ಹೊಸದಿಲ್ಲಿ: ದೇಶದಲ್ಲಿ ಕೋವಿಡ್ 19 ಹೊಸ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 39,786 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದೇ ಸಮಯದಲ್ಲಿ 723 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದು ಕಳೆದ ಮೂರು ತಿಂಗಳಲ್ಲೇ ದಾಖಲಾದ ಅತೀ ಕಡಿಮೆ ಸಾವಿನ ಸಂಖ್ಯೆ.
ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಕೇರಳದಲ್ಲಿ 12,100 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಮಹಾರಾಷ್ಟ್ರದಲ್ಲಿ 9366 ಪ್ರಕರಣಗಳು ಪತ್ತೆಯಾಗಿದೆ. ತಮಿಳುನಾಡು ರಾಜ್ಯದಲ್ಲಿ 3867 ಪ್ರಕರಣಗಳು, ಆಂಧ್ರ ಪ್ರದೇಶ ರಾಜ್ಯದಲ್ಲಿ 3175 ಪ್ರಕರಣಗಳು ಮತ್ತು ಒಡಿಶಾ ರಾಜ್ಯದಲ್ಲಿ 2870 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ.
ಇದನ್ನೂ ಓದಿ:ಡೀಲ್ ನಡೆಯುವುದು ಕಾವೇರಿ ನಿವಾಸದ ಹಿಂಭಾಗದಲ್ಲಿ: ವಿಜಯೇಂದ್ರ ವಿರುದ್ದ ಗುಡುಗಿದ ಯತ್ನಾಳ್
ಈ ಐದು ರಾಜ್ಯಗಳು ಭಾನುವಾರ ವರದಿಯಾದ ದೈನಂದಿನ ಹೊಸ ಪ್ರಕರಣಗಳಲ್ಲಿ ಶೇಕಡಾ 78.78 ರಷ್ಟು ಪಾಲು ಹೊಂದಿದೆ. ಕೇರಳ ರಾಜ್ಯವೊಂದರಲ್ಲೇ 30.41 ರಷ್ಟು ಹೊಸ ಸೋಂಕು ಪ್ರಕರಣಗಳು ಕಂಡು ಬಂದಿದೆ.