Advertisement

ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ ವಿದ್ಯಾರ್ಥಿಗಳು

04:30 PM Nov 24, 2020 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣವಾದ ಬಳಿಕ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾರಂಭವಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ.

Advertisement

ಕೋವಿಡ್‌-19 ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿಪಾಲಿಸುವ ಮೂಲಕ ಕಾಲೇಜುಗಳನ್ನು ಆರಂಭಿಸಲಾಗಿದೆ.ಆದರೆ ವಿದ್ಯಾರ್ಥಿಗಳು ಕೊರೊನಾ ಭೀತಿಯಿಂದ ತರಗತಿಗಳಿಗೆ ಹಾಜರಾಗಲು ಹಿಂದೆ ಮುಂದೆ ನೋಡುತ್ತಿದ್ದಾರೆ.ಜಿಲ್ಲೆಯ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿ ಬಿದನೂರು, ಬಾಗೇಪಲ್ಲಿ ತಾಲೂಕಿನಲ್ಲಿ ಕಾಲೇಜುಗಳನ್ನು ಆರಂಭಿಸುವ ಮುನ್ನ ಕಾಲೇಜಿನ ಒಳಗೆ ಮತ್ತು ಹೊರಗೆ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿ ಸೌಲಭ್ಯ ಕಲ್ಪಿಸಿದರೂ ವಿದ್ಯಾರ್ಥಿಗಳು ಕಾಲೇಜಿಗೆ ನಿರೀಕ್ಷಿತ ಪ್ರಮಾಣದಲ್ಲಿ ಹಾಜರಾಗುತ್ತಿಲ್ಲ.

ಕಾಲೇಜಿಗೆ ಬರುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿಕೋವಿಡ್‌-19 ಪರೀಕ್ಷೆ ನಡೆಸಲಾಗುತ್ತಿದ್ದು ವಿದ್ಯಾರ್ಥಿಗಳನೆಗೆಟಿವ್‌ ವರದಿ ಬಂದ ಬಳಿಕ ಕಾಲೇಜಿನಲ್ಲಿ ಪ್ರವೇಶಮಾಡಲು ಅವಕಾಶ ಕಲ್ಪಿಸಲಾಗಿದೆ. ಅದರ ಜತೆಗೆ ಪೋಷಕರಿಂದ ಅನುಮತಿ ಪತ್ರ ತರಲು ಸೂಚನೆ ನೀಡಲಾಗಿದ್ದು ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಬೇಕಾ? ಅಥವಾ ಬೇಡವಾ? ಎಂಬ ಗೊಂದಲದಲ್ಲಿ ಸಿಲುಕುವಂತಾಗಿದೆ.

ಪ್ರಸ್ತುತ ಪ್ರಾಯೋಗಿಕವಾಗಿ ಅಂತಿಮ ಪದವಿ ವಿದ್ಯಾರ್ಥಿ ಗಳಿಗೆ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸಿ ಆಫ್‌ಲೈನ್‌ ಮತ್ತು ಆನ್‌ ಲೈನ್‌ ಮೂಲಕ ಪಾಠಪ್ರವಚನ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರಥಮದಲ್ಲಿ ಕಾಲೇಜು ಆರಂಭಿಸಿರು ವವ್ಯವಸ್ಥೆಯಲ್ಲಿ ಯಾವುದೇ ಲೋಪ ಉಂಟಾಗದಿದ್ದರೇ ಮುಂದಿನ ದಿನಗಳಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ಸೇರಿದಂತೆ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಕಾರ್ಯಪಡೆ ರಚನೆ: ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆಪೂರಕ ಸೌಲಭ್ಯ ಕಲ್ಪಿಸಲಾಗಿದೆಯೇ? ತರಗತಿ ನಡೆಯುವ ವೇಳೆ ಸಾಮಾಜಿಕ ಅಂತರ ಕಾಯ್ದಿರಿಸಿಕೊಳ್ಳಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲು ನೋಡಲ್‌ ಅಧಿಕಾರಿ ಒಳಗೊಂಡಂತೆ ಒಂದು ಕಾರ್ಯಪಡೆ ರಚಿಸಲಾಗಿದ್ದು ಈ ಕಾರ್ಯಪಡೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಚರಿಸಿ ವ್ಯವಸ್ಥೆಗಳನ್ನು ಪರಿಶೀಲಿಸಲಿದೆ.

