ದೇವನಹಳ್ಳಿ: ಕೋವಿಡ್ 2ನೇ ಅಲೆಯ ಪರಿಣಾಮವಿಮಾನ ಯಾನದ ಮೇಲೂ ಬೀರಿದೆ. ಶೇ.70ಪ್ರಯಾಣಿಕರು ತಮ್ಮ ವಿಮಾನ ಯಾನವನ್ನುನಿಲ್ಲಿಸಿದ್ದು, ಇದನ್ನೇ ನಂಬಿಕೊಂಡಿದ್ದ ಟ್ಯಾಕ್ಸಿ,ನಿಲ್ದಾಣದಲ್ಲಿನ ಅಂಗಡಿಯವರು, ಫ್ಲೈಟ್ ಬುಕಿಂಗ್‌ಏಜೆನ್ಸಿಯವರು ತೀವ್ರ ನಷ್ಟ ಅನುಭವಿಸುವಂತಾಗಿದೆ.ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಹೆಚ್ಚಿರುವ ಕಾರಣ ತಾಲೂಕಿನಲ್ಲಿರುವ ಕೆಂಪೇಗೌಡಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರಿಇಳಿಮುಖ ಕಂಡುಬಂದಿದೆ.
ಕೋವಿಡ್-19 2ನೇ ಅಲೆಯಿಂದಾಗಿದೇಶ-ವಿದೇಶ, ಹೊರ ರಾಜ್ಯಗಳಿಂದ ಬರುವ ಮತ್ತುಹೋಗುವ ಪ್ರಯಾಣಿಕರು ವಿಮಾನ ಯಾನಮಾಡುವ ಹಿಂದೇಟು ಹಾಕುತ್ತಿರುವುದುಮೇಲ್ನೋಟಕ್ಕೆ ಕಂಡುಬಂದಿದೆ.ಪ್ರತ್ಯೇಕ ಕೌಂಟರ್: ಮಹಾರಾಷ್ಟ್ರ ಮತ್ತು ಕೇರಳರಾಜ್ಯಗಳಲ್ಲಿ ಕೊರೊನಾ ಮಿತಿ ಮೀರಿರುವುದರಿಂದಈ ರಾಜ್ಯದಿಂದ ಬರುವವರಿಗೆ ಪ್ರತ್ಯೇಕ ಕೌಂಟರ್‌ನಲ್ಲಿಬರುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ. ಆರೋಗ್ಯಇಲಾಖೆಯಿಂದ ಸ್ಥಳದಲ್ಲಿಯೇ ಸ್ಕ್ರೀನಿಂಗ್, ಆರೋಗ್ಯತಪಾಸಣೆ ಸೇರಿ ಹೆಚ್ಚುವರಿ ಸೌಲಭ್ಯಒದಗಿಸಲಾಗುತ್ತಿದೆ.
ಅಲ್ಲಿಯೇ ಲಸಿಕೆ ಹಾಕುವಕಾರ್ಯವೂ ಮಾಡಲಾಗುತ್ತಿದೆ.ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ 50 ಸಾವಿರದಿಂದ1ಲಕ್ಷ ಜನ ಬರುತ್ತಿದ್ದರು. ಆದರೆ, ಕೊರೊನಾ ಎರಡನೇಅಲೆ ಪ್ರಾರಂಭವಾಗಿರುವುದರಿಂದ ಪ್ರತಿನಿತ್ಯ 10ಸಾವಿರದಿಂದ 12 ಸಾವಿರ ಪ್ರಯಾಣಿಕರು ಮಾತ್ರಬರುವಂತೆ ಆಗಿದೆ. ಶೇ.30 ಪ್ರಯಾಣಿಕರು ಮಾತ್ರವಿಮಾನದಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದಿಂದಓಡಾಟ ನಡೆಸುತ್ತಿದ್ದಾರೆ.
ಎಲ್ಲಾ ಖಾಲಿ ಖಾಲಿ: ವಿಮಾನ ನಿಲ್ದಾಣದಟರ್ಮಿನಲ್‌ಗಳು ಜನರಿಲ್ಲದೆ ಖಾಲಿ-ಖಾಲಿಯಾಗಿವೆ.ವಿಮಾನ ನಿಲ್ದಾಣದ ಅಂಗಡಿ ಮುಗ್ಗಟ್ಟುಗಳು ಸಹಜನರಿಲ್ಲದೆ, ವ್ಯಾಪಾರ ವಹಿವಾಟು ನಡೆಯದೇಮಾಲಿಕರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಪ್ರಯಾಣಿಕರೇ ಸಿಗ್ತಿಲ್ಲ: ವಿಮಾನ ನಿಲ್ದಾಣದಲ್ಲಿ 10ಸಾವಿರದಿಂದ 15 ಸಾವಿರ ಟ್ಯಾಕ್ಸಿಗಳಿವೆ. ಆದರೆ,ಕೊರೊನಾ ಎರಡನೇ ಅಲೆಯಿಂದಾಗಿ ವಿಮಾನಪ್ರಯಾಣಿಕರು ಬಾರದೇ ಟ್ಯಾಕ್ಸಿ ಚಾಲಕರು ತೀವ್ರ ನಷ್ಟಅನುಭವಿಸುವಂತಾಗಿದೆ. ದಿನದ ದುಡಿಮೆಯೂಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆಬೆಳಗ್ಗಿನಿಂದ ಸಂಜೆವರೆಗೂ ಕಾದು ಕೂತರೂಪ್ರಯಾಣಿಕರು ಸಿಗದೆ ಖಾಲಿ ಕೈಯಲ್ಲಿ ವಾಪಸ್‌ಹೋಗುವಂತಾಗಿದೆ ಎಂದು ಕೆಲ ಟ್ಯಾಕ್ಸಿ ಚಾಲಕರುತಮ್ಮ ಅಳಲು ತೋಡಿಕೊಂಡಿದ್ದಾರೆ.ಕೊರೊನಾದಿಂದ ಮತ್ತೂಂದು ಬಾರಿ ಹೊಡೆತಬಿದ್ದಿದ್ದು, ಕುಟುಂಬ ನಿರ್ವಹಣೆಗೆ ಸಾಕಷ್ಟು ತೊಂದರೆಅನುಭವಿಸುವ ಪರಿಸ್ಥಿತಿ ಇದೆ. ಇದೇ ರೀತಿ ಕೊರೊನಾಹೆಚ್ಚಾಗುತ್ತಿದ್ದರೆ, ಮುಂದಿನ ದಿನಗಳಲ್ಲಿ ಸಾಕಷ್ಟುಸಮಸ್ಯೆಗಳನ್ನು ಎದರಿಸುವಂತೆ ಆಗುತ್ತದೆ ಎಂದುಟ್ಯಾಕ್ಸಿ ಚಾಲಕರು ಹೇಳಿದರು.
ಎಸ್.ಮಹೇಶ್