Advertisement

ಕೋವಿಡ್ ಹೋರಾಟದ ಯಶಸ್ಸಿನ ಸೂತ್ರ: ತೈವಾನ್‌ ಸಚಿವ

01:48 AM Aug 27, 2020 | mahesh |

ಮಣಿಪಾಲ: ಕೋವಿಡ್‌ ವಿರುದ್ಧ ಹೋರಾಡಲಾಗದೇ ಹಲವು ದೇಶಗಳು ಸಂಕಷ್ಟ ಎದುರಿಸುತ್ತಿದೆ. ಆದರೆ ತೈವಾನ್‌ ಮಾತ್ರ ತನ್ನ ಚಾಕಚಕ್ಯತೆಯನ್ನು ತೋರಿಸಿದ್ದು, ಕೋವಿಡ್‌ನ‌ನ್ನು ಮಟ್ಟಹಾಕಿದೆ. ಕೋವಿಡ್‌ ಮಣಿಸುವಲ್ಲಿ ನಮ್ಮ ಜನರ ಪಾತ್ರ ಹಿರಿದಾಗಿದೆ. ನಮ್ಮ ನಾಗರಿಕರನ್ನು ನಂಬಿದ್ದೇವೆ, ಅದು ಅತ್ಯಂತ ಪ್ರಮುಖ ಭಾಗವಾಗಿದೆ. ಇದಕ್ಕೆ ತಂತ್ರಜ್ಞಾನಗಳು ಸಹಕಾರ ನೀಡಿದ್ದು ಈ ಎಲ್ಲವುದರ ಫ‌ಲವಾಗಿ ನಾವು ಕೋವಿಡ್‌ ನಿಗ್ರಹಿಸಿದ್ದೇವೆ ಎಂದು ತೈವಾನಿನ ಡಿಜಿಟಲ್‌ ಸಚಿವ ಆಡ್ರೆ ಟ್ಯಾಂಗ್‌ ಹೇಳಿದ್ದಾರೆ.

Advertisement

WION ಜತೆ ಮಾತನಾಡಿರುವ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ತೈವಾನ್‌ ಮಾದರಿಯನ್ನು ವಿವರವಾಗಿ ವಿವರಿಸಿದ ಸಚಿವರು ಚೀನದ ವೈದ್ಯ ಲಿ ವೆನ್ಲಿಯಾಂಗ್‌ ಅವರು ಡಿಸೆಂಬರ್‌ನಲ್ಲಿ ಕೋವಿಡ್‌ ವೈರಸ್‌ ಬಗ್ಗೆ ಮಾಹಿತಿ ನೀಡಿದಾಗ, ನಾವು ತತ್‌ಕ್ಷಣ ಅದನ್ನು ಎದುರಿಸಲು ಸನ್ನದ್ಧರಾಗಿದ್ದೆವು.  ಜನವರಿಯ ಆರಂಭದಿಂದ ನಾವು ಚೀನದಿಂದ ತೈವಾನ್‌ಗೆ ಬರುವ ವಿಮಾನಗಳ ಮೇಲೆ ಕಣ್ಣಿಡಲು ಪ್ರಾರಂಭಿಸಿದೆವು ಎಂದರು.

ತೈವಾನ್‌ ಮಾದರಿಯ ಮೂರನೇ ಅಂಕಣವನ್ನು “ತಮಾಷೆ’ಯಾಗಿ ವಿವರಿಸಿದ ಅವರು ಮಾಸ್ಕ್ಗಳನ್ನೂ ಧರಿಸಲು ಜನರನ್ನು ಪ್ರೋತ್ಸಾಹಿಸಲು ನಾವು ಬಹಳ ಆಸಕ್ತಿದಾಯಕ ಮಾರ್ಗಗಳನ್ನು ಅಳವಡಿಸಿಕೊಂಡಿದ್ದೇವೆ. ಇದಕ್ಕಾಗಿ ನಾವು ಮೇಮ್ಸ… ಮತ್ತು ಪೋಸ್ಟರ್‌ಗಳನ್ನು ಸಹಾಯವನ್ನು ಪಡೆದುಕೊಂಡಿದ್ದೇವೆ ಎಂದು ವಿವರಿಸಿದರು.

ಕೋವಿಡ್‌ ಜನವರಿ 25ರಂದು ಮಧ್ಯ ಚೀನದಿಂದ ವೇಗವಾಗಿ ಹರಡುವ ಅಪಾಯದ ಬಗ್ಗೆ ಜಗತ್ತು ಎಚ್ಚರಗೊಳ್ಳುತ್ತಿದ್ದಂತೆ, ತೈವಾನ್‌ ಮಾತ್ರ ತನ್ನ ಅದ್ಭುತ ಕೈಚಳಕವನ್ನು ತೋರಿತ್ತು. 2003ರಲ್ಲಿ ತೀವ್ರವಾದ ಉಸಿರಾಟದ ಸಿಂಡ್ರೋಮ್‌ (ಸಾರ್ಷ್‌) ಏಕಾಏಕಿ, ತೈವಾನ್‌, ಹಾಂಗ್‌ ಕಾಂಗ್‌ ಮತ್ತು ದಕ್ಷಿಣ ಚೀನಕ್ಕೆ ಬಡಿಯಿತು. ಜಗತ್ತಿನಲ್ಲಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಇದೂ ಒಂದು. ಚೀನದ ಆಗ್ನೇಯ ಕರಾವಳಿಯಿಂದ 180 ಕಿ.ಮೀ. (110 ಮೈಲಿ) ದೂರದಲ್ಲಿರುವ ದ್ವೀಪದಲ್ಲಿ 150,000 ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು.

181 ಜನರು ಸಾವನ್ನಪ್ಪಿದರು. ಆಗ ಕಲಿತ ಪಾಠದಿಂದ ಈ ಬಾರಿ ಕೊರೊನಾ ವೈರಸ್‌ ನ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಯಿತು. ಸರಕಾರದ ಕ್ರಮಗಳು, ಸಾಮಾಜಿಕ ಅಂತರ, ಗಡಿ ನಿಯಂತ್ರಣಗಳು ಮತ್ತು ಮಾಸ್ಕ್ ಗಳನ್ನು ಧರಿಸುವುದು ಮೊದಲಾದ ಕ್ರಮಗಳನ್ನು ತೈವಾನ್‌ ಬಹಳ ಬೇಗನೆ ಕೈಗೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next