ಲಂಡನ್: ಕೋವಿಡ್ ಕಾಲದಲ್ಲಿ ಮಕ್ಕಳ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಮಾಣ ಹೆಚ್ಚಾಗಿದೆ ಎಂದು ಬ್ರಿಟನ್‌ನ ಮಕ್ಕಳ ಆಸ್ಪತ್ರೆಯೊಂದು ಹೇಳಿದೆ. ಆರ್ಚಿವ್ಸ್ ಆಫ್ ಡಿಸೀಸ್ ಇನ್ ಚೈಲ್ಡ್‌ಹುಡ್ ನಿಯತಕಾಲಿಕೆಯಲ್ಲಿ ಈ ಕುರಿತಾದ ವರದಿ ಪ್ರಕಟವಾಗಿದೆ. ಹಿಂದಿನ ಮೂರು ವರ್ಷಗಳಿಂಗೆ ಹೋಲಿಸಿದರೆ ಲಾಕ್‌ಡೌನ್ ಅವಧಿಯ ಒಂದೇ ತಿಂಗಳಲ್ಲಿ ಮಕ್ಕಳ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಮಾಣ ಶೇ.1493ರಷ್ಟು ಏರಿಕೆಯಾಗಿದೆ.
ಮಕ್ಕಳಲ್ಲಿ ತಲೆಗೆ ಏಟು ಹೆಚ್ಚಾಗಿದ್ದು, ಹೊಡೆತ-ಬಡಿತ ಸಾಮಾನ್ಯವಾಗಿ ಕಂಡುಬಂದಿದೆ. ಮಾ.23ರಿಂದ ಎ.23ರ ಅವಧಿಯಲ್ಲಿ ಇದು ತೀವ್ರವಾಗಿ ಏರಿಕೆಯಾಗಿದ್ದು, 2017, 2018, 2019ರಲ್ಲಿ ಕಡಿಮೆಯಿತ್ತು ಎಂದು ಹೇಳಲಾಗಿದೆ.
ಮಾ.23ರಂದು ಬ್ರಿಟನ್‌ನಲ್ಲಿ ಲಾಕ್‌ಡೌನ್ ಆರಂಭಗೊಂಡಿತ್ತು. ಹತ್ತು ಮಕ್ಕಳಿಗೆ ಇಲ್ಲಿನ ಆಸ್ಪತ್ರೆಯಲ್ಲಿ ಮಾರ್ಚ್-ಎಪ್ರಿಲ್ ಅವಧಿಯಲ್ಲಿ ತಲೆಗೆ ಏಟು ಬಿದ್ದ ಕಾರಣದಿಂದ ಚಿಕಿತ್ಸೆ ನೀಡಲಾಗಿತ್ತು. ಇವರಲ್ಲಿ ಆರು ಮಂದಿ ಹುಡುಗರು ಮತ್ತು ನಾಲ್ಕು ಮಂದಿ ಹುಡುಗಿಯರು.
ಹಿಂದಿನ ವರ್ಷಗಳ ಲೆಕ್ಕಾಚಾರಕ್ಕೆ ಹೋಲಿಸಿದರೆ, 2017, 2018, 2019ರಲ್ಲಿ ಶೇ.0.67ರಷ್ಟು ಪ್ರಕರಣಗಳಿದ್ದರೆ, 2020ರಲ್ಲಿ ಇದು ಶೇ.1493ಕ್ಕೇರಿದೆ ಎಂದು ಹೇಳಲಾಗಿದೆ. ಇದರೊಂದಿಗೆ 5 ಮಕ್ಕಳು ಯಾವುದೇ ಕಾರಣವಿಲ್ಲದೆ ಅಳುವುದು 5, 4 ಮಕ್ಕಳಿಗೆ ಉಸಿರಾಟದ ತೊಂದರೆ, ಪ್ರಜ್ಞೆ ತಪ್ಪಿರುವುದು ಇತ್ಯಾದಿ ಪ್ರಕರಣಗಳೊಂದಿಗೆ 10 ಹೊಡೆತದ ಪ್ರಕರಣಗಳಲ್ಲಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲ ಮಕ್ಕಳ ದೇಹ, ತಲೆ, ಎದೆಯ ಪರೀಕ್ಷೆ, ಕಣ್ಣಿನ ಪರೀಕ್ಷೆಗಳನ್ನು ನಡೆಸಲಾಗಿದೆ. 6 ಮಕ್ಕಳ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿದೆ. ನಾಲ್ವರಲ್ಲಿ ತಲೆ ಊತ ಕಂಡುಬಂದಿದೆ. 4 ಮಂದಿಯಲ್ಲಿ ತಲೆಬುರುಡೆ ಒಡೆದಿರುವುದು ಕಂಡುಬಂದಿದೆ.
ಮೂವರಲ್ಲಿ ತಲೆಯಲ್ಲಿ ರಕ್ತ ಬಂದಿದೆ. ಇನ್ನು ಮೂವರಲ್ಲಿ ದೇಹದ ವಿವಿಧ ಭಾಗಗಳಲ್ಲಿ ಎಲುಬು ಮುರಿತ ಪ್ರಕರಣಗಳು ಕಂಡುಬಂದಿವೆ. ಗಾಯಗೊಂಡ ಮಕ್ಕಳಲ್ಲಿ ಹೆಚ್ಚಿನ ಹೆತ್ತವರು ಲಾಕ್‌ಡೌನ್ ವೇಳೆ ಆರ್ಥಿಕ, ಸಾಮಾಜಿಕ ಸಮಸ್ಯೆಗೆ ಸಿಲುಕಿರುವುದು ಗೋಚರವಾಗಿದೆ. ಇಬ್ಬರು ಹೆತ್ತವರಿಗೆ ಕ್ರಿಮಿನಲ್ ಹಿನ್ನೆಲೆ, ಇನ್ನು ಮೂವರಿಗೆ ಮಾನಸಿಕ ಸಮಸ್ಯೆ, ನಾಲ್ವರಿಗೆ ಆರ್ಥಿಕ ಮುಗ್ಗಟ್ಟು, ವರ್ತನೆಯಲ್ಲಿ ತೊಂದರೆಗಳು ಕಂಡುಬಂದಿವೆ.