Advertisement

ಹಾಸ್ಟೆಲ್‌ಗ‌ಳತ್ತ ಮುಖ ಮಾಡದ ವಿದ್ಯಾರ್ಥಿಗಳು

04:40 PM Dec 01, 2020 | Suhan S |

ಚಿಕ್ಕಮಗಳೂರು: ರಾಜ್ಯ ಸರ್ಕಾರದಿಂದ ಅಂತಿಮ ವರ್ಷದ ಪದವಿ, ಸ್ನಾತಕೋತರ, ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆತರಗತಿಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮೆಟ್ರಿಕ್‌ ನಂತರದವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಗಿದೆ. ಆದರೆ, ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿ ನಿಲಯಗಳತ್ತಾ ಮುಖ ಮಾಡುತ್ತಿಲ್ಲ.

Advertisement

ಜಿಲ್ಲಾದ್ಯಂತ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ನಡೆಸಲಾಗುವ 20ಕ್ಕೂ ಹೆಚ್ಚು ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳನ್ನು ತೆರೆಯಲಾಗಿದೆ. ಈ ವಿದ್ಯಾರ್ಥಿ ನಿಯಲಗಳಲ್ಲಿ 60 ವಿದ್ಯಾರ್ಥಿಗಳು ಮಾತ್ರ ವಾಸ್ತವ್ಯ ಹೊಂದಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿ 8, ಕಡೂರು ತಾಲೂಕಿನಲ್ಲಿ 3, ತರೀಕೆರೆ ತಾಲೂಕಿನಲ್ಲಿ 3, ಕೊಪ್ಪ ತಾಲೂಕಿನಲ್ಲಿ 2, ಮೂಡಿಗೆರೆ ತಾಲೂಕಿನಲ್ಲಿ 2, ಶೃಂಗೇರಿ ತಾಲೂಕಿನಲ್ಲಿ 1 ಹಾಗೂ ನರಸಿಂಹರಾಜಪುರ ತಾಲೂಕಿನಲ್ಲಿ 1 ವಸತಿ ನಿಲಯಗಳನ್ನು ತೆರೆಯಲಾಗಿದ್ದು60 ವಿದ್ಯಾರ್ಥಿಗಳು ಮಾತ್ರ ವಸತಿ ನಿಲಯಗಳಲ್ಲಿ ವಾಸ ವಾಗಿದ್ದಾರೆ.

ಈ ಹಿಂದೆ ಜಿಲ್ಲೆಯ ಎಲ್ಲಾ ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಲ್ಲಿ 2,000 ವಿದ್ಯಾರ್ಥಿಗಳು ವಾಸವಾಗಿದ್ದರು.ಅಂತಿಮ ವರ್ಷದ ಪದವಿ, ಸ್ನಾತಕೋತರ, ವೃತ್ತಿಪರ ಶಿಕ್ಷಣ ತಗರತಿಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕೆಂದು ಸರ್ಕಾರ ಘೋಷಿಸದೆ ಇರುವ ಹಿನ್ನೆಲೆಯಲ್ಲಿ ವಸತಿ ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂದು ಅಭಿಪ್ರಾಯಿಸಲಾಗುತ್ತಿದೆ.

