Advertisement
– ಭಾರತವು “ಆರೋಗ್ಯ ತುರ್ತು ಪರಿಸ್ಥಿತಿ’ಯತ್ತ ವಾಲುವ ಲಕ್ಷಣ ಗೋಚ ರಿಸುತ್ತಿದೆ. ಕೊರೊನಾದ ಎರಡನೇ ಅಲೆಯು ನಿರೀಕ್ಷೆಗೆ ಮೀರಿದ ವೇಗದಲ್ಲಿ ವ್ಯಾಪಿಸುತ್ತಿದ್ದು, ದೇಶಾದ್ಯಂತ ಆರೋಗ್ಯ ಮೂಲಸೌಕರ್ಯಗಳ ಅಭಾವ ಸೃಷ್ಟಿಯಾಗಿದೆ.
Related Articles
Advertisement
ಆಮ್ಲಜನಕದ ಸರಾಗ ಉತ್ಪಾದನೆ ಮತ್ತು ಸರಬ ರಾಜಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ಗುರುವಾರ ವಿಪತ್ತು ನಿರ್ವಹಣ ಕಾಯ್ದೆಯನ್ನು ಜಾರಿ ಮಾಡಿ, ಹೊಸ ನಿರ್ದೇ ಶನ ನೀಡಿದೆ. ರಾಜ್ಯ ಗಡಿಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಆಮ್ಲಜನಕದ ಸರಬರಾಜು ಆಗುವಂತೆ ನೋಡಿಕೊಳ್ಳಿ. ಯಾವುದೇ ಸಮಸ್ಯೆ ಉಂಟಾದರೂ ಅದಕ್ಕೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಯೇ ಹೊಣೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಎಚ್ಚರಿಸಿದ್ದಾರೆ.
ಕೋರ್ಟ್‌ಗಳ ಮಧ್ಯಪ್ರವೇಶ :
ಕೋವಿಡ್ ಆರ್ಭಟದಿಂದಾಗಿ ಹಲವು ರಾಜ್ಯಗಳು ತತ್ತರಿಸಿರುವಂತೆ ಸುಪ್ರೀಂ ಕೋರ್ಟ್ ಮಾತ್ರವಲ್ಲದೆ ದಿಲ್ಲಿ, ಬಾಂಬೆ, ಸಿಕ್ಕಿಂ, ಮಧ್ಯಪ್ರದೇಶ, ಕೋಲ್ಕತ್ತಾ, ಗುಜರಾತ್, ಅಲಹಾಬಾದ್ ಹೈಕೋರ್ಟ್ ಸಹಿತ ಹಲವು ನ್ಯಾಯಾಲಯಗಳು ಕೊರೊನಾ ಸಂಪನ್ಮೂಲಗಳ ಕೊರತೆ ಕುರಿತು ವಿಚಾರಣೆ ನಡೆಸಿವೆ. ವಿಚಾರಣೆ ವೇಳೆ ನ್ಯಾಯಾಲಯಗಳು ನೀಡಿರುವ ಸೂಚನೆಗಳು ಇಂತಿವೆ:
ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಆಮ್ಲ ಜನಕ ಪೂರೈಕೆ, ಅಗತ್ಯ ಔಷಧ ಮತ್ತು ಲಸಿಕೆ ವಿತರಣೆ ವಿಧಾನದ ಕುರಿತ ರಾಷ್ಟ್ರೀಯ ಯೋಜನೆಯನ್ನು ಕೂಡಲೇ ನಮ್ಮ ಮುಂದಿರಿಸಿ.– ಸುಪ್ರೀಂ ಕೋರ್ಟ್
