Advertisement
ರೇಷ್ಮೆ ಸೀರೆಗಳಿಗೆ ಹೆಸರಾಗಿದ್ದ ದೊಡ್ಡ ಬಳ್ಳಾಪುರದ ಲಿ ಈಗ ಶೇ.10 ಭಾಗ ಮಾತ್ರ ರೇಷ್ಮೆ ಬಟ್ಟೆ ತಯಾರಿಕೆ ನಡೆಯುತ್ತಿದೆ. ಕೋವಿಡ್ ಉದ್ಭವಿಸುವುದಕ್ಕೂ ಮುನ್ನವೇ ಗಗನಕ್ಕೇರಿದ ರೇಷ್ಮೆ ಬೆಲೆ,ನೇಯ್ದ ಬಟ್ಟೆಗೆ ಸೂಕ್ತ ಮಾರುಕಟ್ಟೆ ಬೆಲೆ ಇಲ್ಲದೇ ನೇಯ್ಗೆ ಉದ್ಯಮ ತತ್ತರಿಸಿದೆ.
Related Articles
Advertisement
ಉತ್ತರ ಭಾರತದ ಮಾರುಕಟ್ಟೆಯಿಲ್ಲ: ವಿಶೇಷವಾಗಿದೊಡ xಬಳ್ಳಾಪುರದಲ್ಲಿ ನೇಯ್ದು ಕ ಡಿಮೆ ತೂಕದ ನಮೂನೆಯ ರೇಷ್ಮೆ ಸೀರೆಗಳು ಉತ್ತರ ಭಾರತ ದಲ್ಲಿ ಹೆಚ್ಚು ಮಾರಾಟವಾಗುತ್ತದೆ. ಕೋವಿಡ್ ಪರಿಣಾಮ ಎಲ್ಲೆಡೆ ಶುಭ ಸಮಾರಂಭಗಳಿಗೆ ಹಲವಾರು ನಿರ್ಬಂಧ ಹೇರಿರುವುದರಿಂದ ಸೀರೆಗಳನು ಕೊಳ್ಳುವವರೇ ಇಲ್ಲದಂತಾಗಿ ರೇಷ್ಮೆ ಬಟ್ಟೆ ತಯಾರಿಕೆ ಕುಸಿಯುತ್ತಿದೆ. ಇದರಿಂದಾಗಿ ಅನಿವಾರ್ಯವಾಗಿ ಸೀರೆಗಳನ್ನು ದಾಸ್ತಾನು ಮಾಡಲಾಗುತ್ತಿದೆ ಎನ್ನುತ್ತಾರೆ ರೇಷ್ಮೆ ಸೀರೆಗಳ ಉದ್ಯಮಿ ರಮೇಶ್.
ಅವಲಂಬಿತ ಉದ್ಯಮಗಳಿಗೆ ಹೊಡೆತ: ರೇಷ್ಮೆ ಸೀರೆಗಳ ತಯಾರಿಕ ಕುಸಿತವಾಗುತ್ತಿರುವುದರಿಂದ ನೇಕಾರಿಕೆಯನ್ನು ಅವಲಂಬಿಸಿರುವ ಹುರಿಮಿಷನ್, ರೇಷ್ಮೆ ಬಣ್ಣ ಮಾಡುವ ಮಾಲೀಕರು, ಹಾಗೂ ಕಾರ್ಮಿಕರಿಗೆ ರೇಷ್ಮೆ ರೀಲರ್‌ಗಳ ಕೆಲಸಕ್ಕೂ ಹೊಡೆತ ಬಿದ್ದಿದ್ದು, ಈ ಘಟಕಗಳಲ್ಲಿಯೂ ಕೆಲಸವಿಲ್ಲದಂತಾಗಿದೆ. 3 ತಿಂಗಳಿನಿಂದ ರೇಷ್ಮೆ ನೂಲು ತಯಾರಿಕೆ ನಿಂತಿದೆ ಎನ್ನುತ್ತಾರೆ ಸಾಯಿ ರೀಲರ್ಸ್ ಮಾಲೀಕ ರಾದ ಮೋಹನ್ ಕುಮಾರ್. ರೇಷ್ಮೆ ನಗರ ಎಂದು ಇಡೀ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದ ದೊಡ್ಡಬಳ್ಳಾಪುರಕ್ಕೆ ಸ್ವಾಗತ ನೀಡುವ ಕಮಾನುಗಳು ಮುಂದೆ ಅರ್ಥ ಕಳೆದುಕೊಂಡರೂ ಅಚ್ಚರಿಯಿಲ್ಲ.
ಸರ್ಕಾರ ಆವರ್ತನಿ ಸ್ಥಾಪಿಸಿ, ರೇಷ್ಮೆ ಬೆಲೆ ಸ್ಥಿರವಾಗಿರುವಂತೆಕ್ರಮ ಕೈಗೊಳ್ಳಬೇಕಿದೆ. ಮದುವೆ ಮೊದಲಾದಸಭೆ ಸಮಾರಂಭಗಳಿಗೆ ಇರುವ ನಿಯಮ ಸಡಿಲಗೊಳಿಸಿ ರೇಷ್ಮೆ ಸೀರೆಗಳಮಾರಾಟಕ್ಕೆ ಅನುಕೂಲ ಮಾಡಿಕೊಟ್ಟರೆ ರೇಷ್ಮೆ ಉದ್ಯಮ ಚೇತರಿಸಿಕೊಳ್ಳುತ್ತದೆ. –ಪಿ.ಸಿ.ವೆಂಕಟೇಶ್, ಅಧ್ಯಕ್ಷರು, ಬೆ. ಗ್ರಾಮಾಂತರ ಹಾಗೂ ನಗರ ಜಿಲ್ಲಾ ನೇಕಾರರ ಉತ್ಪಾದನಾ, ಮಾರಾಟ ಸಹಕಾರ ಮಂಡಳಿ
–ಡಿ.ಶ್ರೀಕಾಂತ