ಕೋವಿಡ್‌ನ‌ ಈ ಸಂದರ್ಭದಲ್ಲಿ ಸರ್ಕಾರ ಆನ್‌ಲೈನ್‌ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲೇ ಆನ್‌ ಲೈನ್‌ ಶಿಕ್ಷಣ ಪಡೆಯುತ್ತಿದ್ದಾರೆ. ಉಳಿದಂತೆ ಕಾಲೇಜುಗಳಲ್ಲಿ ಪಾಠ- ಪ್ರವಚನ ಪಡೆದುಕೊಳ್ಳುವ ವಿದ್ಯಾರ್ಥಿಗಳು ಮಾತ್ರ ವಸತಿ ನಿಲಯಗಳಲ್ಲಿ ಆಶ್ರಯ ಪಡೆದುಕೊಂಡು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ವಸತಿ ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ತರಬೇಕು. ಕೋವಿಡ್‌ ವರದಿ ತರಬೇಕು ಎಂಬ ನಿಯಮವನ್ನು ಸರ್ಕಾರ ಹೊರಡಿಸಿದ್ದರಿಂದ ವಸತಿ ನಿಲಯಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಇದು ಒಂದು ಕಾರಣವೆನ್ನಲಾಗುತ್ತಿದೆ. ಜಿಲ್ಲೆಯಲ್ಲಿರುವ ವಸತಿ ನಿಲಯಗಳಲ್ಲಿ 1,300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರಲು ಅವಕಾಶ ಕಲ್ಪಿಸಲಾಗಿದೆ. ವಸತಿ ನಿಲಯಗಳ ದೊಡ್ಡ ಕೊಠಡಿಗಳಲ್ಲಿ ಈ ಹಿಂದೇ 6ರಿಂದ 7ಜನ ವಿದ್ಯಾರ್ಥಿಗಳು ಇರಲು ಅವಕಾಶ ನೀಡಲಾಗುತ್ತಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ದೊಡ್ಡ ಕೊಠಡಿಯಲ್ಲಿ 3 ಜನ ವಿದ್ಯಾರ್ಥಿಗಳು ಹಾಗೂ ಚಿಕ್ಕ ಕೊಠಡಿಗಳಲ್ಲಿ ಇಬ್ಬರು ಇರಲು ಅವಕಾಶ ನೀಡಲಾಗಿದೆ. ವಸತಿ ನಿಲಯದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ಸರ್ಕಾರದಿಂದ 2 ಮಾಸ್ಕ್ಗಳನ್ನು ನೀಡಲಾಗುತ್ತಿದೆ. ಸ್ಯಾನಿಟೈಸರ್‌ ಇರಿಸಲಾಗಿದೆ.

ಧರ್ಮಲ್‌ ಸ್ಕ್ಯಾನರ್‌ ಇರಿಸಲಾಗಿದೆ. ಪಲ್ಸ್‌ ಆಕ್ಟಿವೇಟರ್‌ ಇರಿಸಲಾಗಿದೆ. ಪ್ರತೀ ನಿತ್ಯ ಕೊಠಡಿಗಳನ್ನು ಶುಚಿಗೊಳಿಸಲಾಗುತ್ತಿದೆ. ಅಡುಗೆ ಇಬ್ಬಂದಿಗಳಿಗೆ ಹ್ಯಾಂಡ್‌ ಗ್ಲೌಸ್‌ ಮತ್ತು ಫೇಸ್‌ಶೀಲ್ಡ್‌ ಕವಚಗಳನ್ನು ನೀಡಿದ್ದು, ಕೋವಿಡ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಆನ್‌ಲೈನ್‌ ಶಿಕ್ಷಣ ಪಡೆದುಕೊಳ್ಳಲು ಅನೇಕ ತಾಂತ್ರಿಕ ಸಮಸ್ಯೆಗಳಿವೆ. ಇದರಿಂದ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಜಿಲ್ಲೆಯಲ್ಲಿ  ತೆರೆಯಲಾಗಿರುವ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಮುಂಜಾಗ್ರತೆಗಳನ್ನು ಕೈಗೊಳ್ಳಲಾಗಿದೆ.

Advertisement

ಜಿಲ್ಲೆಯಲ್ಲಿ ತೆರೆಯಲಾಗಿರುವ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್‌ ಮುಂಜಾಗ್ರತೆ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ವಸತಿ ನಿಲಯಗಳಲ್ಲಿ ಆಶ್ರಯ ಪಡೆದುಕೊಳ್ಳಬಹುದು. -ಮಲ್ಲಿಕಾರ್ಜುನ್‌, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next