Advertisement

ಹೈದರಾಬಾದ್‌ ನ 85 ವರ್ಷದಷ್ಟು ಹಳೇ ಟಾಕೀಸ್‌ ಕಗ್ಗತ್ತಲೆಗೆ!

10:40 PM Feb 07, 2021 | Team Udayavani |

ಹೈದರಾಬಾದ್‌: ಕೊರೊನಾ ಲಾಕ್‌ಡೌನ್‌ ದೇಶದ ಹಲವು ಚಿತ್ರಮಂದಿರಗಳನ್ನು ಕಗ್ಗತ್ತಲೆಗೆ ತಳ್ಳಿದ್ದು, “ಮುತ್ತಿನ ನಗರಿ’ಯ 85 ವರ್ಷದಷ್ಟು ಹಳೇ ಟಾಕೀಸ್‌ “ಯಾಕೂತ್‌ ಮಹಲ್‌’ ಕೂಡ ಚಿಂತಾಜನಕ ಸ್ಥಿತಿ ತಲುಪಿದೆ.

Advertisement

ಶೇ.100 ಪ್ರೇಕ್ಷಕರೊಂದಿಗೆ ಸಿನಿಮಾ ಪ್ರದರ್ಶನಕ್ಕೆ ಸರ್ಕಾರ ಸಮ್ಮತಿ ನೀಡಿದ್ದಾಗ್ಯೂ ಟಾಕೀಸ್‌ಗೆ ತೀವ್ರ ಆರ್ಥಿಕ ಬಿಕ್ಕಟ್ಟಿನ ಸಿಡಿಲು ಬಡಿದಿದೆ. ಆರ್ಥಿಕ ಪ್ಯಾಕೇಜ್‌ ಘೋಷಿಸಿದರಷ್ಟೇ ಚಿತ್ರಮಂದಿರ ತೆರೆಯಲು ಸಾಧ್ಯ ಎನ್ನುವ ಮಟ್ಟಕ್ಕೆ ದಯನೀಯ ಸ್ಥಿತಿ ತಲುಪಿದೆ.

ಟಾಕೀಸಿನ 10 ಸಿಬ್ಬಂದಿ ಸಂಬಳ ಕಾಣದೆ ವರುಷ ಕಾಣುತ್ತಿದ್ದಾರೆ. 1927ರಲ್ಲಿ ಚಿಕಾಗೊದಿಂದ ಆಮದುಗೊಂಡ ಪ್ರೊಜೆಕ್ಟರ್‌ ಬಳಸುತ್ತಿದ್ದ, 2 ವರ್ಷದ ಹಿಂದಷ್ಟೇ ರೀಲ್‌ನಿಂದ ಡಿಜಿಟಲ್‌ ವ್ಯವಸ್ಥೆಗೆ ಮಾರ್ಪಾಡಾಗಿದ್ದ ಈ ಟಾಕೀಸ್ ನಲ್ಲಿ ಹಿಂದಿ, ತೆಲುಗು ಚಿತ್ರರಂಗದ ನೂರಾರು ಚಿತ್ರಗಳು ಶತದಿನಗಳನ್ನು ಆಚರಿಸಿಕೊಂಡಿವೆ.

ಇದನ್ನೂ ಓದಿ:ಉಗ್ರರಿಗೆ ಆರ್ಥಿಕ ನೆರವು ಆರೋಪ : ಉಗ್ರ ಹಫೀಜ್‌ಗೆ ಜಾಮೀನು ರಹಿತ ಬಂಧನ ವಾರೆಂಟ್‌

Advertisement

Udayavani is now on Telegram. Click here to join our channel and stay updated with the latest news.

Next