Advertisement
ಫೆ. 17ರಿಂದ ಕೋವಿಡ್ ದೈನಂದಿನ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ ಕಂಡಿದ್ದು, ಫೆಬ್ರವರಿ ಮೊದಲ ವಾರಕ್ಕೆ ಹೋಲಿಸಿದರೆ ಪ್ರಸ್ತುತ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಸುಮಾರು ಶೇ. 89ರಷ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ ನಗರದಲ್ಲಿ ಮತ್ತೂಂದು ಲಾಕ್‌ಡೌನ್ ಬಗ್ಗೆ ವದಂತಿಗಳಿದ್ದು, ಇದು ಅನೇಕರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮನೋವೈದ್ಯರು ಹೇಳಿದ್ದಾರೆ.
Related Articles
Advertisement
ಬೊರಿವಲಿಯ 34ರ ಹರೆಯದ ಯುವ ಕನೋರ್ವ ಮತ್ತೂಂದು ಲಾಕ್‌ಡೌನ್ ಬಗ್ಗೆ ಆತಂಕದಿಂದ ಮನೋ ವೈದ್ಯರ ಮೊರೆ ಹೋಗಿದ್ದಾನೆ. ಕಳೆದ ವರ್ಷ ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಿಸಿದಾಗ ಯುವಕನ ವ್ಯವಹಾರವು ಸ್ಥಗಿತಗೊಂಡಿತು. ಅನ್ಲಾಕ್‌ಗೊಂಡ ಬಳಿಕ ಅವರ ಕೆಲಸವು ಪುನರಾರಂಭ ಗೊಂಡಿತು. ಪ್ರಸ್ತುತ ಲಾಕ್‌ಡೌನ್ ಆತಂಕದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ.
ಮತ್ತೂಂದು ಲಾಕ್‌ಡೌನ್ ಭಯ :
ನನ್ನ ವ್ಯವಹಾರವು ಈಗಷ್ಟೇ ಪ್ರವರ್ಧ ಮಾನಕ್ಕೆ ಬಂದಿದ್ದರಿಂದ 2018ರಲ್ಲಿ 56 ಲಕ್ಷ ರೂ. ಗಳಿಗೆ ಖರೀದಿಸಿದ ಫ್ಲ್ಯಾಟ್‌ಗಾಗಿ 36,000 ರೂ. ಬ್ಯಾಂಕ್ ಸಾಲವನ್ನು ಮಾಸಿಕಕಂತಿನಂತೆ ಪಾವತಿಸಬೇಕಾಗಿದೆ. ಲಾಕ್‌ಡೌನ್ ಕಾರಣ ನಾನು 15 ಲಕ್ಷ ರೂ. ನಷ್ಟವನ್ನು ಅನುಭವಿಸಿದೆ. ಈಗ ನನ್ನ ವ್ಯವಹಾರವು ಮತ್ತೆ ಹಳಿಗೆ ಬರುತ್ತಿದ್ದಾಗ ಮತ್ತೂಂದು ಲಾಕ್‌ಡೌನ್ ಭಯವು ರಾತ್ರಿ ಎಚ್ಚರವಾಗಿರಿಸುತ್ತದೆ. ನನಗೆ ನಿದ್ರೆ ಬರುತ್ತಿಲ್ಲ. ಭಯ ಮತ್ತು ಆತಂಕದಿಂದಾಗಿ ನನಗೆ ವಾಕರಿಕೆ ಮತ್ತು ತಲೆತಿರುಗುವಿಕೆ ಇದೆ ಎಂದು ಯುವಕನೋರ್ವ ಯುವಕ ತಿಳಿಸಿದ್ದಾನೆ.
ಸೋಂಕು ಹರಡುವಿಕೆ ಕಡಿಮೆಯಾದಾಗ ಕೊರೊನಾ ಸಂಪೂರ್ಣವಾಗಿ ಮುಗಿದೇ ಹೋಯಿತೋ ಎಂಬ ನಂಬಿಕೆ ಇತ್ತು. ಆದರೆ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದಂತೆ ಆತಂಕದ ಮಟ್ಟ ಹೆಚ್ಚುತ್ತಿದೆ. ಅನೇಕರು ತಮ್ಮ ಉದ್ಯೋಗ ವನ್ನು ಕಳೆದುಕೊಳ್ಳುತ್ತೇವೆ ಅಥವಾ ಮತ್ತೆ ಪ್ರತ್ಯೇಕವಾಗುವ ಭಯವನ್ನು ವ್ಯಕ್ತಪಡಿಸುತ್ತಿದ್ದಾರೆ.-ಡಾ| ಸಾಗರ್ ಮುಂಡಾಡಾ ಮನೋವೈದ್ಯರು, ಮುಂಬಯಿ
ನನ್ನ ರೋಗಿಗಳನ್ನು ಅಗತ್ಯವಿದ್ದಾಗ ಮಾತ್ರ ಪ್ರಯಾಣಿಸುವಂತೆ ಕೇಳಿ ಕೊಳ್ಳುತ್ತೇನೆ. ತಮ್ಮ ಪ್ರಯಾಣದ ಸಮಯದಲ್ಲಿ ಸಂಗೀತ, ಹಾಸ್ಯ ಪುಸ್ತಕ, ಕಾಮಿಡಿ ಶೋಗಳನ್ನು ನೋಡುವಂತೆ ತಿಳಿಸುತ್ತೇನೆ. ಕೊರೊನಾ ತತ್‌ಕ್ಷಣ ನಮ್ಮನ್ನು ಬಿಟ್ಟು ಹೋಗುವಂಥದ್ದಲ್ಲ. ಇದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ಏನೂ ಮಾಡಲಾಗುವುದಿಲ್ಲ. -ಡಾ| ಹರೀಶ್ ಶೆಟ್ಟಿ ಮನೋವೈದ್ಯರು, ಪೊವಾಯಿ