Advertisement

ಕೋವಿಡ್‌ ಪರೀಕ್ಷಾ ವರದಿ ವಿಳಂಬ: ಸರ್ಕಾರದ ಆದೇಶದಂತೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಸೋಂಕಿನ ಪರೀಕ್ಷೆ ಮಾಡಿಕೊಂಡಿರಬೇಕು. ಪರೀಕ್ಷಾ ವರದಿ ನೆಗೆಟಿವ್‌ ಇದ್ದರೆ ಮಾತ್ರ ಕಾಲೇಜಿನಲ್ಲಿಪ್ರವೇಶ ಕಲ್ಪಿಸಲು ಅವಕಾಶ. ಆದರೆ ಆರೋಗ್ಯ ಇಲಾಖೆ ಕೋವಿಡ್‌-19ಪರೀಕ್ಷಾ ವರದಿ ವಿಳಂಬವಾಗಿಬರುತ್ತಿರುವುದ ರಿಂದ ವಿದ್ಯಾರ್ಥಿಗಳೂ ಕೋವಿಡ್ ಸೋಂಕಿನ ಭೀತಿಯಿಂದ ಕಾಲೇಜಿಗೆ ಬರಲು ಮೀನಮೇಷ ಎಣಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಸುಮಾರು 2,332 ವಿದ್ಯಾರ್ಥಿಗಳ ಕೋವಿಡ್ ಸೋಂಕಿನ ಪರೀಕ್ಷೆ ನಡೆಸಲಾಗಿದೆ. ಅದರ ವರದಿಯನ್ನು ತ್ವರಿತವಾಗಿ ನೀಡಲು ಕ್ರಮಕೈಗೊಂಡಿದ್ದೇವೆ. ಇಂದಿರಾ ಆರ್‌.ಕಬಾಡೆ, ಜಿಲ್ಲಾ ಆರೋಗ್ಯಾಧಿಕಾರಿ

ರಾಜ್ಯ ಸರ್ಕಾರದ ಆದೇಶದಂತೆ ಕಾಲೇಜು ಆರಂಭಿಸಲಾಗಿದ್ದು ವಿದ್ಯಾರ್ಥಿ ಪೋಷಕರ ಅನುಮತಿ ಕಡ್ಡಾಯ. ಪ್ರತಿಯೊಬ್ಬ ವಿದ್ಯಾರ್ಥಿಗೆಕೋವಿಡ್‌-19 ಪರೀಕ್ಷೆ ನಡೆಸಿ ನೆಗೆಟಿವ್‌ಬಂದರೇ ಮಾತ್ರಕಾಲೇಜಿನಲ್ಲಿ ಪ್ರವೇಶ. ಜತೆಗೆ ಕಾಲೇಜುಗಳಲ್ಲಿ ಕೈಗೊಂಡಿರುವ ವ್ಯವಸ್ಥೆ ಪರಿಶೀಲಿಸಲು 5 ಜಿಲ್ಲೆಗೆ ಒಳಗಂಡಂತೆ ಕಾರ್ಯಪಡೆ ರಚಿಸಲಾಗಿದೆ. ಗೌರಿ ನಾಯ್ಡು, ನೋಡಲ್‌ ಅಧಿಕಾರಿ ಬೆಂಗಳೂರು

ಸರ್ಕಾರ ಮುನ್ನೆಚ್ಚರಿಕೆ ಕ್ರಮಕೈಗೊಂಡು ಕಾಲೇಜು ಆರಂಭಿಸಿರು ವುದು ಒಳ್ಳೆಯ ವಿಚಾರ. ಆನ್‌ ಲೈನ್‌ನಲ್ಲಿ ನೆಟ್‌ವರ್ಕ್‌ ಸಮಸ್ಯೆ ಇದ್ದು ಗೊಂದಲ ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ರಾಧಿಕಾ, ಅಂತಿಮ ಬಿಎ ವಿಭಾಗದ ವಿದ್ಯಾರ್ಥಿನಿ ಶಿಡ್ಲಘಟ್ಟ ಸ.ಪ.ದ ಕಾಲೇಜು

ಕೋವಿಡ್‌-19 ಪರೀಕ್ಷೆ ಮಾಡಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಕಠಿಣ ಕ್ರಮಕೈಗೊಳ್ಳಲಾಗಿದ್ದು ಕಾಲೇಜಿಗೆ ಬರಲು ಯಾವುದೇ ಆತಂಕವಿಲ್ಲ. ಮುಬಾರಕ್‌, ಅಂತಿಮ ಬಿಕಾಂ ವಿಭಾಗದ ವಿದ್ಯಾರ್ಥಿನಿ ಶಿಡ್ಲಘಟ್ಟ ಸ.ಪ.ದ.ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next