ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ನೆರವಾಗಲು ಕೊಪ್ಪಳ ಶ್ರೀ ಗವಿಮಠವು ಜಿಲ್ಲಾಡಳಿತದ ಸಹಕಾರದೊಂದಿಗೆ 100 ಆಕ್ಸಿಜನ್ ಬೆಡ್‌ಗಳ ಕೋವಿಡ್ ಆಸ್ಪತ್ರೆಯನ್ನು ಸಿದ್ದಗೊಳಿಸಿ ಮಂಗಳವಾರ ಉದ್ಘಾಟನೆ ಮಾಡಲಾಯಿತು.
ಗವಿಮಠದ ವೃದ್ಧಾಶ್ರಮದಲ್ಲಿ 100 ಆಕ್ಸಿಜನ್ ಬೆಡ್‌ಗಳ ಕೋವಿಡ್ ಆಸ್ಪತ್ರೆಯನ್ನು ಸಿದ್ದಗೊಳಿಸಲಾಗಿದ್ದು
ಮಠವೇ ಮಂಚ, ಬೆಡ್ ಸೇರಿದಂತೆ ಸೋಂಕಿತರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲಿದೆ. ಜೊತೆಗೆ ಪ್ರಸಾದ ವ್ಯವಸ್ಥೆಯ ನಿರ್ವಹಣೆಯನ್ನು ಹೊತ್ತಿದೆ.
ಅಲ್ಲದೆ ಮಠದ ಆರ್ಯುವೇದ ಆಸ್ಪತ್ರೆಯ ವೈದ್ಯರನ್ನು ಈ ಆಸ್ಪತ್ರೆಗೆ ನಿಯೋಜಿಸಿದೆ. ಜಿಲ್ಲಾಡಳಿತವೂ ಇದಕ್ಕೆ ಸಹಕಾರ ನೀಡಿದ್ದು ಆಕ್ಸಿಜನ್ ಅಳವಡಿಕೆಯ ಜವಬ್ದಾರಿ ನಿರ್ವಹಿಸಿದೆ. ಈಗಾಗಲೆ 100 ಬೆಡ್ ಸಿದ್ದವಾಗಿದ್ದು ಇಂದು ಸಂಜೆ ಗವಿಸಿದ್ದೇಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಕೋವಿಡ್ ಆಸ್ಪತ್ರೆಯನ್ನು ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ ಡಾ. ಮಹೇಶ ಅವರ ಮೂಲಕ ಆಸ್ಪತ್ರೆಯನ್ನು ಉದ್ಘಾಟಿಸಿದರು.
ಇದನ್ನೂ ಓದಿ :ಕೋವಿಡ್ ನಿಯಂತ್ರಿಸುವಲ್ಲಿ ವಿಫಲ : ಪಿಎಂ – ಸಿಎಂ ರಾಜೀನಾಮೆಗೆ ರಾಮಲಿಂಗಾರೆಡ್ಡಿ ಒತ್ತಾಯ
ಈ ವೇಳೆ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕರಾದ ಅಮರೆಗೌಡ ಬಯ್ಯಾಪೂರ, ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ ಅವರು ಪಾಲ್ಗೊಂಡಿದ್ದರಲ್ಲದೇ ಶ್ರೀಗಳ ಕಾರ್ಯದ ಕುರಿತು ಗುಣಗಾನ ಮಾಡಿದರು. ಆಸ್ಪತ್ರೆಯ ವಾತಾವರಣದ ಕುರಿತಂತೆಯೂ ಶ್ಲಾಘೀಸಿದರು.