Advertisement

ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 43 ಮಂದಿ ಮಾತ್ರ!

08:50 PM Nov 08, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಕಡಿಮೆಯಾಗುತ್ತಿದ್ದು, ಭಾನುವಾರ 10 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 19 ಮಂದಿ ಗುಣಮುಖರಾಗಿದ್ದಾರೆ.144 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 43 ಮಂದಿ ಮಾತ್ರ!

Advertisement

ಇದುವರೆಗೆ ಒಟ್ಟು 6109 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ 5838 ಮಂದಿ ಗುಣಮುಖರಾಗಿದ್ದಾರೆ. 127 ಮಂದಿ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಭಾನುವಾರ 924 ಮಾದರಿಗಳನ್ನು ಪರೀಕ್ಷಿಸಲಾಯಿತು.

ಚಿಕಿತ್ಸೆ ಪಡೆಯುತ್ತಿರುವವರ ವಿವರ: ಚಿಕಿತ್ಸೆ ಪಡೆಯುತ್ತಿರುವ ಸಕ್ರಿಯ 144 ಪ್ರಕರಣಗಳಲ್ಲಿ 17 ಮಂದಿ ಐಸಿಯುನಲ್ಲಿದ್ದಾರೆ. 10 ಮಂದಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತೆಮರಹಳ್ಳಿ ಕೋವಿಡ್ ಕೇರ್ ಸೆಂಟರ್‌ನಲ್ಲಿ 9 ಮಂದಿ, ಗುಂಡ್ಲುಪೇಟೆ ಸಿಸಿಸಿಯಲ್ಲಿ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 101 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.

ಚಾ.ನಗರ ತಾಲೂಕಿನಿಂದ ಯಾವುದೇ ಪ್ರಕರಣ ಇಲ್ಲ!: ಹಲವು ದಿನಗಳಿಂದ ಜಿಲ್ಲೆಗಳ ನಾಲ್ಕು ತಾಲೂಕುಗಳ ಪೈಕಿ ಹೆಚ್ಚಿನ ಪ್ರಕರಣಗಳು ಇರುತ್ತಿದ್ದ ಚಾ.ನಗರ ತಾಲೂಕಿನಿಂದ ಭಾನುವಾರ ಯಾವುದೇ ಪ್ರಕರಣ ವರದಿಯಾಗಿಲ್ಲ. ಗುಂಡ್ಲುಪೇಟೆ ತಾಲೂಕಿನಿಂದ 7, ಕೊಳ್ಳೇಗಾಲ ತಾಲೂಕಿನಿಂದ 2, ಹನೂರು ತಾಲೂಕಿನಿಂದ 1 ಪ್ರಕರಣ ವರದಿಯಾಗಿದೆ. ಯಳಂದೂರು ತಾಲೂಕಿನಿಂದಲೂ ಯಾವುದೇ ಪ್ರಕರಣ ಇಲ್ಲ.

ಇಂದಿನ ಪ್ರಕರಣಗಳು: 10
ಇಂದು ಗುಣಮುಖ: 19
ಒಟ್ಟು ಗುಣಮುಖ: 5838
ಇಂದಿನ ಸಾವು: 00
ಒಟ್ಟು ಸಾವು: 127
ಸಕ್ರಿಯ ಪ್ರಕರಣಗಳು: 144
ಒಟ್ಟು ಸೋಂಕಿತರು: 6109

Advertisement
Advertisement

Udayavani is now on Telegram. Click here to join our channel and stay updated with the latest news.

Next