Advertisement
ಇದರಿಂದಾಗಿ ಸೋಂಕಿತರುತಮ್ಮ ಮನೆಗಳಲ್ಲಿ ಹೋಂ ಐಸೋಲೇಷನ್‌ಗೆ ತೆರಳುತ್ತಾರೆ. ಆದರೆ ಇವರಲ್ಲಿ ಹೆಚ್ಚು ಸೋಂಕು ಲಕ್ಷಣಗಳಿಲ್ಲದವರು, ತಮಗೇನೂ ತೊಂದರೆಯಿಲ್ಲವೆಂದು,ಹಳ್ಳಿಗಳಲ್ಲಿ ಓಡಾಡಿಕೊಂಡಿದ್ದಾರೆ. ಮೊದಲ ಕೊರೊನಾ ಅಲೆ ಸಂದರ್ಭದಲ್ಲಿಯಾವುದಾದರೂ ಮನೆಯಲ್ಲಿ ಒಬ್ಬ ಸೋಂಕಿತಪತ್ತೆಯಾದರೆ ಆ ಮನೆ ಇರುವ ಇಡೀ ಬೀದಿಯನ್ನೇ ಕಂಟೈನ್ಮೆಂಟ್ ವಲಯ ಮಾಡಲಾಗುತ್ತಿತ್ತು. ಅಲ್ಲದೇಯಾವ ಮನೆಯಲ್ಲಿ ಸೋಂಕಿತರು ಇರುತ್ತಾರೋ ಆಮನೆಯಿಂದ ಯಾರೊಬ್ಬರೂ ಹೊರಗೆ ಓಡಾಡುವಂತಿರಲಿಲ್ಲ.
Related Articles
Advertisement
ಮೂರು ಸಾವಿರ ಮಂದಿಹೋಂ ಐಸೋಲೇಷನ್ ಜಿಲ್ಲೆಯಲ್ಲಿ ಶುಕ್ರವಾರದವರೆಗೆ 4017 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 2989 ಮಂದಿ ಹೋಂಐಸೋಲೇಷನ್‌ನಲ್ಲಿದ್ದಾರೆ. ಶುಕ್ರವಾರ ದೃಢೀಕರಣಗೊಂಡ 611 ಪ್ರಕರಣಗಳಲ್ಲಿ, ಚಾ.ನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು,ಯಳಂದೂರು, ಪಟ್ಟಣಗಳಲ್ಲಿ ಒಟ್ಟಾರೆ139 ಪ್ರಕರಣಗಳು ವರದಿಯಾಗಿದ್ದರೆ, ಜಿಲ್ಲೆಯಗ್ರಾಮೀಣ ಪ್ರದೇಶದಿಂದ 472 ಪ್ರಕರಣಗಳು ವರದಿಯಾಗಿವೆ. ಶೇಕಡಾವಾರು ತೆಗೆದುಕೊಂಡರೆ,ಪಟ್ಟಣ ಪ್ರದೇಶದಲ್ಲಿ ಶೇ. 22.75 ಪ್ರಕರಣಗಳು. ಗ್ರಾಮೀಣ ಪ್ರದೇಶದಲ್ಲಿ ಶೇ. 77.25 ಪ್ರಕರಣಗಳು ವರದಿಯಾಗಿವೆ.
ಪ್ರಶ್ನಿಸಿದವರ ಮೇಲೆಯೇ ಜಗಳ
ತಮ್ಮ ಗ್ರಾಮದಲ್ಲಿ ಯಾರಿಗಾದರೂ ಕೋವಿಡ್ ಸೋಂಕಿದೆಎಂದು ಗೊತ್ತಾಗಿ, ಅಂಥವರನ್ನು ಯಾರಾದರೂ ಪ್ರಶ್ನಿಸಿ,ನಿಮಗೆ ಕೊರೊನಾ ಇರುವುದರಿಂದ ಮನೆಯಲ್ಲೇ ಇರಬೇಕು. ಹೀಗೆ ಸುತ್ತಾಡಬಾರದು ಎಂದು ಹೇಳಿದರೆ, ಅಂಥವರ ವಿರುದ್ಧವೇ ಸೋಂಕಿತರು ಜಗಳಕ್ಕೆ ಬೀಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕೊರೊನಾ ಬಂದಿರದು ನಂಗ, ನಾನೇ ಕಲ್‌ಗುಂಡ್‌ನಂಗ ಓಡಾಡ್ ಕಂಡಿನಿ, ನಿಂಗ್ಯಾನ? ನಿಂಗ ಭಯವಾದ್ರ ಅಟ್ಟಿಲೇ ಇರು! ಎಂದು ಪ್ರಶ್ನೆ ಮಾಡಿದವನನ್ನೇ ಬೈದಿರುವ ಪ್ರಸಂಗಗಳು ನಡೆದಿವೆ!
ಗ್ರಾಮದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿವೆ. ಸೋಂಕಿತರುಮನೆಯ ಹೊರಗೆ ತಿರುಗಾಡುವುದನ್ನುನೋಡಿದಾಗ ನಮಗೆ ಭಯವಾಗುತ್ತದೆ.ನಮ್ಮದೊಂದೇ ಗ್ರಾಮವಲ್ಲ, ಅನೇಕಗ್ರಾಮಗಳಲ್ಲಿ ಈ ರೀತಿ ಪರಿಸ್ಥಿತಿ ಇದೆ.ಅಧಿಕಾರಿಗಳು ಇದರ ಬಗ್ಗೆ ಕ್ರಮಕೈಗೊಳ್ಳಬೇಕು.
ಮಹೇಶ್,ಚಾ.ನಗರ ತಾಲೂಕಿನ ಗ್ರಾಮಸ್ಥ
ಕೆ.ಎಸ್. ಬನಶಂಕರ ಆರಾಧ್ಯ