ಗಣೇಶ ಹಬ್ಬದಲ್ಲಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಸಾವಿರಾರು ಕುಂಬಾರ ಜನಾಂಗದ ಕುಟುಂಬಗಳ ಬದುಕು ಇಂದು ಅತಂತ್ರವಾಗಿದೆ. ದೊಡ್ಡ ಗಣೇಶ ಮೂರ್ತಿ ಮಾರಾಟವಿಲ್ಲ. ಮಾಡಿರುವ ಗಣೇಶ ಮೂರ್ತಿಗಳನ್ನುಖರೀದಿಸುವವರೇ ಇಲ್ಲ. ನಮ್ಮ ಕಷ್ಟ ಕೇಳ್ಳೋರ್ಯಾರು ಸ್ವಾಮಿ ಎಂದು ನೊಂದು ನುಡಿಯುತ್ತಿದ್ದಾರೆ ಗಣೇಶ ತಯಾರಕರು.
Advertisement
ತುಮಕೂರು: ದೇಶವನ್ನು ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಬಿಡಿಸಲು ಯುವರಕನ್ನು ಒಂದುಗೂಡಿಸಿ ಸ್ವಾತಂತ್ರ್ಯಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಭ್ರಮದ ಗಣೇಶೋತ್ಸವಕ್ಕೆಈ ವರ್ಷವೂ ಕೋವಿಡ್ ಭೀತಿ ಆವರಿಸಿದೆ.
ಯುವಕ- ಯುವತಿಯರ ಅಚ್ಚುಮೆಚ್ಚಿನ ಹಬ್ಬ. ಪ್ರತಿವರ್ಷ ಗಣೇಶೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಸಿದ್ದತೆ ಮಾಡುತ್ತಾರೆ.
ನಗರದಿಂದ ಹಿಡಿದು ಹಳ್ಳಿಯವರೆಗೆ ಎಲ್ಲ ಕಡೆ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತವೆ. ನಗರದಲ್ಲಿ ಪ್ರತಿ ಬೀದಿ ಬೀದಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ಭವ್ಯ ಮೆರವಣಿಗೆ ಮಾಡಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದು. ಅನಾದಿ ಕಾಲದಿಂದಲೂ
ಸಾಂಪ್ರದಾಯಕವಾಗಿ ನಡೆದು ಕೊಂಡು ಬಂದಿದೆ. ಗಣೇಶ ಹಬ್ಬದಲ್ಲಿ ಸಾವಿರಾರು ಗಣೇಶ ಮೂರ್ತಿಗಳ ಮಾರಾಟ ನಡೆಯುತ್ತದೆ. ಈ ಹಬ್ಬಕ್ಕಾಗಿಯೇ ಗಣೇಶನ ಮೂರ್ತಿ ತಯಾರಕರು ಹತ್ತು ತಿಂಗಳಿನಿಂದ ಬಗೆಬಗೆಯ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುತ್ತಾರೆ. ಕೋವಿಡ್ ಕರಿನೆರಳು: ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇರುವ ಹಿನ್ನೆಲೆ ಗಣೇಶ ಮೂರ್ತಿ ತಯಾರಕರು ಹೆಚ್ಚು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಗೆ ಒತ್ತು ನೀಡುತ್ತಿದ್ದಾರೆ. ಈ ವರ್ಷ ಗಣೇಶ ಹಬ್ಬಕ್ಕೆ ಇನ್ನೂ ಎರಡು ವಾರ ಬಾಕಿ ಇದೆ. ಇಡೀ ವಿಶ್ವದಲ್ಲಿ ತನ್ನ ಕಬಂದಬಾಹುವನ್ನು ಚಾಚಿರುವ ಕೋವಿಡ್ ಮಹಾ ಮಾರಿಯ ಎರಡನೇ ಅಲೆ ಕಡಿಮೆಯಾಗಿದೆ. ಆದರೆ, ಮೂರನೇ ಅಲೆ ಬರುತ್ತದೆ ಎನ್ನುವ ಆತಂಕ ಎದುರಾಗಿ ರುವ ಹಿನ್ನೆಲೆ ಈ ಬಾರಿಯ ಗಣೇಶೋತ್ಸವದ ಮೇಲೆಯೂ ಕೊರೊನಾ ತನ್ನಕರಿನೆರಳುಬೀರಿದೆ. ಗೌರಿ ಗಣೇಶನ ಹಬ್ಬ ಹತ್ತಿರ ಬರುತ್ತಿದಂತೆ ಕಲ್ಪತರು ನಾಡಿನ ಪ್ರಮುಖ ರಸ್ತೆಗಳಲ್ಲಿ ವಿವಿಧ ರೀತಿಯ ಗಣೇಶ
ಮೂರ್ತಿಗಳು, ಚಿಕ್ಕ ಗಣೇಶನಿಂದ ಹಿಡಿದು ಬೃಹತ್ ಗಾತ್ರದ ಗಣೇಶನವರೆಗೆ ಮಾರಾಟಕ್ಕೆ ಮಾರುಕಟ್ಟೆಗೆ ಬರುತ್ತಿದ್ದವು. ಆದರೆ, ಈ ಬಾರಿ ನಿರೀಕ್ಷಿತ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿಲ್ಲ. ಕುಲಕಸಬುದಾರರ ಸಂಕಷ್ಟ: ಈ ಬಾರಿ ಕೊರೊನಾ ನಡುವೆಯೇ ತಮ್ಮ ಕುಲಕಸಬನ್ನು ನಂಬಿರುವ ಅನೇಕ ಕುಂಬಾರಕುಟುಂಬಗಳುಕಳೆದಹತ್ತು ತಿಂಗಳಿನಿಂದ ಗಣೇಶ ಹಬ್ಬಕ್ಕಾಗಿ ಬಗೆಬಗೆಯ ಗಣೇಶ ವಿಗ್ರಹಗಳನ್ನು ತಯಾರಿಸಿ ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಗಣೇಶ ಹಬ್ಬದಲ್ಲಿ ಗಣೇಶ ಮಾರಾಟಕ್ಕೊಕೋವಿಡ್ ಅಡ್ಡಿಯಾಗಿದೆ.
