Advertisement

ಮೈಸೂರು: ಡಿ ಬಾಸ್ ಸಾಂಗ್ ಗೆ ಸ್ಟೆಪ್ ಹಾಕಿದ ಕೋವಿಡ್ ಸೋಂಕಿತರು

11:55 AM May 19, 2021 | Team Udayavani |

ಮೈಸೂರು: ಸೋಂಕಿತರಲ್ಲಿ ಮಾನಸಿಕವಾಗಿ ಚೇತರಿಕೆ ತರಲು ವೈದ್ಯಕೀಯ ಸಿಬ್ಬಂದಿ ಕೋವಿಡ್ ಕೇರ್ ಸೆಂಟರ್ ನಲ್ಲಿ ನೃತ್ಯ ಮಾಡಿ ರಂಜಿಸಿದ್ದಾರೆ.

Advertisement

ಮೈಸೂರಿನ ತಾಲ್ಲೂಕಿನ ವರಕೊಡು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ವೊಂದರಲ್ಲಿ ಸೋಂಕಿತರಲ್ಲಿ ಜೀವನ ಉತ್ಸಾಹವನ್ನು ತುಂಬಲು ವೈದ್ಯಕೀಯ ಸಿಬ್ಬಂದಿಗಳು ರಾಬರ್ಟ್ ಚಿತ್ರದ ‘ಕಣ್ಣು ಹೊಡಿಯಾಕ ಮೊನ್ನೆ ಕಲ್ತಿನಿ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನು ನೋಡುವ  ಸೋಂಕಿತರು ಉತ್ಸಾಹ ಭರಿತವಾಗಿ ವೈದ್ಯರೊಂದಿಗೆ ಸ್ಟೆಪ್ ಹಾಕಿದ್ದಾರೆ.

ಇದನ್ನೂ ಓದಿ : ಉಡುಪಿ : ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಸೀಜ್ ಮಾಡಿದ ಜಿಲ್ಲಾಧಿಕಾರಿ

ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಲು ವೈದ್ಯಕೀಯ ಸಮೂಹ ಈ ನಿರ್ಧಾರವನ್ನು ಕೈಗೊಂಡಿದ್ದು, ಕೋವಿಡ್ ಸೋಂಕಿನ ಭೀತಿಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next