ನೆಲಮಂಗಲ: ಕೋವಿಡ್ 19 ಸೋಂಕಿನಿಂದಾಗಿ ಜನರು ಸೇರಿ ಜಾನುವಾರು ಹಾಗೂ ಪ್ರಾಣಿ ಪಕ್ಷಿಗಳು ಆಹಾರವಿಲ್ಲದೆ ಹೈರಾಣಾಗಿದ್ದವು. ಲಾಕ್‌ಡೌನ್ ಪಾಲನಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರಿಂದ ಜನರು ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರವಾಸಿ ತಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಜತೆಗೆ ಅಲ್ಲಿನ ಪ್ರಾಣಿ ಪಕ್ಷಿಗಳು ಮುಖ್ಯವಾಗಿ ಕೋತಿಗಳು ಆಹಾರವಿಲ್ಲದೇ ಪರದಾಡುತ್ತಿದ್ದವು. ಉದಯವಾಣಿ ಪತ್ರಿಕೆ ಇದನ್ನು ಮನಗಂಡು ಶಿವಗಂಗೆ ಬೆಟ್ಟಕ್ಕೂ ಕೋವಿಡ್ 19 ಕಂಟಕ ಎಂಬ ಶೀರ್ಷಿಕೆಯಡಿಯಲ್ಲಿ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ, ಹಸಿವಿನಿಂದ ನಿತ್ಯ ಕೋತಿಗಳ ನರಳಾಟ ಎಂದು ವಿಸ್ತೃತ ವರದಿ ಪ್ರಕಟಿಸಿತ್ತು.
ಉದಯವಾಣಿ ವರದಿ ಹಿನ್ನಲೆಯಲ್ಲಿ ತಾಲೂಕಿನ ಜೆಡಿಎಸ್ ಮುಖಂಡ ಗೋವೇನಹಳ್ಳಿ ಪ್ರಕಾಶ್ ಮತ್ತು ಪತ್ನಿ ಪಟ್ಟಣ ಪುರಸಭೆ ಮಾಜಿ ಅಧ್ಯಕ್ಷೆ ಸುಜಾತ ಪ್ರಕಾಶ್
ಸೇರಿದಂತೆ ಸ್ಥಳೀಯ ಯುವಕರು ಮುಖಂಡರು ಶಿವಗಂಗೆ ಬೆಟ್ಟಕ್ಕೆ ಭೇಟಿ ನೀಡಿ ಬೆಟ್ಟದಲ್ಲಿರವ ಕೋತಿಗಳಿಗೆ ಸಾಕಷ್ಟು ಹಣ್ಣು ಹಾಗೂ ಮತ್ತಿತರ ಆಹಾರ
ಪದಾರ್ಥ ತಂದು ಕೋತಿಗಳ ಹಸಿವು ನೀಗಿಸಿದ್ದಾರೆ. ಪತ್ರಿಕೆಯ ವರದಿಗೆ ಎಚ್ಚೆತ್ತುಕೊಂಡು ಪ್ರಾಣಿಸಂಕುಲಕ್ಕೆ ಆಹಾರದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ
ಮಾನವೀಯತೆ ಮೆರೆದ ಪ್ರತಿಯೊಬ್ಬರಿಗೂ ಪ್ರತಿಕೆ ಅಭಿನಂದನೆ ಸಲ್ಲಿಸುತ್ತದೆ.