ಜಿಂದಾಲ್ ಸಿಬ್ಬಂದಿ, ವಿವಿಧ ರಾಜ್ಯ, ಜಿಲ್ಲೆಗಳಿಂದ ವಾಪಸ್ ಬಂದವರು ಸೇರಿ ಹೊಸದಾಗಿ ಪುನಃ 20 ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 220ಕ್ಕೆ ಏರಿಕೆಯಾಗಿದೆ.
Advertisement
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಧಿಕಾರಿ ಎಸ್.ಎಸ್.ನಕುಲ್ ಅವರು, 20 ಪ್ರಕರಣಗಳು ಹೊಸಪೇಟೆ ತಾಲೂಕಿಗೆ ಸಂಬಂಧಿ ಸಿದ್ದರೆ ಮೂರು ಪ್ರಕರಣ ಬಳ್ಳಾರಿ ತಾಲೂಕಿಗೆ ಸಂಬಂಧಿ ಸಿವೆ. ಉಳಿದ ಒಂದು ಪ್ರಕರಣ ಕೂಡ್ಲಿಗಿ ತಾಲೂಕಿಗೆ ಸಂಬಂಧಪಟ್ಟಿದೆ. ಹೊಸ 24 ಪ್ರಕರಣದಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ ಇದೀಗ 200ರ ಗಡಿ ದಾಟಿದೆ. ಇದುವರೆಗೆ 220 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ 55 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದರೆ ಓರ್ವ ಸಾವಿಗೀಡಾಗಿದ್ದರು. ಹಾಲಿ 134 ಪ್ರಕರಣಗಳು ಸಕ್ರಿಯವಾಗಿವೆ. ಇಂದು ವರದಿಯಾದ ಪ್ರಕರಣಗಳ ಪೈಕಿ 7 ಪ್ರಕರಣಗಳು ಜಿಂದಾಲ್‌ಗೆ ಸಂಬಂಧಿಸಿದ್ದಾಗಿವೆ.
ಮೂವರು ಚಾಮರಾಜನಗರದಿಂದ, ಒಬ್ಬರು ಮಧ್ಯಪ್ರದೇಶ ರಾಜ್ಯದಿಂದ ವಾಪಸ್ಸಾಗಿದ್ದಾರೆ. 9 ಜನರಿಗೆ ಯಾರಿಂದ ಸೋಂಕು ಹರಡಿದೆ ಎಂಬುದು ಪತ್ತೆಯಾಗಿಲ್ಲ. ಹೊಸಪೇಟೆಯ ಒಬ್ಬರಿಗೆ ಪಿ.6687 ಸೋಂಕಿತರಿಂದ ಹರಡಿದೆ. ಇನ್ನು ಸೋಂಕಿತ 6 ಜಿಂದಾಲ್ ಸಿಬ್ಬಂದಿ ಪೈಕಿ ಒಬ್ಬರು ಬಳ್ಳಾರಿ, ಮತ್ತೂಬ್ಬರು ಕೂಡ್ಲಿಗಿ, ಉಳಿದ ನಾಲ್ವರು ಹೊಸಪೇಟೆಯವರಾಗಿದ್ದಾರೆ. ಸೋಂಕಿತರೆಲ್ಲರೂ ನಗರದ ಕೋವಿಡ್ (ಜಿಲ್ಲಾ) ಆಸ್ಪತ್ರೆ ಮತ್ತು ಸಂಡೂರಿನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದವರು ತಿಳಿಸಿದ್ದಾರೆ. ಮರಿಯಮ್ಮನಹಳ್ಳಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ದೃಢ
ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಮತ್ತೆ ಎರಡು ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಸಮೀಪದ ಹನುಮನಹಳ್ಳಿಯಲ್ಲಿ
ಒಬ್ಬರು ಹಾಗೂ ಡಣಾಪುರದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಡಳಿತ ಪ್ರಕಟಿಸಿದೆ. ಹನುಮನಹಳ್ಳಿಯ ಬಸಾಪುರದ ಸೋಂಕಿತ ವ್ಯಕ್ತಿಯು
ಜಿಂದಾಲ್‌ನಲ್ಲಿ ಕೆಲಸಮಾಡುತ್ತಿರುವುದಾಗಿ ತಿಳಿದು ಬಂದಿದೆ. ಡಣಾಪುರದಲ್ಲಿ ಲಾರಿ ಚಾಲಕರೊಬ್ಬರ ಪತ್ನಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಈ ಮಹಿಳೆಗೆ ಸೋಂಕು ಯಾವ ರೀತಿ ಹಬ್ಬಿದೆ ಎಂಬುದು ತಿಳಿದುಬಂದಿಲ್ಲ. ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಮರಿಯಮ್ಮನಹಳ್ಳಿ ನಾಡಕಚೇರಿ ಅಂದಾನಗೌಡ, ಗ್ರಾಮಲೆಕ್ಕಿಗರಾದ ಶಾರದ, ಪಿಎಸ್‌ಐ ಶಿವಕುಮಾರ್ ಸೋಂಕಿತರ ಪ್ರದೇಶಕ್ಕೆ ಭೇಟಿ ನೀಡಿ ನೂರು ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸೀಲ್‌ಡೌನ್ ಮಾಡಿದ್ದಾರೆ.
