Advertisement

ಕೋವಿಡ್‌-19 ಹೆಲ್ತ್‌ ಕೇರ್‌ ಸೆಂಟರ್‌ಗೆ ಚಾಲನೆ

04:24 PM Aug 21, 2020 | Suhan S |

ಕುಷ್ಟಗಿ: ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಸಕಾಲಿಕ ಚಿಕಿತ್ಸೆಗೆ ಪ್ರತ್ಯೇಕವಾಗಿ 42 ಹಾಸಿಗೆಯ ಕೋವಿಡ್ ಲಕ್ಷಣ, ಸೌಮ್ಯ ಪ್ರಕರಣಗಳಿಗೆ ಡೆಡಿಕೇಟೆಡ್‌ ಕೋವಿಡ್‌ ಹೆಲ್ತ್‌ ಕೇರ್‌ ಸೆಂಟರ್‌ (ಡಿ.ಸಿ.ಎಚ್‌ .ಸಿ.ಸಿ.) ಸೇವೆಗೆ ತಹಶೀಲ್ದಾರ್‌ ಎಂ.ಸಿದ್ದೇಶ ಚಾಲನೆ ನೀಡಿದರು.

Advertisement

ಈ ಕುರಿತು ಮಾತನಾಡಿದ ಅವರು, ತಾಲೂಕಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ನಿರ್ಲಕ್ಷé ವಹಿಸುವುದರಿಂದ ಕೋವಿಡ್ ಪ್ರಕರಗಳು ಹೆಚ್ಚುತ್ತಿವೆ. ತಾಲೂಕಿನಲ್ಲಿ ಪ್ರಕರಣಗಳು ಹೆಚ್ಚಿದ್ದರೂ, ಈ ಬಗ್ಗೆ ಜಾಗೃತಿ ಮೂಡಿಸಿದರೂ ಜನ ಕೋವಿಡ್ ಭಯವಿಲ್ಲದಂತೆ ವರ್ತಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು, ರೋಗ ಬರದಂತೆ ನಿಗಾವಹಿಸಬೇಕು. ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 42 ಹಾಸಿಗೆ ಸಾಮಾರ್ಥ್ಯದ ಕೋವಿಡ್ ಲಕ್ಷಣ ಪ್ರಕರಣಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದಕ್ಕಿಂತ ಗಂಭೀರ ಪ್ರಕರಣಗಳಿದ್ದರೆ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ಹನುಮಸಾಗರ ರಸ್ತೆಯ ವಸತಿ ನಿಲಯದಲ್ಲಿ ಲಕ್ಷಣ ರಹಿತರಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಲಾಗಿದೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ| ಆನಂದ ಗೋಟೂರು, ಹಿರಿಯ ವೈದ್ಯಾಧಿಕಾರಿ ಡಾ| ಕೆ.ಎಸ್‌. ರಡ್ಡಿ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಚಂದ್ರಕಾಂತ ಮಂತ್ರಿ, ಬಾಲಜಿ ಬಳಿಗಾರ ಮತ್ತಿತರಿದ್ದರು.

26 ಪ್ರಕರಣಗಳು: ಕುಷ್ಟಗಿ ತಾಲೂಕಿನಲ್ಲಿ ಗುರುವಾರ 26 ಕೋವಿಡ್ ಪ್ರಕರಣ ದೃಢವಾಗಿವೆ. ಇದರಲ್ಲಿ 15 ಜನ ಕುಷ್ಟಗಿ ಪಟ್ಟಣದವರಾಗಿದ್ದು, ಹನುಮಸಾರ-2, ಚಳಗೇರಿ-3, ಹೂಲಗೇರಾ-2, ತಾವರಗೇರಾ-3 ಪ್ರಕರಣಗಳಾಗಿವೆ. ಬಹುತೇಕ ಸೋಂಕಿನ ಪ್ರಕರಣಗಳು ಹೋಮ್‌ ಐಸೋಲೇಷನ್‌ನಲ್ಲಿ ಚಿಕಿತ್ಸೆಗೆ ಇಚ್ಛಿಸುತ್ತಿರುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ| ಆನಂದ ಗೋಟೂರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next