲಯದ ಗೋಳಿಯಂಗಡಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಮತ್ತು ಕ್ಯಾನ್ಸರ್ ಪೀಡಿತರಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾರ್ಕಳ ವಲಯದ ಶಿಕ್ಷಕರೊಬ್ಬರಿಗೆ ಕೊರೊನಾ ಸೋಂಕು ತಗಲಿದ ಪರಿಣಾಮ ಅವರ ತಂದೆ, ತಾಯಿಗೂ ಸೋಂಕು ತಗಲಿತು. ಶಿಕ್ಷಕರು ಗುಣಮುಖರಾದರೂ ತಂದೆ ಒಂದು ವಾರದ ಹಿಂದೆ ಮತ್ತು ತಾಯಿ ಅ. 9ರಂದು ನಿಧನ ಹೊಂದಿದರು.