ಧಾರವಾಡ: ಜಿಲ್ಲೆಯ 120 ಗ್ರಾಮಗಳಲ್ಲಿ ಕೋವಿಡ್ ಮೊದಲ ಡೋಸ್ ನೀಡಿಕೆಯಲ್ಲಿ ಶೇ.100 ಸಾಧನೆಯಾಗಿದ್ದು, ಕೋವಿಡ್ ರೋಗ ನಿರೋಧಕ ಲಸಿಕಾಕರಣದಲ್ಲಿ ಧಾರವಾಡ ಜಿಲ್ಲೆ ರಾಜ್ಯದಲ್ಲಿ ಹತ್ತನೇ ಸ್ಥಾನದಲ್ಲಿದೆ ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.
ನಗರದ ಡಿಸಿ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಶೇ.100 ಮೊದಲ ಡೋಸ್ ಲಸಿಕಾಕರಣದ ಸಾಧಕ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಗೌರವಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಿಂದ ಆರೋಗ್ಯ ಇಲಾಖೆ ಕೋವಿಡ್ ರೋಗನಿರೋಧಕ ಲಸಿಕಾಕರಣದಲ್ಲಿ ಉತ್ತಮ ಪ್ರಗತಿ ಸಾ ಧಿಸಿದೆ. ಇಲ್ಲಿಯವರೆಗೆ ಜಿಲ್ಲೆಯ 120 ಗ್ರಾಮಗಳಲ್ಲಿನ ಅರ್ಹ ಪಲಾನುಭವಿಗಳಿಗೆ ಶೇ.100 ಮೊದಲ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ಶೇ.96.20 ಗುರಿ ಸಾಧಿಸಿ, ಹತ್ತನೇ ಸ್ಥಾನದಲ್ಲಿದೆ ಎಂದರು.
ಕಳೆದ ವಾರ 56 ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಭಾರತೀಯ ರೆಡ್‌ಕ್ರಾಸ್‌ಸಂಸ್ಥೆಯ ಧಾರವಾಡ ಘಟಕ ನೀಡಿದ್ದ ಆಹಾರ ಕಿಟ್‌ಹಾಗೂ ಆರೋಗ್ಯ ಸುರಕ್ಷತಾ ವಸ್ತುಗಳನ್ನು ನೀಡಿ,ಗೌರವಿಸಲಾಗಿತ್ತು. ಇದೀಗ ಹುಬ್ಬಳ್ಳಿಯ ಚಿನ್ಮಯಸೇವಾ ಸಮಿತಿ ಟ್ರಸ್ಟ್ ಹಾಗೂ ಗುಜರಾತ ಸಮಾಜದಸಹಯೋಗದಲ್ಲಿ ಪೂರೈಸಿರುವ ಕುಕ್ಕರ್‌ಗಳನ್ನು 62ಗ್ರಾಮಗಳಲ್ಲಿ ಶೇ.100 ಲಸಿಕಾಕರಣದ ಗುರಿ ಸಾಧಿಸಿರುವ 120 ಆಶಾ ಹಾಗೂ 80 ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಿ ಗೌರವಿಸಲಾಗಿದೆ ಎಂದರು.
ಹುಬ್ಬಳ್ಳಿ ಚಿನ್ಮಯ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಗಿರೀಶ ಉಪಾಧ್ಯಾಯ ಮಾತನಾಡಿ, ಕೋವಿಡ್‌ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆನಿರಂತರ ಶ್ರಮಿಸುತ್ತಿವೆ. ಸಮಾಜದ ಇತರರುಈ ಕಾರ್ಯಕ್ಕೆ ಕೈ ಜೋಡಿಸಿದರೆ ಇನ್ನಷ್ಟು ಸಾಧನೆ ಸಾಧ್ಯವಾಗುತ್ತದೆ ಎಂದರು.
ಗುಜರಾತ ಸಮಾಜದ ಮಹೇಂದ್ರ ಲಡ್ಡದಮಾತನಾಡಿದರು. ಹುಬ್ಬಳ್ಳಿ ಗುಜರಾತ ಸಮಾಜದಅಶ್ವಿನಿಬಾಯಿ ಸಾಂಘವಿ, ಜಿತೇಂದ್ರಬಾಯಿ ಲಡ್ಡದ,ಮಹೇಂದ್ರ ಲಡ್ಡದ, ಚಿನ್ಮಯ ಸೇವಾ ಸಮಿತಿ ಟ್ರಸ್ಟ್‌ದವಿಶ್ವನಾಥ ರಾನಡೆ, ಗಿರೀಶ ಉಪಾಧ್ಯಾಯ, ಜಿಲ್ಲಾಆರೋಗ್ಯಾಧಿಕಾರಿ ಡಾ|ಯಶವಂತ ಮದೀನಕರ ಇದ್ದರು.
ಇದೇ ಸಂದರ್ಭದಲ್ಲಿ ಕೋಳಿವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಸುನೈನಾ,ಮುಕ್ಕಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ರವಿ ಸೋಮಣ್ಣವರ ಅವರನ್ನು ಸನ್ಮಾನಿಸಿ,ಗೌರವಿಸಲಾಯಿತು. ಡಾ|ಎಸ್.ಎಮ್.ಹೊನಕೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.