ಆನೇಕಲ್: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಗಡಿಭಾಗಗಳಲ್ಲಿಹೊರರಾಜ್ಯದಿಂದ ಬರುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಜನ ಜಾಗೃತರಾಗಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.
ರಾಜ್ಯದ ಗಡಿ ಅತ್ತಿಬೆಲೆ ಚೆಕ್‌ಪೋಸ್ಟ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಗೆಹೊಂದಿಕೊಂಡು ತಮಿಳುನಾಡು ಗಡಿ ಇದೆ,ಮಹಾರಾಷ್ಟ್ರ, ಕೇರಳ ಭಾಗದಿಂದ ಗಡಿ ಮೂಲಕ ಕರ್ನಾಟಕಕ್ಕೆ ವಾಹನಗಳು ಬರುತ್ತವೆ. ಅವುಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಕೋವಿಡ್ ಪರೀಕ್ಷಾ ವರದಿ ತರುತ್ತಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ಚೆಕ್‌ಪೋಸ್ಟ್‌ನಲ್ಲಿ ನಿಗಾವಹಿಸಲಾಗಿದೆ ಎಂದು ವಿವರಿಸಿದರು.
ವರದಿ ತರದ ವಾಹನ ವಾಪಸ್: ಮಾ.21ರಿಂದ ನಿರಂತರವಾಗಿ ಗಡಿಯಲ್ಲಿ ತಪಾಸಣೆ ನಡೆಯುತ್ತಿದೆ,ಇದುವರೆಗೆ ಕೇರಳದಿಂದ ಬಂದ 1326 ವಾಹನತಪಾಸಣೆ ಮಾಡಿದ್ದೇವೆ, ಕೊರೊನಾ ನೆಗೆಟಿವ್ ವರದಿತರದ್ದಕ್ಕೆ 59 ವಾಹನ ವಾಪಸ್ ಕಳುಹಿಸಲಾಗಿದೆ,ಮಹಾರಾಷ್ಟ್ರದಿಂದ ಬಂದ 277 ವಾಹನ ತಪಾಸಣೆಗೆಒಳಪಡಿಸಲಾಗಿದೆ, ಇದರಲ್ಲಿ 25 ವಾಹನ ವಾಪಸ್‌ಕಳುಹಿಸಲಾಗಿದೆ ಎಂದು ಹೇಳಿದರು.
ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ: ಅತ್ತಿಬೆಲೆ ಗಡಿಯಲ್ಲಿ ಇರುವ ಚೆಕ್‌ಪೋಸ್ಟ್ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಹೊರ ರಾಜ್ಯದಿಂದ ಬರುವ ಜನರು ಸೋಂಕಿತರಾಗಿದ್ದರೆ ಅವರಿಂದ ಸ್ಥಳೀಯರಿಗೆ ಕೋವಿಡ್ ಹರಡಬಾರದು ಎನ್ನುವ ನಿಟ್ಟಿನಲ್ಲಿಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಆನೇಕಲ್‌ನಲ್ಲಿ ನಾರಾಯಣ ಆಸ್ಪತ್ರೆ ಇದ್ದು, ಒಂದು ವೇಳೆ ಇಲ್ಲಿಗೆಬರುವವರು ಯಾರಾದರೂ ಇದ್ದರೆ ಅವರು ರಿಪೋರ್ಟ್ ತರದಿದ್ದರೆ ಅವರನ್ನು ಗಡಿಚೆಕ್ ಪೋಸ್ಟ್‌ಬಳಿ ಕೋವಿಡ್ ಟೆಸ್ಟ್ ಮಾಡಿಸಿ ನಂತರ ಒಳಗೆ ಕಳುಹಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ಉಪವಿಭಾಗಾಧಿಕಾರಿ ಶಿವಣ್ಣ,ತಹಶೀಲ್ದಾರ್ ದಿನೇಶ್, ಜಿಲ್ಲಾ ಆರೋಗ್ಯಾಧಿಕಾರಿಶ್ರೀನಿವಾಸ್, ತಾಲೂಕು ಅಧಿಕಾರಿ ವಿನಯ್,ಅತ್ತಿಬೆಲೆವೃತ್ತ ನಿರೀಕ್ಷಕ ಕೆ. ವಿಶ್ವನಾಥ್, ಜಿಪಂ ಸದಸ್ಯ ನಾಗೇಶ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.