ಸಿರುಗುಪ್ಪ: ಕೋವಿಡ್ 2ನೇ ಅಲೆಯಿಂದಾಗಿ ಸರ್ಕಾರ ಜಾರಿಗೆ ತಂದಿರುವ ಕೋವಿಡ್ ಕರ್ಫ್ಯೂನಿಂದಾಗಿ ಬೀದಿಬದಿ ವ್ಯಾಪಾರಿಗಳು ಜೀವನ ಸಾಗಿಸುವುದು ಕಷ್ಟಕರವಾಗಿದೆ.
ಕಳೆದ ವರ್ಷ ಲಾಕ್‌ಡೌನ್ ನಿಂದಾಗಿ ಕಷ್ಟ ಅನುಭವಿಸಿದ್ದವರಿಗೆ ಮತ್ತೂಂದು ಬಾರಿ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಹಣ್ಣು, ತರಕಾರಿ, ಇತರೆ ಅಂಗಡಿಗಳಿಗೆ ಮಾಡಿರುವ ಸಾಲ ತೀರಿಸಲು ಆಗದೆ,ಸಂಸಾರವನ್ನು ನಡೆಸಲಾಗದೆ, ಸಂಕಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷ ಅನುಭವಿಸಿದ ಲಾಕ್‌ಡೌನ್ ಸಂಕಷ್ಟದಿಂದ ಹೊರಬಂದು ಮತ್ತೆ ಚೇತರಿಕೆಯಾಗುವ ಮುನ್ನವೇ ಕೊರೊನಾ 2ನೇಅಲೆ ಆಘಾತ ಸೃಷ್ಟಿಸಿದೆ.
ಕಳೆದ ಹತ್ತು ದಿನಗಳಿಂದ ಅಂಗಡಿ ಮುಗ್ಗಟ್ಟು ಬಾಗಿಲು ಹಾಕಿರುವುದರಿಂದಜೀವನ ನಡೆಸಲು ಸಾಕಷ್ಟುಕಷ್ಟವಾಗುತ್ತಿದೆ. ಮನೆ ಬಾಡಿಗೆ, ವಿದ್ಯುತ್, ನೀರಿನ ಶುಲ್ಕ ಸೇರಿ ಇತರೆಮನೆ ಖರ್ಚುಗಳು ಹೆಚ್ಚಾಗಿ ಸಾಲ ಮಾಡಿ ತಂದು ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿಎದುರಾಗುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷದ ಕೋವಿಡ್ ದಿಂದಾಗಿ ನಮ್ಮಬದುಕು ದುಸ್ತರವಾಗಿತ್ತು. ಆದರೆ ಕಳೆದ ಬಾರಿಗಿಂತಲೂ ಈ ಬಾರಿ ಸಾಕಷ್ಟು ನೋವು ಸಂಕಟಗಳನ್ನು ಅನುಭವಿಸುವಂತಾಗಿದೆ. ಜೀವನ ನಿರ್ವಹಣೆ ಹೇಗೆಂಬುದರಪ್ರಶ್ನೆ ಉದ್ಭವವಾಗುತ್ತಿದೆ ಎಂದು ನಗರದ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು ಗೋಳಾಡುತ್ತಿದ್ದಾರೆ. ಅಂದೇ ದುಡಿದು ಜೀವನ ನಡೆಸಬೇಕಾದವರು ಬಹಳ ಕಷ್ಟ ಅನುಭವಿಸುವಂತಾಗಿದೆ.
ಕಳೆದ ವರ್ಷದ ಸಂಕಷ್ಟವನ್ನು ಎದುರಿಸಿಕೊಂಡು ಜೀವನಕಟ್ಟಿಕೊಳ್ಳುತ್ತಿರುವ ದುಡಿಯುವ ವರ್ಗಕ್ಕೆ ಲಾಕ್‌ಡೌನ್ ನುಂಗಲಾರದತುತ್ತಾಗಿದೆ. ಇಂಥ ಸಂದರ್ಭದಲ್ಲಿಸರ್ಕಾರ ನಮ್ಮಂಥವರಿಗೆ ಪ್ಯಾಕೇಜ್‌ಘೋಷಣೆ ಮಾಡಬೇಕೆಂದು ಹಣ್ಣುವ್ಯಾಪಾರಿ ರಹಿಂ, ತರಕಾರಿ ವ್ಯಾಪಾರಿದುರುಗಮ್ಮ ಸರ್ಕಾರವನ್ನು ಒತ್ತಾಯಿಸಿದ್ದಾರೆ.