Advertisement

ವಿಘ್ನ ನಿವಾರಕನಿಗೂ ಕೋವಿಡ್ ಬಿಸಿ

01:42 PM Aug 22, 2020 | Suhan S |

ಮಾಸ್ತಿ: ಕೋವಿಡ್ ಸಂಕಷ್ಟ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಗೌರಿ-ಗಣೇಶ ಹಬ್ಬ ಆಚರಿಸಲು ಹೋಬಳಿಯ ಜನತೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ದೃಶ್ಯ ಶುಕ್ರವಾರ ಕಂಡು ಬಂತು. ಆದರೆ, ಗಣೇಶ ಮೂರ್ತಿಗಳನ್ನು ಕೇಳುವವರೇ ಇಲ್ಲದಂತಾಗಿತ್ತು.

Advertisement

ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರದ ಪರಿಷ್ಕೃ ತ ಮಾರ್ಗಸೂಚಿಯಂತೆ ಗೌರಿ-ಗಣೇಶ ಹಬ್ಬ ಸರಳವಾಗಿ ಆಚರಣೆಗೆ ಅವಕಾಶ ಕೊಟ್ಟಿದ್ದರೂ ಜನರಲ್ಲಿ ಹಿಂದಿನಂತೆ ಹಬ್ಬದ ಆಸಕ್ತಿ ಇರಲಿಲ್ಲ. ಡಿ.ಜೆ. ಸೌಂಡ್‌, ಪಟಾಕಿ, ಕುಣಿತ ಇವುಗಳನ್ನೆಲ್ಲ ಸರ್ಕಾರ ಕೋವಿಡ್ ಪ್ರಯುಕ್ತ ನಿಷೇಧಿಸಿದೆ.

ಗ್ರಾಮೀಣ ಭಾಗದ ಯುವಕರು, ಗಣೇಶ ಮೂರ್ತಿ ಆಯೋಜಕರಲ್ಲೂ ಆಸಕ್ತಿ ಕಡಿಮೆ ಆಗಿದ್ದು, ಗೌರಿ-ಗಣೇಶ ಮೂರ್ತಿಗಳನ್ನು ಕೊಳ್ಳುವವರೆ ಇಲ್ಲದಂತಾಗಿದೆ. ಗ್ರಾಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಗಣಪತಿ ಮೂರ್ತಿ ಮಾರಾಟ ಮಾಡುತ್ತಿದ್ದರೂ, ಕೊಳ್ಳುವವರ ಸಂಖ್ಯೆ ಕ್ಷೀಣಿಸಿದೆ.= ಪ್ರತಿ ವರ್ಷ ವಿವಿಧ ಆಕರ್ಷಕ ಗಣಪತಿ ಮೂರ್ತಿ ತಯಾರು ಮಾಡಿ ಮಾರಾಟ ಮಾಡುತ್ತಿದ್ದೆವು, ಈ ಬಾರಿ ಕೋವಿಡ್ ದಿಂದ ಕೆಲವೇ ಗಣಪತಿ ಮೂರ್ತಿ ತಯಾರಿಸಿದ್ದೇವೆ. ಅವುಗಳೂ ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡವಾಗುತ್ತಿಲ್ಲ. ಜೊತೆಗೆ ಸರ್ಕಾರದ ಮಾರ್ಗಸೂಚಿ ಯಂತೆ ಹೆಚ್ಚು ಗಣಪತಿ ಮಾರಾಟವಾಗದ್ದರಿಂದ ನಮ್ಮ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಗಣಪತಿ ಮೂರ್ತಿ ಮಾರಾಟಗಾರ ಕುಮಾರ್‌ ಹೇಳುತ್ತಾರೆ.

ಗಣೇಶ ಚತುರ್ಥಿ, ಮೊಹರಂ ಆಚರಣೆ : ಕೆಜಿಎಫ್ ಪೊಲೀಸ್‌ ಜಿಲ್ಲೆಯಲ್ಲಿ ಗಣೇಶ ಚತುರ್ಥಿ, ಮೊಹರಂ ಹಬ್ಬವನ್ನು ಶಾಂತಿ, ಸೌಹಾರ್ದತೆ ಯಿಂದ ಆಚರಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್‌ ಸಲಹೆ ನೀಡಿದರು. ನಗರದ ಜಿಲ್ಲಾ ಪೊಲೀಸ್‌ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಎಲ್ಲಾ ಸಮುದಾಯ ದವರು ಹಬ್ಬ ಆಚರಿಸಿಕೊಂಡು ಬಂದಿರುವುದು ಹೆಮ್ಮೆಯ ವಿಚಾರ,

ಅದೇ ರೀತಿ ಗಣೇಶ ಚತುರ್ಥಿ, ಮೊಹರಂ ಹಬ್ಬವನ್ನು ಮಾಡುವಂತೆ ಸಲಹೆ ನೀಡಿದರು. ಡಿವೈಎಸ್ಪಿ ಬಿ.ಕೆ.ಉಮೇಶ್‌ ಮಾತನಾಡಿ, ಗಣೇಶ ಚತುರ್ಥಿ ಅಂಗವಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಬೇಕಾದರೂ ನಿಯಮಾನುಸಾರ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಕಾರ್ಯಕ್ರಮ ನಡೆಸುವಂತೆ ಸಲಹೆ ನೀಡಿದರು.

Advertisement

ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕುಗಳ ವಿವಿಧ ಹಿಂದೂ ಸಂಘಟನೆ, ಮುಸ್ಲಿಂ ಸಮುದಾಯದವರು ಸಭೆಯಲ್ಲಿ ಭಾಗವಹಿಸಿದ್ದು, ಹಿಂದಿನಿಂದಲೂ ನಡೆಸಿಕೊಂಡು ಬಂದಂತೆ ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಸಂಘಟಕರು ಭರವಸೆ ನೀಡಿದರು. ಸರ್ಕಲ್‌ ಇನ್ಸ್‌ಪೆಕ್ಟರ್‌ಗಳಾದ ಜಿ.ಪಿ.ರಾಜು, ಮುಸ್ತಾಕ್‌ಪಾಷ, ಸೂರ್ಯಪ್ರಕಾಶ್‌, ವೆಂಕಟರಮಣಪ್ಪ, ಸುನಿಲ್‌ಕುಮಾರ್‌, ವೆಂಕಟೇಶಮೂರ್ತಿ, ಆರ್‌ಪಿಐ ಮಂಜುನಾಥ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next