Advertisement
ನಗರದ ಗೋಕುಲ ಬಡಾವಣೆ ನಿವಾಸಿ ವತ್ಸಲಾ (53) ಹಾಗೂ ತಾಲೂಕಿನ ಹಬ್ಬನಕುಪ್ಪೆಯ ವೃದ್ಧ ಸಣ್ಣತಿಮ್ಮೇಗೌಡ (80) ಮೃತ ದುರ್ದೈವಿಗಳು.
Related Articles
Advertisement
ಶಾಸಕರ ತರಾಟೆ: ಇಬ್ಬರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಪಡೆದ ಶಾಸಕ ಎಚ್.ಪಿ.ಮಂಜುನಾಥ್, ಮುಂಜಾನೆಯೇ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಶವವನ್ನು ವಿಲೇವಾರಿ ಮಾಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನಗರಸಭೆ ಪೌರಾಯುಕ್ತ ರಮೇಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, “ಶವಅಂತ್ಯಸಂಸ್ಕಾರ ಮಾಡಲು ಕೊಂಡೊಯ್ಯಲುಸಿಬ್ಬಂದಿಯನ್ನೇಕೆ ಕಳುಹಿಸಿಲ್ಲ. ಸಾವನ್ನಪ್ಪಿರುವ ಬಗ್ಗೆ ನಗರಸಭೆ ಅಧಿಕಾರಿಗಳು ದೃಢೀರಿಸಬೇಕಲ್ಲವೇ, ಇನ್ನೂ ನಿಮ್ಮ ಅಧಿಕಾರಿಗಳನ್ನು ಏಕೆ ಕಳುಹಿಸಿಲ್ಲ’ ತರಾಟೆ ತೆಗೆದುಕೊಂಡರು. ಈ ವೇಳೆ ಸಮಾಜಾಯಿಸಿ ನೀಡಿದ ಪೌರಾಯುಕ್ತರು, ನಂತರ ಸಿಬ್ಬಂದಿಗಳೊಂದಿಗೆ ಆಗಮಿಸಿ ಸೋಂಕಿತ ಮಹಿಳೆಶವವನ್ನು ಚಿರಶಾಂತಿಧಾಮಕ್ಕೆ ಕೊಂಡೊಯ್ಯಲು ಸೂಚಿಸಿದರು
ಶವ ಸಂಸ್ಕಾರ ನಡೆಸಿದ ಮುಸ್ಲಿಂ ಯುವಕರು :
ಕೋವಿಡ್ ದಿಂದ ಸಾವಿಗೀಡಾದ ಹಿನ್ನೆಲೆಯಲ್ಲಿ ಶವಸಂಸ್ಕಾರ ನಡೆಸಲು ಇಬ್ಬರ ಕಡೆಯವರು ಬಂದಿರಲಿಲ್ಲ, ವಿಷಯ ತಿಳಿದ ಶಾಸಕ ಎಚ್.ಪಿ.ಮಂಜುನಾಥ್ ಆಸ್ಪತ್ರೆ ಬಳಿಗೆ ಧಾವಿಸಿ, ತಾವೇ ಕೋವಿಡ್ ರೋಗಿಗಳಿಗೆ ಅನುಕೂಲಕ್ಕಾಗಿ ನಿಯೋಜಿಸಿರುವ ಸ್ನೇಹಜೀವಿ ಬಳಗದ ಉಚಿತ ಆ್ಯಂಬ್ಯುಲೆನ್ಸ್ ಮೂಲಕ ಚಾಲಕ ಖಾಸಿಫ್‌ಖಾನ್, ಅಬ್ರಾರ್ ಹಾಗೂ ಇಫ್ತಾರ್‌ನನ್ನು ಕಳುಹಿಸಿಕೊಟ್ಟರು. ಇವರು ಪಿಪಿಟಿ ಕಿಟ್ ಧರಿಸಿ ಸಣ್ಣತಿಮ್ಮೇಗೌಡರ ಶವವನ್ನು ತಾಲೂಕಿನ ಹನಗೋಡು ಹೋಬಳಿಯ ಹಬ್ಬನಕುಪ್ಪೆಗೆ ಕೊಂಡೊಯ್ದು, ಅವರ ಕುಟುಂಬದವರ ಸಮ್ಮುಖದಲ್ಲಿ ತಾವೇ ಶವ ಸಂಸ್ಕಾರ ನಡೆಸುವ ಮೂಲಕ ಮಾನವೀಯತೆ ಮೆರೆದರು.
ಇವರ ಸೇವೆಯನ್ನು ಗ್ರಾಮಸ್ಥರು ಸ್ಮರಿಸಿದರು. ಶಾಸಕರು ಸಹ ಸ್ನೇಹಜೀವಿ ಬಳಗದ ಕಾರ್ಯವನ್ನು ಪ್ರಶಂಸಿಸಿದರು. ಹುಣಸೂರಿನ ವತ್ಸಲ ಅವರ ಶವವನ್ನು ನಗರಸಭೆಯ ಸಿಬ್ಬಂದಿ ಶವ ಸಾಗಿಸುವ ವಾಹನದ ಮೂಲಕ ಬೈಪಾಸ್ ರಸ್ತೆಯ ಸ್ಮಶಾನಕ್ಕೆ ಕೊಂಡೊಯ್ದು ಕುಟುಂಬದವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಿದರು.