Advertisement

ಕೊರೊನಾದಿಂದ ಮನೆ ಮುಖ್ಯಸ್ಥರನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬಗಳು!!

03:25 PM Dec 18, 2021 | Team Udayavani |

ದೋಟಿಹಾಳ: ಕೊರೊನಾದಿಂದಾಗಿ ದೇಶಾಧ್ಯಂತ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಕೊರೊನಾ ವೈರಸ್ ಮಾಡಿದ ಅವಾಂತರ ಒಂದೆರಡಲ್ಲ. ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿ ಜೀವನ ಸಾಗಿಸುವುದು ಕಷ್ಟವಾಗಿ ಹೋಗಿತ್ತು. ಇಂತಹ ಸಂದರ್ಭದಲ್ಲಿ ಅನೇಕ ಕುಟುಂಬಗಳು ದುಡಿಯುವ ಮುಖ್ಯಸ್ಥರನ್ನು ಕಳೆದುಕೊಂಡ ಕಣ್ಣೀರು ಹಾಕುತ್ತಿವೆ. ಸರಕಾರ ಘೋಷಣೆ ಮಾಡಿದ ಪರಿಹಾರ ಹಣವು ಇನ್ನೂ ಅವರ ಕೈಸೇರುತ್ತಿಲ್ಲ ಸದ್ಯ ಇವರ ಬದುಕು ಬೀದಿಪಾಲಾಗುತ್ತಿದೆ.

Advertisement

ಗ್ರಾಮದ 37 ವರ್ಷದ ಅನಂತಕುಮಾರ ಗುಮಾ 2021 ಮೇ:03ರಂದು ಕೊರೊನಾ ಬಲಿತೆಗೆದುಕೊಂಡಿತು. ಈ ಸಣ್ಣ ಕುಟುಂಬ ತನ್ನ ದುಡಿಯುವ ಮುಖ್ಯಸ್ಥನೇ ಕಳೆದುಕೊಂಡು ಅನಾಥವಾಯಿತು. ಸದ್ಯ ಪತಿಯನ್ನು ಕಳೆದುಕೊಂಡ ಮಹಿಳೆ ತನ್ನ ಇಬ್ಬರ ಮಕ್ಕಳನ್ನು ಕಟ್ಟಿಕೊಂಡು ಜೀವನ ಬಂಡಿ ಸಾಗಿಸುವುದೇ ಕಷ್ಟವಾಗಿದೆ.

ಈ ಕುಟುಂಬ ಮೂಲತಃ ನೇಕಾರಿಕೆ ಇಂದಲೇ ತಮ್ಮ ಜೀವನ ಸಾಗಿಸಿಕೊಂಡು ಬಂದಂತ ಈ ಕುಟುಂಬ ಸದ್ಯ ಮನೆಯ ಯಜಮಾನವನೇ ಕಳೆದುಕೊಂಡು ಜೀವನಕ್ಕೆ ಯಾವುದೇ ಆದಾಯ ಇಲ್ಲದಂತಾಗಿದೆ. ಸಣ್ಣ ಮಕ್ಕಳ ಆಕ್ರಂದನ, ಕಿತ್ತು ತಿನ್ನುವ ಬಡತನ ಒಂದೆಡೆಯಾದ್ರೆ, ಇಡೀ ಕುಟುಂಬವನ್ನು ತನ್ನ ಹೆಗಲಿಗೆ ಹಾಕಿಕೊಂಡು ಸಂಸಾರದ ತೇರನ್ನು ಈ ಮಹಿಳೆ ಎಳೆಯಬೇಕಾದ ಪ್ರಸಂಗ ಮತ್ತೊಂದೆಡೆ. ