Advertisement
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ 125 ಸಿಬಂದಿಯನ್ನು ಕೋವಿಡ್ ಮಾರ್ಷಲ್‌ಗಳ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಎ. 10ರಿಂದ ಅವರು ಕಾರ್ಯ ನಿರ್ವಹಣೆ ಮಾಡು ತ್ತಿದ್ದಾರೆ. ಮಂಗಳೂರು ನಗರದಲ್ಲಿ 60 ಮಂದಿ ಮಾರ್ಷಲ್‌ಗಳು ಬಸ್, ಬಸ್ ನಿಲ್ದಾಣ, ಮಾಲ್, ಮಾರ್ಕೆಟ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Related Articles
Advertisement
ದಂಡ ವಿಧಿಸುವ ಅಧಿಕಾರವಿಲ್ಲಕೋವಿಡ್ ಮಾರ್ಷಲ್‌ಗಳಿಗೆ ದಂಡ ವಿಧಿಸುವ ಅಧಿಕಾರವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ನಿಯಮ ಪಾಲನೆಯನ್ನು ಖಾತರಿ ಪಡಿಸಲು ತೆರಳುವ ಆರೋಗ್ಯ ಕಾರ್ಯಕರ್ತರು ಅಥವಾ ಬಿಲ್ ಕಲೆಕ್ಟರ್‌ಗಳ ಜತೆ ತೆರಳಿ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ನಿಯಮ ಉಲ್ಲಂಘನೆಗೆ ಸಂಬಂಧಿಸಿ ಫೋಟೋ, ವೀಡಿಯೋ ಮಾಡುವುದು, ಅಗತ್ಯ ಬಿದ್ದರೆ ರಕ್ಷಣೆ ಒದಗಿಸುವುದು ಇತ್ಯಾದಿ ಕರ್ತವ್ಯಗಳನ್ನು ಅವರು ನಿರ್ವಹಿಸುತ್ತಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಉದಯವಾಣಿಗೆ ತಿಳಿಸಿದ್ದಾರೆ. ಜಾಗೃತಿ ಕಾರ್ಯ
ಕೊರೊನಾ ಸಾಂಕ್ರಾಮಿಕ ರೋಗದ 2ನೇ ಅಲೆ ಪ್ರಸರಣ ಆಗುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಕಠಿನ ಕ್ರಮಗಳನ್ನು ಅನುಸರಿಸುತ್ತಿದ್ದು, ಜನರು ನಿಯಮಗಳ ಪಾಲನೆ ಮಾಡುವುದನ್ನು ಖಾತರಿ ಪಡಿಸಲು ಜಿಲ್ಲಾಡಳಿತವು ಗೃಹ ರಕ್ಷಕರನ್ನು ಕೋವಿಡ್ ಮಾರ್ಷಲ್‌ಗಳನ್ನು ನಿಯೋಜಿಸಿದೆ. ಜನ ಸಂದಣಿ ಇರುವ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಬಸ್‌ಗಳು, ರೈಲು ನಿಲ್ದಾಣ, ಮಾಲ್‌ಗಳು, ಕಲ್ಯಾಣ ಮಂಟಪ ಮತ್ತಿತರ ಸಭಾಂಗಣಗಳಿಗೆ ಆರೋಗ್ಯ ಕಾರ್ಯಕರ್ತರ ಜತೆ ಈ ಮಾರ್ಷಲ್‌ಗಳು ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ನಿಯಮ ಪಾಲಿಸುವಂತೆ ಮನ ಒಲಿಸುವ ಕೆಲಸ ಮಾಡುತ್ತಿದ್ದಾರೆ. -ಡಾ| ಮುರಲಿ ಮೋಹನ್ ಚೂಂತಾರು, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್