Advertisement
ಕಾಲೇಜಿಗೆ ಬರಲು ಕೋವಿಡ್-19 ಪರೀಕ್ಷಾ ವರದಿ ಕಡ್ಡಾಯಗೊಳಿಸಿರುವ ಸರ್ಕಾರದನಿಯಮದಿಂದ ಕಾಲೇಜಿನತ್ತ ಯಾವೊಬ್ಬ ವಿದ್ಯಾರ್ಥಿ ಕೂಡ ಸುಳಿಯದಂತಾಗಿದೆ. ಶುರುವಾಗಿ ನಾಲ್ಕು ದಿನ ಕಳೆದರೂ ನಗರದ ಬಹುತೇಕ ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೇ ಭಣಗುಡುತ್ತಿವೆ. ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದರೂಶನಿವಾರ ಕೇವಲ ನಾಲ್ಕು ವಿದ್ಯಾರ್ಥಿನಿಯರು ಮಾತ್ರ ಆಗಮಿಸಿದ್ದರು. ಮೊದಲ ದಿನ ಬಂದಿದ್ದಎಂಕಾಂ ವಿದ್ಯಾರ್ಥಿನಿ ಕೂಡ ಸಹಪಾಠಿಗಳಿಲ್ಲದೇ ಬರುವುದನ್ನು ನಿಲ್ಲಿಸಿದ್ದಾರೆ. ಇನ್ನೂ ಬಿಎ ವಿದ್ಯಾರ್ಥಿಗಳಂತೂ ಕಾಲೇಜಿನತ್ತ ಸುಳಿದೇ ಇಲ್ಲ. ಅದು ಮಾತ್ರವಲ್ಲ ಬೇರೆ ಕಾಲೇಜುಗಳಿಗೂ ಮಕ್ಕಳು ಸುಳಿಯುತ್ತಿಲ್ಲ. ಇದರಿಂದ ಕಾಲೇಜುಗಳಲ್ಲಿ ಬೋಧಕರು ವಿದ್ಯಾರ್ಥಿಗಳಿಗಾಗಿ ಕಾದು ಕೂಡುವಂತಾಗಿದೆ. ಕಾಲೇಜಿಗೆ ಬರುತ್ತಾರಾದರೂ ಏನು ಬೇಕು ಎಂದು ವಿಚಾರಿಸಿಕೊಂಡು ಮರಳಿ ಹೋಗುತ್ತಾರೆ. ಮತ್ತೆ ಸುಳಿಯವುದೆ ಇಲ್ಲ.
Related Articles
Advertisement
ನಾಲ್ಕು ದಿನ ಕಳೆದರೂ ವಿದ್ಯಾರ್ಥಿಗಳು ಬರದಿರುವುದು ಅಚ್ಚರಿ ಮೂಡಿಸಿದೆ. ಸಾವಿರಾರು ವಿದ್ಯಾರ್ಥಿಗಳಿದ್ದು, ನಾಲ್ಕು ಜನ ಬಂದಿದ್ದಾರೆ.ಪರೀಕ್ಷೆ ಮಾಡಿಸಿಕೊಳ್ಳಲು ಹೆದರಿದ್ದು, ಮನೆಯಲ್ಲಿ ಪಾಲಕರು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಆನ್‌ಲೈನ್ ತರಗತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. –ಪ್ರೊ| ಮಲ್ಲನಗೌಡ, ಪ್ರಾಚಾರ್ಯ, ಸರ್ಕಾರಿ ಪದವಿ ಕಾಲೇಜ್.
ಕೋವಿಡ್-19 ಪರೀಕ್ಷೆಗೆ ವಿಶೇಷ ಕೇಂದ್ರ ಆರಂಭಿಸಿಲ್ಲ.ಆಯಾ ತಾಲೂಕು ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಂಡರೆ ವರದಿ ನೀಡಲಾಗುವುದು. ಮಾದರಿಗಳ ಸಂಗ್ರಹದ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿಲ್ಲ.ನಿತ್ಯ ಒಂದು ಸಾವಿರ ಮಾದರಿಗಳ ಪರೀಕ್ಷೆ ಮಾಡುವ ಸಾಮರ್ಥ್ಯದ ಯಂತ್ರಗಳಿದ್ದು, ವಿಳಂಬವಾಗಲ್ಲ. –ಡಾ|ಬಸವರಾಜ್ ಪೀರಾಪುರೆ, ರಿಮ್ಸ್ ನಿರ್ದೇಶಕ