Advertisement
ಹೌದು, ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ನಿರ್ಬಂಧದಿಂದ ಕೆಲವು ವರ್ಗದವರ ಜೀವನ ನಿರ್ವಹಣೆ ದಿನದಿಂದದಿನಕ್ಕೆ ಕಠಿಣ ಆಗುತ್ತಿದೆ. ಬದುಕು ಸಾಗಿಸುವುದಾದರೂ ಹೇಗೆ ಎಂಬ ಚಿಂತೆಗೆದೂಡುತ್ತಿದೆ. ಪ್ರತಿ ದಿನದ ಕೌಟುಂಬಿಕ ಜೀವನ ನಿರ್ವಹಣೆ ಯಕ್ಷ ಪ್ರಶ್ನೆಯಾಗಿದೆ.
Related Articles
Advertisement
ಹೋಟೆಲ್‌ಗೆ ಮತ್ತಷ್ಟು ಸಮಯ ಕೊಡಿ : ಹೋಟೆಲ್‌ಗಳಿಗೆ ಬೆಳಗ್ಗೆ 10ರ ವರೆಗೆ ತೆರೆಯಲು ಅವಕಾಶವೇನೋ ನೀಡಲಾಗಿದೆ. ಆದರೆ ಪಾರ್ಸೆಲ್ ಮಾತ್ರ ನೀಡಬೇಕಾಗುವುದರಿಂದಸಾಕಷ್ಟು ಸಮಸ್ಯೆ ಆಗುತ್ತಿದೆ. ಎಷ್ಟು ಜನ ಗ್ರಾಹಕರು ಬರುತ್ತಾರೋ,ಏನೇನು ಆರ್ಡರ್ ಮಾಡುವರೋ ಅದನ್ನ ನೀಡಬೇಕಾಗುತ್ತಿದೆ. 10ಗಂಟೆ ಒಳಗೆ ಇಷ್ಟೇ ಜನ ಗ್ರಾಹಕರು ಬರುತ್ತಾರೆ ಎಂದು ಲೆಕ್ಕಾಚಾರಮಾಡುವುದು ಕಷ್ಟ. ತಯಾರು ಮಾಡಿದಂತಹ ತಿಂಡಿ, ತಿನಿಸು ವ್ಯಾಪಾರವಾದರೆ ಸರಿ. ಇಲ್ಲ ಎಂದರೆ ಹಾಕಿದ ಬಂಡವಾಳವೂ ಗಿಟ್ಟುವುದೇ ಇಲ್ಲ. ಬಹಳ ಕಷ್ಟ ಆಗುತ್ತಿದೆ. ಪಾರ್ಸೆಲ್‌ಗೆ ಇನ್ನೂ ಹೆಚ್ಚಿನಸಮಯ ನೀಡಿದರೆ ಅನುಕೂಲ ಆಗುತ್ತದೆ ಎಂದು ಬೆಣ್ಣೆದೋಸೆ ಹೋಟೆಲ್ ಮಾಲೀಕ ಬಸವರಾಜ್ ಹೇಳುತ್ತಾರೆ.
ಈ ವರ್ಷವೂ ತಪ್ಪುತ್ತಿಲ್ಲ ತೊಂದರೆ :
ಎಲೆಕ್ಟ್ರಿಕಲ್ ಅಂಗಡಿಗಳಲ್ಲಿ ಜನಸಂದಣಿ ಆಗಲಿಕ್ಕೆ ಸಾಧ್ಯವೇ ಇಲ್ಲ. ಏನಾದರೂಕೆಲಸ ಇದ್ದರೂ ಒಬ್ಬಿಬ್ಬರು ಬರಬಹುದು. ಆದರೂ ನಮಗೆ 10 ಗಂಟೆ ತನಕ ಮಾತ್ರ ಅಂಗಡಿ ತೆರೆಯುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಷ್ಟೊತ್ತಿಗೆ ವ್ಯಾಪಾರಆಗುವುದೇ ಇಲ್ಲ. ಈಗ ಹೇಗೋ ಮೊಬೈಲ್ ಇವೆ. ಕಸ್ಟಮರ್‌ಗಳು ಫೋನ್ ಮಾಡಿಕೊಂಡು ಬಂದು ರಿಪೇರಿಗೆ ಕೊಟ್ಟು ಹೋಗುತ್ತಾರೆ. ಮರುದಿನವೋ,
ಮುಂದಿನ ದಿನವೋ ರಿಪೇರಿ ಮಾಡಿಕೊಟ್ಟರೆ ಹಣ ಸಿಗುತ್ತದೆ. ಅದರಲ್ಲೇ ಜೀವನ ನಡೆಸಬೇಕಾಗಿದೆ. ಕಳೆದ ವರ್ಷವೂ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಈ ವರ್ಷವೂ ತಪ್ಪಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಸಂತೋಷ್ ದೊಡ್ಮನಿ.
ಈಗಿನ ದುಡಿಮೆಯಲ್ಲಿ ಜೀವನ ಕಷ್ಟ : ನಮ್ಮದು ಅವತ್ತೇ ದುಡಿದು ಜೀವನ ನಡೆಸುವ ಕೆಲಸ. ಬೆಳಗ್ಗೆ 6 ಗಂಟೆಗೆ ಬಾಗಿಲು ತೆಗೆದರೂ ಗಿರಾಕಿ ಬರೋದು ತಡ. ಬಂದವರಿಗೆ ಕಟಿಂಗ್, ಶೇವಿಂಗ್ ಮಾಡಿ ಎಷ್ಟು ಆಗುತ್ತೋ ಅದರಲ್ಲೇ ಜೀವನ ಮಾಡಬೇಕು. ಬಾಡಿಗೆ ಎಲ್ಲವೂ ಮೈ ಮೇಲೆ ಬರುತ್ತದೆ.ಗಂಡ-ಹೆಂಡತಿ, ಮಕ್ಕಳು ಇದ್ದರೂ ಈಗ ಆಗುತ್ತಿರುವದುಡಿಮೆಯಲ್ಲಿ ಜೀವನ ನಡೆಸುವುದು ಕಷ್ಟ ಆಗುತ್ತಿದೆ ಎಂದು ಹೇರ್ ಕಟಿಂಗ್ ಸಲೂನ್ ಮಾಲಿಕ ಮೋಹನ್ ಹೇಳುತ್ತಾರೆ.
-ರಾ. ರವಿಬಾಬು