ಸಿದ್ಧವಾಗಿರುವ ಗಣೇಶ ಮೂರ್ತಿಗಳನ್ನು ಸಾರಾಸಗಟಾಗಿ ಖರೀದಿ ಮಾಡಲು ಯಾರೂ ಬರುತ್ತಿಲ್ಲ. ನಮ್ಮ ಕಷ್ಟ ಯಾರಿಗೆ ಹೇಳುವುದು ಎನ್ನುತ್ತಿದ್ದಾರೆ ಗಣೇಶ ಮೂರ್ತಿ ತಯಾರಕರ ಸಂಘದ ಉಪಾಧ್ಯಕ್ಷ ಮಧುಗಿರಿ ತಾಲೂಕಿನ ಗಮಕಾರನ ಹಳ್ಳಿಟಿ.ಎಚ್.ಮೋಹನ್‌ಕುಮಾರ್.
Related Articles
Advertisement
ಡೀಸಿಗೆ ಮನವಿಸೆ.9, 10ರಂದು ಗೌರಿ-ಗಣೇಶ ಹಬ್ಬ ಇರುವುದ ರಿಂದ ಸಾವಿರಾರು ಕುಶಲ ಕರ್ಮಿಗಳು ವೃತ್ತಿ ನಿರತರ ಕುಟುಂಬಗಳು ಕಳೆದ 10 ತಿಂಗಳಿಂದ ಹಗಲಿರುಳು ಕಷ್ಟಪಟ್ಟು ಗೌರಿಗಣೇಶ ವಿಗ್ರಹ ಗಳನ್ನು ತಯಾರಿಸಿ ಮಾರಾಟಕ್ಕೆ ಸಿದ್ಧಗೊಳಿಸಿ ಕೊಂಡಿದ್ದಾರೆ. ಇವುಗಳ ಮಾರಾಟಕ್ಕೆ ಸಮರ್ಪಕ ವಾದ ಸೂಚನೆಗಳು ಇಲ್ಲದೇ ತೊಂದರೆಯಾಗಿರು ತ್ತದೆ. ಆದ್ದರಿಂದ ಗಣೇಶ ವಿಗ್ರಹಗಳ ಮಾರಾಟಕ್ಕೆ ತೊಂದರೆ ಮತ್ತು ಕಿರುಕುಳ ಆಗದಂತೆ ಅವಕಾಶ ಕಲ್ಪಿಸಲು ಸೂಕ್ತವಾದಮಾರ್ಗಸೂಚಿಗಳನ್ನುಪ್ರಕಟಿಸಿಇಂತಹಕುಶಲಕರ್ಮಿ ಕುಟುಂಬಗಳ ಜೀವನ ನಿರ್ವಹಣೆಗಾಗಿ ಸುಗಮ
ಅನುವು ಒದಗಿಸುವಂತೆ ಜಿಲ್ಲಾ ಗಣೇಶ ತಯಾರಕರ ಸಂಘದ ಪದಾಧಿಕಾರಿಗಳಿಂದ ಜಿಲ್ಲಾಧಿಕಾರಿಗೆ ಮನವಿಸಲ್ಲಿಸಿದ್ದಾರೆ. ಸರ್ಕಾರ ಸ್ಪಂದಿಸಲಿ
ಕೋವಿಡ್ ಮಹಾಮಾರಿಯಿಂದ ಮಣ್ಣಿನ ಮಡಿಕೆ, ಕುಡಿಕೆ ಜೊತೆಗೆ ಗಣೇಶ ಹಬ್ಬದವೇಳೆಯಲ್ಲಿ ಗಣೇಶ ಮೂರ್ತಿ ತಯಾರು ಮಾಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಗಳಿಗೆ ಕೋವಿಡ್ ದಿಂದ ಭಾರೀ ನಷ್ಟ ಉಂಟಾಗಿದೆ. ಒಂದು ಕಡೆ ಮಡಿಕೆ, ಕುಡಿಕೆಗಳಿಗೆ ಬೇಡಿಕೆ ಇಲ್ಲ. ಇನ್ನೊಂದೆಡೆ ಲಕ್ಷಾಂತರ ರೂ. ಖರ್ಚು ಮಾಡಿ ಗಣೇಶ ಮೂರ್ತಿಗಳು ತಯಾರಾದರೂ ಅವುಗಳನ್ನು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರುಈವರೆಗೂಬಂದಿಲ್ಲ. ಸರ್ಕಾರಈಸಮುದಾಯದ ಸಂಕಷ್ಟಕ್ಕೆ ಸ್ಪಂದಿಸುವುದೇ? ನೈಸರ್ಗಿಕ ಗಣೇಶ ತಯಾರಿಕೆ
