Advertisement

ಕರ್ನಾಟಕದಲ್ಲಿ ಆರೋಗ್ಯ ವೀರರ ಮೇಲೆ ನಿಲ್ಲದ ಹಲ್ಲೆ

02:20 AM Apr 22, 2020 | Hari Prasad |

ಮೈಸೂರು/ಬೆಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ದ ಕೋವಿಡ್ ವಾರಿಯರ್ ಮೇಲೆ ಹಲ್ಲೆ ನಡೆದ ಘಟನೆ ಬೆನ್ನಲ್ಲೇ ಮೈಸೂರಿನಲ್ಲೂ ಇಂಥದ್ದೇ ಪ್ರಕರಣ ವರದಿಯಾಗಿದೆ.

Advertisement

ಮಾಸ್ಕ್ ಧರಿಸಿಕೊಳ್ಳುವಂತೆ ಬುದ್ಧಿವಾದ ಹೇಳಿದ ಆಶಾ ಕಾರ್ಯಕರ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿರುವ ಮೂವರು ಪುಂಡರು ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಈ ಮೂವರನ್ನೂ ಬಂಧಿಸಲಾಗಿದೆ.

ಮೈಸೂರಿನ ಆಲೀಂ ನಗರದಲ್ಲಿ ಈ ಪ್ರಕರಣ ನಡೆದಿದೆ. ಗುಜರಿ ಬಳಿ ಕುಳಿತಿದ್ದ ಮೆಹಬೂಬ್‌, ಕಲೀಮ್‌ ಮತ್ತು ಜೀಶಾನ್‌ ಅವರಿಗೆ ಆಶಾ ಕಾರ್ಯಕರ್ತೆ ಸುಮಯ್ಯಾ ಫಿರ್ದೋಸ್‌ ಅವರು ಮಾಸ್ಕ್ ಧರಿಸಿ, ಅಕ್ಕಪಕ್ಕ ಕುಳಿತಿರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದ್ದರು.

ಇದರಿಂದ ಕೆರಳಿ ಅವರನ್ನು ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆನ್ನೂ ಹಾಕಿದ ಈ ಮೂವರೂ ಪುಂಡರನ್ನು ಎನ್.ಆರ್.‌ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಭೇಟಿಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಆಶಾ ಕಾರ್ಯಕರ್ತೆಯನ್ನು ಭೇಟಿಯಾಗಿದ್ದಾರೆ.

Advertisement

ಪೊಲೀಸರಿಗೆ ಹೆಚ್ಚು ಬಲ
ಕೋವಿಡ್ ವಾರಿಯರ್ಸ್‌ಗೆ ರಕ್ಷಣೆ ನೀಡಲು ರೂಪಿಸಲಾಗುತ್ತಿರುವ ಅಧ್ಯಾದೇಶದಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲು ಸಿದ್ಧತೆ ನಡೆಸಲಾಗಿದೆ. ಪ್ರಸ್ತುತ ಇರುವ ‘ಕರ್ನಾಟಕ ಸಾಂಕ್ರಾಮಿಕ ರೋಗ ಗಳ ಕಾಯಿದೆ’ ಹಿಂಪಡೆದು ಹೊಸ ಕಾಯಿದೆ ರೂಪಿಸಲಾಗುತ್ತದೆ. ಜತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣ ಕಾಯಿದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯಿದೆಯ ಕೆಲವು ಅಂಶಗಳನ್ನೂ ಇದಕ್ಕೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರ ಅಧಿಕಾರವೇನು?

– ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ನಿಂದನೆ ಶಿಕ್ಷಾರ್ಹ ಅಪರಾಧ


– ಗೂಂಡಾ ಕಾಯಿದೆಯಡಿ ನೀಡುವ ಶಿಕ್ಷೆ ಪ್ರಮಾಣ ಹೆಚ್ಚಳ


– ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ


– ಅಗತ್ಯ ವಸ್ತು ಒದಗಣೆ ಸೇವೆಗೆ ಸಮಯ ನಿಗದಿ


– ಗಲಭೆ ಉಂಟಾದರೆ ಪೊಲೀಸರಿಗೆ ಸ್ವಯಂ ಕ್ರಮ ಕೈಗೊಳ್ಳುವ ಅಧಿಕಾರ


– ಆಸ್ತಿ ಹಾನಿ ಮಾಡಿದರೆ ಆರೋಪಿಗಳ ಆಸ್ತಿ ಮುಟ್ಟುಗೋಲು

Advertisement

Udayavani is now on Telegram. Click here to join our channel and stay updated with the latest news.

Next