ಪರಿಸ್ಥಿತಿ ನೋಡಿದರೆ ಸರಕಾರಗಳಿಗೆ ಜನರ ಪ್ರಾಣದ ಬಗ್ಗೆ ಚಿಂತೆಯೇ ಇಲ್ಲ ಎಂಬಂತೆ ಕಾಣುತ್ತಿದೆ. ಹೇಗಾದರೂ ಸರಿ… ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಿ. – ದಿಲ್ಲಿ ಹೈಕೋರ್ಟ್
ಇದು ತುರ್ತು ಪರಿಸ್ಥಿತಿ ಎಂದು ಅರ್ಥ ಮಾಡಿಕೊಳ್ಳಿ. ರೆಮಿಡಿಸಿವಿರ್‌ನಂಥ ಔಷಧ ಗಳ ಲಭ್ಯತೆ, ಬಳಕೆ ಬಗ್ಗೆ ನಾಗರಿಕರಿಗೆ ಸಲಹೆ ನೀಡಿ. ಹಿರಿಯ ನಾಗರಿಕರಿಗೆ ಮನೆ ಯಲ್ಲೇ ಲಸಿಕೆ ನೀಡಲು ವ್ಯವಸ್ಥೆ ಮಾಡಿ.– ಬಾಂಬೆ ಹೈಕೋರ್ಟ್
ಸರಕಾರವು ತುರ್ತು ಸಭೆ ಕರೆದು, ರೆಮಿಡಿಸಿವಿರ್ ಔಷಧ ವಿತರಣೆಗಾಗಿನಿಯಮ ರೂಪಿಸ ಬೇಕು. ಅಗತ್ಯವಿರುವ ಪೀಡಿತರಿಗೆ ಲಭ್ಯವಾಗುವಂತೆ ನೋಡಿಕೊಳ್ಳ ಬೇಕು.– ಅಲಹಾಬಾದ್ ಹೈಕೋರ್ಟ್
ಪ್ರಕರಣ ಭಾರೀ ಏರಿಕೆ :
ರಾಜ್ಯದಲ್ಲಿ ಹೊಸ ಪೀಡಿತರ ಸಂಖ್ಯೆ ಒಂದೇ ದಿನ 25 ಸಾವಿರದ ಗಡಿ ದಾಟಿ ದರೆ, ದೇಶದಲ್ಲಿ ಇದೇ ಮೊದಲ ಬಾರಿಗೆ 3.14 ಲಕ್ಷ ಮಂದಿಯ ವರದಿ ಪಾಸಿಟಿವ್ ಆಗಿದೆ. ಗುರುವಾರ ರಾಜ್ಯದಲ್ಲಿ 25,795 ಮಂದಿಗೆ ಸೋಂಕು ತಗುಲಿದ್ದು, 123 ಮಂದಿ ಸಾವಿಗೀಡಾಗಿದ್ದಾರೆ. ಬೆಂಗಳೂರಿ ನಲ್ಲಿಯೇ 15,244 ಮಂದಿಗೆ ಸೋಂಕು ತಗುಲಿದ್ದರೆ 68 ಮಂದಿ ಮೃತಪಟ್ಟಿದ್ದಾರೆ.
ಆಮ್ಲಜನಕ ಖಾಲಿ :
ಸಣ್ಣಪುಟ್ಟ ಆಸ್ಪತ್ರೆಗಳು ಮಾತ್ರವಲ್ಲ, ದಿಲ್ಲಿಯ ದೊಡ್ಡ ಆಸ್ಪತ್ರೆಗಳಲ್ಲೂ ಆಮ್ಲ ಜನಕದ ಅಭಾವ ತಲೆದೋರಿದೆ. “ರೋಗಿ ಗಳಿಗೆ ಬದುಕು ನೀಡಬೇಕಾದ ನಾವು ಆಮ್ಲಜನಕ ಕೂಡ ಒದಗಿಸಲು ಸಾಧ್ಯ ವಾಗದೆ ಅಸಹಾಯಕರಾಗಿದ್ದೇವೆ’ ಎಂದು ವೈದ್ಯರೇ ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಗಳ ಹೊರಗೆ “ಬೆಡ್ ಖಾಲಿ ಇಲ್ಲ’ ಎಂಬ ಫಲಕ ತೂಗುಹಾಕಲಾಗಿದೆ.