ಗಣೇಶ ಹಬ್ಬ ಸನಿಹವಾಗುತ್ತಿರುವ ಹಿನ್ನೆಲೆ ಗಣೇಶ ವಿಗ್ರಹಗಳು ಮಾರಾಟಕ್ಕೆ ತಯಾರಕರು ಸಿದ್ಧತೆ ಮಾಡಿದ್ದಾರೆ. ಜಿಲ್ಲಾಡಳಿತ ಗಣೇಶಮೂರ್ತಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಮಾರಾಟ ಆರಂಭವಾಗಲಿದೆ. ಬಣ್ಣ, ಬಣ್ಣದ ಗಣೇಶ ಮೂರ್ತಿ ಗಳ ಮಾರಾಟ ಮಾಡಬಾರದು. ಪರಿಸರಸ್ನೇಹಿ ಗಣೇಶ ಮೂರ್ತಿ ಮಾರಾಟದ ಹಿನ್ನೆಲೆ ನೈಸರ್ಗಿಕ ಗಣೇಶ ಮೂರ್ತಿ ತಯಾರಿಕೆಯಾಗಿವೆ. ಪ್ರತಿವರ್ಷ ಗಣೇಶೋತ್ಸವ ವನ್ನು ಎಲ್ಲಕಡೆ ಆಚರಿಸಲು ಜಿಲ್ಲಾಡಳಿತದಿಂದ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, ಕಳೆದ ವರ್ಷದಿಂದ
ಕೋವಿಡ್ ದಿಂದ ಎಲ್ಲಕಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇರುವುದಿಲ್ಲ, ಸಾರ್ವಜನಿಕ ಸ್ಥಳ, ಹೊರಾಂಗಣ, ಚಪ್ಪರ, ಪೆಂಡಾಲ್‌ನಲ್ಲಿ ಗೌರಿ-ಗಣೇಶ ಮೂರ್ತಿ ಗಳನ್ನು ಪ್ರತಿಷ್ಠಾಪನೆ ನಿಷೇಧ ಮಾಡಲಾಗಿದೆ. ಬದಲಿಗೆ ತಮ್ಮ ಮನೆ, ದೇವಾಲಯಗಳಲ್ಲಿ ಗಣೇಶ ವಿಗ್ರಹ ವಿಟ್ಟು ಪೂಜಿಸಬಹುದು.
-ವೈ.ಎಸ್.ಪಾಟೀಲ್, ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಜನರು ಈ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಎರಡು ಅಡಿ, ಅರ್ದ ಅಡಿ, ಮುಕ್ಕಾಲು ಅಡಿ ಗಣೇಶ ಮೂರ್ತಿಗಳನ್ನು ಮಾಡಿದ್ದೇವೆ. ಸಾವಿರಾರು ಗಣೇಶ ಮೂರ್ತಿ ತಯಾರಾಗಿದೆ. ಕೇಳುವವರಿಲ್ಲ, ನಮಗೆ ತುಮಕೂರು ಟೌನ್ ಹಾಲ್ ಬಳಿ ಗಣೇಶ ಮಾರಾಟಕ್ಕೆ ಅವಕಾಶ ನೀಡಿ, ಸರ್ಕಾರ ನಮ್ಮಂತಹಕುಶಲ ಕರ್ಮಿಗಳ ಸಂಕಷ್ಟಕ್ಕೆ ಸ್ಪಂದಿಸಬೇಕು.
-ಟಿ.ಎಚ್.ಮೋಹನ್‌ಕುಮಾರ್,
ಗಣೇಶ ತಯಾರಕರು -ಚಿ.ನಿ.ಪುರುಷೋತ್ತಮ್