Advertisement

ಅನಾನಸ್‌ ಬೆಳೆಗಾರರಿಗೆ ಕೋವಿಡ್ ಸಂಕಷ್ಟ

06:48 PM Apr 21, 2021 | Team Udayavani |

ಶಿರಸಿ: ಅಂತೂ ಇಂತು ಚೇತರಿಕೆಯಲ್ಲಿದ್ದ ಅನಾನಸ್‌ ಬೆಳೆಗಾರರಿಗೆ ಕೋವಿಡ್ ಎರಡನೇ ಹಂತದಅಲೆ ಮತ್ತೆ ಸಂದಿಗ್ಧಕ್ಕೆ ದೂಡುತ್ತಿದೆ. ಬನವಾಸಿರಾಣಿ ಎಂದರೆ ದೆಹಲಿಗರಿಗೆ ಪ್ರಿಯವಾಗಿದ್ದಅನಾನಸ್‌ ಈಗ ಕೋವಿಡ್ ಕಾರಣದಿಂದಅದರ ಬೆಳೆಗಾರರನ್ನು ಬಾಣಲೆಯಿಂದ ಬೆಂಕಿಗೆ ಬೀಳಿಸಿದೆ.

Advertisement

ಕಳೆದ ವರ್ಷ ಅನಾನಸ್‌ ಬೆಳೆ ಕೈಗೆ ಬರುವ ಹೊತ್ತಿಗೆ ಕೋವಿಡ್ ಲಾಕ್‌ಡೌನ್‌ನಿಂದ ಬೆಳೆಯೆಲ್ಲಕೃಷಿಭೂಮಿಯಲ್ಲೇ ಕೊಳೆತು ಹಾನಿಯಾಗುವಂತೆಆಗಿತ್ತು. ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಟಾರ್‌ 8 ರೂ. ಕೆಜಿಯಂತೆ ಖರೀದಿಸಿ ಕ್ಷೇತ್ರದಜನರಿಗೆ ಹಂಚಿಕೆ ಮಾಡಿದ್ದರು. ಈಗಲೂ 2020ರ ಮಾರ್ಚ್‌ ಕೊನೆಯ ಸಂಕಷ್ಟ ಈ ವರ್ಷ ಎಪ್ರಿಲ್‌ ನಡುಗೆ ತಂದು ನಿಲ್ಲಿಸುವಂತಾಗಿದೆ.

ತಾಲೂಕಿನ ಅರೆಬಯಲುಸೀಮೆ ಪ್ರದೇಶವಾದ ಬನವಾಸಿ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಅನಾನಸ್‌ಬೆಳೆ ದೆಹಲಿ ಮಾರುಕಟ್ಟೆಯನ್ನೇ ಅವಲಂಭಿಸಿದೆ. ಈಗ ಅಲ್ಲಿ ಲಾಕ್‌ಡೌನ್‌, ಕೊರೊನಾ ಕಾರಣದಿಂದಮಂಗಲ ಕಾರ್ಯ ಆಗದೇ ಇರುವದು, ರಸ್ತೆಪಕ್ಕದಲ್ಲಿ ಅನಾನಸ್‌ ಲೇಸ್‌, ಜ್ಯೂಸ್‌ಗಳಿಗೂಅಪಾರ ಬೇಡಿಕೆ ಇತ್ತು. ಅಲ್ಲಿ ಬೇಡಿಕೆ ಕುಂಠಿತಆಗಿದ್ದರಿಂದ ಇಲ್ಲೂ ಕಳೆದ ವಾರದಿಂದ ಬೆಲೆಇಳಿಮುಖದತ್ತ ಸಾಗಿದೆ. ಇದರಿಂದ ಬೆಳೆ ಕೊಯ್ಲುಮಾಡಬೇಕಾದ ಬೆಳೆಗಾರರು ಸಂಕಷ್ಟದ ಫಜೀತಿಗೆ ಬಿದ್ದಿದ್ದಾರೆ. ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಹೆಕ್ಟೇರ್‌ಪ್ರದೇಶದಲ್ಲಿ ಅನಾನಸ್‌ ಬೆಳೆಯಲಾಗುತ್ತದೆ.ಅದರಲ್ಲಿ ಹೆಚ್ಚಿನ ಬೆಳೆ ದೆಹಲಿ ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತದೆ. ಆದರೆ ದಿಲ್ಲಿಯಲ್ಲಿ ಕೋವಿಡ್ ಹೆಚ್ಚಳವಾದ ಕಾರಣದಿಂದ ಬೇಡಿಕೆ ತಗ್ಗಿದೆ.

ಲಕ್ಷಾಂತರ ರೂ.ಖರ್ಚು ಮಾಡಿ ಅನಾನಸ್‌ ಬೆಳೆದಿದ್ದ ರೈತರಿಗೆ ಕಳೆದ ವರ್ಷ ದೊಡ್ಡ ಪಮಾಣದಲ್ಲಿ ಏಟಾಗಿದೆ. ಕಳೆದ ಮಾರ್ಚ್‌ ತಿಂಗಳಲ್ಲಿ ಅನಾನಸ್‌ ಕೆಜಿಗೆ 12-16 ರೂ.ಇತ್ತು. ನಂತರ ಏಪ್ರಿಲ್‌ ತಿಂಗಳಆರಂಭದಲ್ಲಿ 20-22 ರೂ. ವರೆಗೆ ಏರಿಕೆಯಾಗಿತ್ತು. ಆದರೀಗ ಕಳೆದ ವಾರದಿಂದ ಈಚೆಗೆ 8-10ರೂ.ವರೆಗೆ ಬೆಲೆ ಇಳಿಕೆಯಾಗಿದ್ದು ವಾಸ್ತವಿಕವಾಗಿದೆ.ಇತ್ತ ಕಾಮಧೇನುವಿನಂಥ ಫ್ಯಾಕ್ಟರಿಗಳು ನೆರವಿಗೆ ಬಂದರೂ ಅದನ್ನು ಪುನಃ ಮಾರುಕಟ್ಟೆ ಮಾಡುವುದೂದೊಡ್ಡ ಸವಾಲೇ ಆಗಿವೆ ಎಂಬುದೂ ಸುಳ್ಳಲ್ಲ. ಜನ ಕೂಡ ಹಣ್ಣನ್ನೇ ಕೋಯ್ದು ತಿನ್ನುವ ರೂಢಿ ಪಲ್‌ ಗಳಿಗಿಂತ ಹೆಚ್ಚು ಇಷ್ಟ ಪಡುತ್ತಾರೆ ಎಂಬುದು ನಿಜ ಸಂಗತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next