Advertisement
ವರ್ಷದ ಕೊನೆಯಲ್ಲಿ ಹೋಯಿತು ಅಂದುಕೊಂಡ ಕೋವಿಡ್ ಪುನಃ ಮರಳಲು ಜನರ ನಿಷ್ಕಾಳಜಿ ಕಾರಣವಾಗಿದೆ. ಹೀಗೆ ಮುಂದುವರಿದರೆಏನು ಎಂಬ ಚಿಂತೆ ಎಲ್ಲರಲ್ಲಿ ಕಾಡತೊಡಗಿದೆ. ಬಹುಪಾಲುಜನಕ್ಕೆ ಇದಾವುದರ ಪರಿವೆಯೇ ಇಲ್ಲದವರಂತೆ ಮಾಸ್ಕ್ಹಾಕುವುದನ್ನು ಬಿಟ್ಟಿದ್ದಾರೆ. ಅಂತರ ಕಾಯ್ದುಕೊಳ್ಳುತ್ತಿಲ್ಲ. ಜಾತ್ರೆ, ಹಬ್ಬ, ಮದುವೆ, ನೆಂಟರ ಮನೆಯೆಂದೆಲ್ಲಾ ಓಡಾಡುತ್ತಿದ್ದಾರೆ. ಇಲ್ಲಿಯವರೇ ಓಡಾಡಿ ಕೊಂಡಿದ್ದರೆ ಕೋವಿಡ್ ಕಾಡುತ್ತಿರಲಿಲ್ಲ. ಮುಂಬೈ, ಮಹಾರಾಷ್ಟ್ರ, ದಕ್ಷಿಣ ಕನ್ನಡ ದಲ್ಲಿಉದ್ಯೋಗಕ್ಕಾಗಿ ಹೋದವರು ಶಾಲೆಗೂ ರಜೆಯೆಂದುಮರಳಿ ಬರುವಾಗ ಕೋವಿಡ್ ತರುತ್ತಿದ್ದಾರೆ. ಜಿಲ್ಲೆಯಲ್ಲಿ ರವಿವಾರದವರೆಗೆ ವರದಿಯಾದ 47 ಹೊಸ ಸೋಂಕಿನಪ್ರಕರಣದಲ್ಲಿ ಹೆಚ್ಚಿನವರು ಹೊರಗಿನಿಂದ ಬರುವಾಗತಂದವರು.
Related Articles
Advertisement
ಕ್ರಿಮ್ಸ್ ಮತ್ತು ಎಲ್ಲ ತಾಲೂಕಾಸ್ಪತ್ರೆಗಳಲ್ಲೂ ಉತ್ತಮ ವ್ಯವಸ್ಥೆ ಇದ್ದರೂ ಕೋವಿಡ್ ಬಂದ ಕೂಡಲೇ ಬೇರೆ ಜಿಲ್ಲೆಗೆ, ಖಾಸಗಿ ಆಸ್ಪತ್ರೆಗೆ ಓಡಿ ಲಕ್ಷಾಂತರ ರೂ. ತೆತ್ತು ಬರುತ್ತಾರೆ.ಕೋವಿಡ್ ಮತ್ತೆ ಕಾಡುವ ಲಕ್ಷಣ ಕಾಣುತ್ತಿದ್ದಂತೆ ಪುನಃಎಲ್ಲ ವ್ಯವಹಾರಗಳೂ ಚೈತನ್ಯ ಕಳೆದುಕೊಂಡು ನಿಸ್ತೇಜವಾಗಿವೆ.ಮೇ ತಿಂಗಳಲ್ಲಿ ಅಸಂಖ್ಯ ಮದುವೆ, ಗೃಹಪ್ರವೇಶಮೊದಲಾದ ಶುಭಕಾರ್ಯಗಳು ನಿಗದಿಯಾಗಿವೆ. ಇದಕ್ಕೆಮುಂದಾದವರು ದಿನಕ್ಕೊಂದು ಸರ್ಕಾರದ ನಿಯಮಾವಳಿ ಓದಿ ಗಾಬರಿಯಾಗಿದ್ದಾರೆ.
ಔಷಧ ಸಹಿತ ಜೀವನಾವಶ್ಯಕ ವಸ್ತುಗಳ ಬೆಲೆ ನಿಯಂತ್ರಣ ತಪ್ಪಿ ಏರುತ್ತಿದೆ. ಇನ್ನೊಂದು ತಿಂಗಳು ಕಳೆದರೆ ಮಳೆಗಾಲ. ಎಲ್ಲ ವ್ಯವಹಾರ ಶೇ. 50ರಷ್ಟು ಸ್ಥಗಿತವಾಗುತ್ತದೆ. ಕೋವಿಡ್ ನಿಯಮವನ್ನು ಪಾಲಿಸಿ, ಲಸಿಕೆ ಪಡೆಯಿರಿ ಎಂದು ಕರ್ಣಪಟಲ ಹರಿಯುವಂತೆ ಕೂಗುವ ಮೊಬೈಲ್, ಕೇಳದಂತಿರುವ ಜಿಲ್ಲೆಯ ಬಹುಪಾಲು ಜನ ಜಿಗುಪ್ಸೆ ಹುಟ್ಟಿಸುತ್ತಾರೆ. ಒಂದು
ವರ್ಷಗಳಿಂದ ಕೋವಿಡ್ ನಿಯಂತ್ರಣಕ್ಕಾಗಿ ದುಡಿಯುತ್ತ ಆಸ್ಪತ್ರೆಯ ನಿರ್ಲಕ್ಷ್ಯ ಅಥವಾ ಚಿಕಿತ್ಸೆಯ ತೊಂದರೆಯಿಂದ ಒಂದೂ ಸಾವಾಗದಂತೆ ನೋಡಿಕೊಂಡ ಆರೋಗ್ಯ ಇಲಾಖೆ ಈಗ ಕೋವಿಡ್ ಹೋರಾಟ ದೊಂದಿಗೆ ಲಸಿಕೆ ನೀಡಿಕೆಯಲ್ಲಿ ಪ್ರಗತಿ ಸಾಧಿಸಲು ಪರದಾಡುತ್ತಿದೆ. ಜನ ನಿರ್ಲಕ್ಷ್ಯದಿಂದ ಕೋವಿಡ್ ತಂದು ಕೊಳ್ಳುತ್ತಾರೆ, ಹರಡುತ್ತಾರೆ. ಕೋವಿಡ್ ಬಂದ ಮೇಲೂ ನಿರ್ಲಕ್ಷ್ಯ ಮಾಡಿದವರು ಸಾವು ಕಂಡಿದ್ದಾರೆ. ಇಂತಹ ಸಾವು, ನೋವು ಬರದಿರಲು ಜನ ಕಾಳಜಿ ವಹಿಸಲಿ. ಮಾರಿ ಮನೆ ಬಾಗಿಲಿಗೆ ಬಂದಿದೆ.
-ಜೀಯು, ಹೊನ್ನಾವರ