Related Articles
ಕಂಪ್ಲಿ: ತಾಲೂಕಿನಲ್ಲಿ ಸೋಮವಾರ ಒಂದೇ ದಿನ 5 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕುಟುಂಬದ ಐದು ಜನರಿಗೆ ಡೆಡ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದ ಕಂಪ್ಲಿ ತಾಲ್ಲೂಕಿನ ಜನರ ತಲ್ಲಣಕ್ಕೆ ಕಾರಣವಾಗಿದೆ. ಇಲ್ಲಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪ್ರಭುಕ್ಯಾಂಪಿ (ಸಕ್ಕರೆ ಕಾರ್ಖಾನೆ ಬಳಿ)ನ ಮೂಲತ ನಿವಾಸಿ ಕುಟುಂಬದ ಐದು ಜನರಿಗೆ ಕೊರೊನಾ ವಕ್ಕರಿಸಿದೆ. ಮೂಲತ 36 ವರ್ಷದ ಪುರುಷ(ಪತಿ), 31 ವರ್ಷದ ಮಹಿಳೆ (ಪತ್ನಿ), 5 ವರ್ಷ ಬಾಲಕಿ ಮತ್ತು 3 ವರ್ಷದ ಬಾಲಕಿ(ಹೆಣ್ಮಕ್ಕಳು), 66 ವರ್ಷದ ಪುರುಷ(ಮಾವ)ನಿಗೆ ಸೋಂಕು ತುಗಲಿದೆ. ಇಲ್ಲಿನ ಪ್ರಭುಕ್ಯಾಂಪಿನ ಮೂಲತ ವ್ಯಕ್ತಿಯು ತಮ್ಮ ಕುಟುಂಬದೊಂದಿಗೆ ಸಂಡೂರು ತಾಲ್ಲೂಕಿನ ಕುರೇಕುಪ್ಪ ಪಟ್ಟಣದಲ್ಲಿ ಅಂಗಡಿ ನಡೆಸುತ್ತಿದ್ದನು. ಆದರೆ, ಇತ್ತೀಚೆಗೆ ಜಿಂದಾಲ್‌ನಲ್ಲಿ ಡೆಡ್ಲಿ ಕೋವಿಡ್ ವೈರಸ್‌ನ ರಣಕೇಕೆಗೆ ಬೆಚ್ಚಿಬಿದ್ದು, ಕಂಪ್ಲಿ ತಾಲ್ಲೂಕಿನ ಪ್ರಭುಕ್ಯಾಂಪಿಗೆ ಬಂದು ವಾಸವಾಗಿದ್ದಾನೆ. ಇಲ್ಲಿಗೆ ಬಂದ ತಕ್ಷಣ ಅಂದರೆ ಜೂ. 12ರಂದು ಕಂಪ್ಲಿ ಸರ್ಕಾರಿ ಆಸ್ಪತ್ರೆಯ ಕೋವಿಡ್ ಫಿವರ್ ಕ್ಲಿನಿಕ್‌ನಲ್ಲಿ ಗಂಟಲು ಮತ್ತು ಮೂಗಿನ ಸ್ಲಾಬ್ ಸಂಗ್ರಹಿಸಿದ ನಂತರ ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗಾಗಿ ಕಳುಹಿಸಲಾಯಿತ್ತು. ಆದರೆ, ಈಗ ಐದು ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕು ತಗುಲಿದ ಐವರು ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಯಲ್ಲೇ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement
ಪ್ರಭುಕ್ಯಾಂಪ್‌ನಲ್ಲಿ ಸೋಂಕು ನಾಶಕ ಔಷಧ ಸಿಂಪಡಣೆ ಮಾಡಲು ಸೂಚಿಸಿದರು. ತಹಶೀಲ್ದಾರ್ ಎಂ.ರೇಣುಕಾ, ಉಪ ತಹಶೀಲ್ದಾರ್ ಬಿ. ರವೀಂದ್ರಕುಮಾರ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಮಲ್ಲೇಶಪ್ಪ, ಪಿಎಸ್‌ಐ ಮೌನೇಶ್ ಉ. ರಾಥೋಡ್, ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಾಲತೇಶ್ ದೇಶ್‌ಪಾಂಡೆ, ವಿಎಗಳಾದ ವೆಂಕಟೇಶ್, ಲಕ್ಷ್ಮಣನಾಯ್ಕ ಇದ್ದರು.