Advertisement

ಭದ್ರಾವತಿಯಲ್ಲಿ ನಾಲ್ಕು ಮಂದಿಗೆ ಕೋವಿಡ್

10:09 AM Jul 04, 2020 | Suhan S |

ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಒಂದು ಹಾಗೂ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಮೂರು ಕೋವಿಡ್ ಪಾಸಿಟಿವ್‌ ಪ್ರಕರಣಗಳು ಸೇರಿದಂತೆ ಶುಕ್ರವಾರ ನಾಲ್ಕು ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

Advertisement

ಕಡದಕಟ್ಟೆ: ಕಡದಕಟ್ಟೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ 28 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಮನೆಯಲ್ಲಿರುವ ಈತನ ತಂದೆ-ತಾಯಿಯರನ್ನೂ ಸಹ ಆರೋಗ್ಯ ತಪಾಸಣೆ ಮಾಡಿ, ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ವಿಶ್ವೇಶ್ವರನಗರ: ವಿಶ್ವೇಶ್ವರನಗರದಲ್ಲಿ 21ವರ್ಷ ಮತ್ತು 24 ವರ್ಷದ ಇಬ್ಬರು ಮಹಿಳೆಯರಲ್ಲಿ ಕೋವಿಡ್ ದೃಢಪಟ್ಟಿದ್ದು, ಇವರೂ ಸಹ ಬೆಂಗಳೂರಿಗೆ ಹೋಗಿಬಂದವರಾಗಿದ್ದಾರೆ. ಈ ಎಲ್ಲಾ ಸೋಂಕಿತರನ್ನು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯ ಕೋವಿಡ್‌ ಕೇಂದ್ರಕ್ಕೆ ಕಳುಹಿಸಲಾಯಿತು. ಇವರ ವಾಸದ ಮನೆಯ ಬೀದಿಯ ನೂರು ಮೀಟರ್‌ ಸುತ್ತಳತೆಯ ಪ್ರದೇಶಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ.

ಹೊಳೆಹೊನ್ನೂರು: ಹೊಳೆಹೊನ್ನೂರಿನ ಹೊರ ವಲಯದಲ್ಲಿರುವ ರಬ್ಟಾನಿ ರೈಸ್‌ಮಿಲ್‌ಗೆ ಉತ್ತರಪ್ರದೇಶದಿಂದ ಕೆಲಸಕ್ಕೆ ಬಂದಿದ್ದ 21 ವರ್ಷದ ಓರ್ವ ಯುವಕನಲ್ಲಿ ಕೋವಿಡ್ ಪಾಸಿಟಿವ್‌ ಕಾಣಿಸಿಕೊಂಡಿದೆ. ಈ ಯುವಕ ಜೂನ್‌ 28ರಂದು ಇಲ್ಲಿಗೆ ಬಂದಿದ್ದ. ಜೂ. 30ರಂದು ಈತನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಜು. 3ರಂದು ಈತನಲ್ಲಿ ಕೋವಿಡ್ ಪಾಸಿಟಿವ್‌ ವರದಿ ಬಂದ ಹಿನ್ನೆಲೆಯಲ್ಲಿ ಇಲ್ಲಿನ ಆರೋಗ್ಯ ಅಧಿಕಾರಿಗಳು ಆತನನ್ನು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯ ಕೋವಿಡ್‌ ಕೇಂದ್ರಕ್ಕೆ ಕಳುಹಿಸಿದ್ದಾರೆ. ಅಲ್ಲದೇ, ರೈಸ್‌ಮಿಲ್‌ನಲ್ಲಿದ್ದ ಉಳಿದ ಆರು ಕಾರ್ಮಿಕರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿ, ರೈಸ್‌ ಮಿಲ್‌ ಹಾಗೂ ಆ ಪ್ರದೇಶವನ್ನು ಸೀಲ್‌ಡೌನ್‌ ಮಾಡಿದ್ದಾರೆ. ಹೊಳೆಹೊನ್ನೂರು ವ್ಯಾಪ್ತಿಯಲ್ಲಿ ಕಂಡುಬಂದ ಮೊದಲ ಪಾಸಿಟಿವ್‌ ಪ್ರಕರಣ ಇದಾಗಿದೆ. ಈವರಗೆ ಭದ್ರಾವತಿ ತಾಲೂಕಿನಲ್ಲಿ 22 ಪಾಸಿಟಿವ್‌ ಪ್ರಕರಣಗಳು ಪತ್ತೆಯಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next