Advertisement

ಯುವಕನೊಬ್ಬನಿಗೆ ಕೋವಿಡ್ ಸೋಂಕು

02:44 PM Jul 12, 2020 | Suhan S |

ಸಿರಿಗೆರೆ: ಸಮೀಪದ ಹಳೆರಂಗಾಪುರ ಗ್ರಾಮದ 29 ವರ್ಷದ ಯುವಕನೊಬ್ಬನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅವರನ್ನು ದಾವಣಗೆರೆಯ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಜು. 5 ರಂದು ಪತ್ನಿ ಮತ್ತು ಮಕ್ಕಳ ಜೊತೆಗೂಡಿ ಹಳೆರಂಗಾಪುರದಲ್ಲಿ ಜು. 10 ರಂದು ನಡೆದ ತಮ್ಮ ಬಂಧುಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲಿದ ಅವರು, ಜು. 7 ರಂದು ದಾವಣಗೆರೆಯ ಆಸ್ಪತ್ರೆಯೊಂದಕ್ಕೆ ತೆರಳಿ ಪರೀಕ್ಷೆಗೆ ಕೋರಿದ್ದಾರೆ. ಆದರೆ ಪರೀಕ್ಷೆ ಮಾಡಲು ನಿರಾಕರಿಸಿದ್ದರಿಂದ ಮತ್ತೆ 8ನೇ ತಾರೀಖೀನಂದು ಹೋಗಿ ಪರೀಕ್ಷೆಗೆ ಗಂಟಲು ದ್ರವ ನೀಡಿ ಗ್ರಾಮಕ್ಕೆ ಮರಳಿದ್ದರು. ಪರೀಕ್ಷಾ ವರದಿ 10ನೇ ತಾರೀಖು ಲಭ್ಯವಾಗಿದ್ದು, ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಅವರು ದಾವಣಗೆರೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಜೊತೆಗೆ ಬಂದಿದ್ದ ಮೂವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರಬೇಕಾಗಿದೆ.

ಹಳೆರಂಗಾಪುರಕ್ಕೆ ಬಂದವರು ಗ್ರಾಮದ ಹತ್ತಿರದ ಬಂಧುಗಳ ಮನೆಯೊಂದರಲ್ಲಿ ವಾಸ್ತವ್ಯ ಮಾಡಿದ್ದರು. ಸೋಂಕಿನ ಲಕ್ಷಣಗಳನ್ನು ಅರಿತಿದ್ದ ವ್ಯಕ್ತಿ, ಮನೆಯಿಂದ ಹೊರಬರದೆ ಬಂಧುಗಳ ಮನೆಯಲ್ಲಿಯೇ ಉಳಿದಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಮನೆಯಲ್ಲಿ ಮಕ್ಕಳು, ಬಂಧುಗಳೂ ಸೇರಿದಂತೆ ಕೆಲವು ಮನೆಗಳಿಗೆ ಭೇಟಿ ನೀಡಿದ್ದರು ಹಾಗೂ ಸಿರಿಗೆರೆಗೆ ಬಂದು ಕೆಲವು ಸ್ನೇಹಿತರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ನಿಶ್ಚಿತಾರ್ಥಕ್ಕೆಂದು ಬಂದವರು ಆ ಕಾರ್ಯಕ್ರಮದಲ್ಲಿ ಭಾಗಿಯಾಗದೆ ದೂರ ಉಳಿದಿದ್ದಾರೆ. ಜೊತೆಗೆ ವ್ಯಕ್ತಿ ಉಳಿದುಕೊಂಡಿದ್ದ ಮನೆಯವರಾರೂ ಈ ಸಮಾರಂಭದಲ್ಲಿ ಭಾಗಿಯಾಗಿಲ್ಲ.

ಆರೋಗ್ಯ ಹಾಗೂ ಕಂದಾಯ ಇಲಾಖೆಯ ವತಿಯಿಂದ ಇಡೀ ಗ್ರಾಮವನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಚಿತ್ರದುರ್ಗದ ಪೊಲೀಸ್‌ ವೃತ್ತ ನಿರೀಕ್ಷಕ ಗಿರೀಶ್‌, ಭರಮಸಾಗರ ಠಾಣೆಪಿಎಸ್‌ಐ ರಾಜು, ಸಿರಿಗೆರೆ ಪೊಲೀಸ್‌ ಸಿಬ್ಬಂದಿ, ಪಿಡಿಒ ಲೋಕೇಶ್‌ ಮತ್ತಿತರರು ಗ್ರಾಮಕ್ಕೆ ತೆರಳಿ ರೋಗಿ ವಾಸವಾಗಿದ್ದ ಮನೆಯ ಪ್ರದೇಶದಲ್ಲಿ ಯಾರೂ ಓಡಾಡದಂತೆ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next