Advertisement
ರಾಜಧಾನಿಯಲ್ಲಿ ಕೋವಿಡ್ ಸೋಂಕು ಮಿತಿ ಮೀರಿದ್ದು, ಕಳೆದ ಐದು ದಿನಗಳಲ್ಲಿಯೇ ಅರ್ಧಲಕ್ಷ ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಕೋವಿಡ್ ಸಕ್ರಿಯ ಸೋಂಕಿತರ ಸಂಖ್ಯೆ ಒಂದು ಲಕ್ಷ ಮೀರಿದೆ. ಸರ್ಕಾರವು ಸೋಂಕಿತರ ಚಿಕಿತ್ಸೆಗೆ ಎರಡು ಸರ್ಕಾರಿ, 14 ಖಾಸಗಿ ವೈದ್ಯಕೀಯ ಕಾಲೇಜು, 14 ಸರ್ಕಾರಿ, 55 ಖಾಸಗಿ ಆಸ್ಪತ್ರೆ ಗಳು, ಎರಡು ಕೊರೊನಾ ಕೇರ್ ಸೆಂಟರ್‌ಗಳಲ್ಲಿ 6509 ಹಾಸಿಗಳ ವ್ಯವಸ್ಥೆ ಮಾಡಿದೆ. ಆದರೂ, ಸೋಂಕಿತರಿಗೆ ಸೂಕ್ತ ಸಮಯ ದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಸಿಗದೇ ಪರದಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೋಂ ಐಸೋಲೇಷನ್ ರೋಗಿಗಳ ಮತ್ತು ಸರ್ಕಾರ ಪಾಲಿಗೆ ವರವಾಗಿ ಪರಿಣಮಿಸಿದೆ.
Related Articles
Advertisement
ಏನೆಲ್ಲಾ ಚಟುವಟಿಕೆ ಮಾಡಬೇಕು ಎಂಬ ಮಾಹಿತಿ ನೀಡುತ್ತಾರೆ. ಬಳಿಕ ನಿತ್ಯ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತದೆ.
ಈ ಬಾರಿ ಹೋಂ ಐಸೋಲೇಷನ್ ಹೆಚ್ಚು: ಮೊದಲ ಅಲೆಯಲ್ಲಿ ಸೋಂಕು ಆರಂಭವಾದ ನಾಲ್ಕು ತಿಂಗಳ ನಂತರ (ಜುಲೈನಲ್ಲಿ) ಹೋಂ ಐಸೋಲೇಷನ್‌ಗೆ ಸೂಚಿಸಲಾಯಿತು. ಆದರೂ, ಅರ್ಧಕ್ಕರ್ಧ ಸೋಂಕಿ ತರು ಮನೆ ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದರು. ಆದರೆ, ಈ ಬಾರಿ 10 ಮಂದಿಯಲ್ಲಿ ಒಬ್ಬರು ಬಹುತೇಕರು ಮನೆ ಆರೈಕೆಯನ್ನೇ ಆಯ್ಕೆ ಮಾಡುತ್ತಿದ್ದಾರೆ
ಸರ್ಕಾರವೂ ಮನೆ ಆರೈಕೆಗೆ ಮನವಿ :
ಸದ್ಯ ನಗರದಲ್ಲಿ ಸೋಂಕು ಪ್ರಕರಣಗಳು ಸಾಕಷ್ಟು ಏರಿಕೆಯಾಗುತ್ತಿರುವ ಹಿನ್ನೆಲೆ ಎಲ್ಲರಿಗೂ ಆಸ್ಪತ್ರೆ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ. ಕಡಿಮೆ ಲಕ್ಷಣ ಇದ್ದವರು ಭಯದಿಂದಆಸ್ಪತ್ರೆ ಸೇರುತ್ತಿದ್ದಾರೆ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳುಸಕಾಲದಲ್ಲಿ ಹಾಸಿಗೆ ನೀಡುತ್ತಿಲ್ಲ. ಹೀಗಾಗಿಯೇ ಸರ್ಕಾರದಪ್ರಮುಖ ಸಚಿವರು, ಆರೋಗ್ಯ ಇಲಾಖೆ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಕಡಿಮೆ ಸೋಂಕಿನ ಲಕ್ಷಣಇದ್ದವರಿಗೆ ಮನೆಯಲ್ಲಿಯೇ ಆರೈಕೆಯಲ್ಲಿಯಲ್ಲಿರುವಂತೆ ಮನವಿ ಮಾಡಿದ್ದಾರೆ.
ಹೋಂ ಐಸೋಲೇಷನ್ ಮಾನದಂಡಗಳು :
- ಸೋಂಕಿನ ಲಕ್ಷಣ ಕಡಿಮೆ ಇರಬೇಕು.
- ರಕ್ತದಲ್ಲಿನ ಆಮ್ಲಜನಕ ಪ್ರಮಾಣ (ಸ್ಯಾಚುರೇಷನ್)/ಪಲ್ಸ್ ಆಕ್ಸಿಮೀಟರ್ ವರದಿ 93ಕ್ಕಿಂತಲೂ ಹೆಚ್ಚಿರಬೇಕು.
- ಮನೆಯಲ್ಲಿ ಪ್ರತ್ಯೇಕ ಕೋಣೆ, ಶೌಚಾಲಯವಿರಬೇಕು.
- ಸರ್ಕಾರಿ ಕೋಟಾದಡಿ ಆಸ್ಪತ್ರೆಯಲ್ಲಿ – 4575
- ಕೋವಿಡ್ ಕೇರ್ ಸೆಂಟರ್‌ನಲ್ಲಿ – 524
- ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ – 3545
- ಸ್ವಂತ ಖರ್ಚಿನಲ್ಲಿ ಖಾಸಗಿ ಕೋವಿಡ್ ಕೇರ್ ಸೆಂಟರ್‌ನಲ್ಲಿ – 1,071
- ಹೋಂ ಐಸೋಲೇಷನ್‌ನಲ್ಲಿ – 93,463
- ಕುಟುಂಬಸ್ಥರು/ ಸ್ನೇಹಿತರಿಗೆ ಸೋಂಕು ಹರಡದಂತೆ ಪ್ರತ್ಯೇಕವಾಗಿರಬೇಕು.
- ಪಲ್ಸ್ ಆಕ್ಸಿಮೀಟರ್ ವರದಿ 93ಕ್ಕಿಂತಲೂ ಕಡಿಮೆಯಾದಲ್ಲಿ ಶೀಘ್ರ ಆಸ್ಪತ್ರೆಗೆ ತೆರಳಬೇಕು.
- ರೋಗನಿರೋಧಕ ಹೆಚ್ಚಿಸುವ ಆಹಾರ ಕ್ರಮ, ಲಘು ವ್ಯಾಯಾಮ ಅಳವಡಿಸಿಕೊಳ್ಳಬೇಕು.
- ಸೋಂಕಿನ ಕುರಿತು ಋಣಾತ್ಮಕ ಆಲೋಚನೆ ಮಾಡಬಾರದು.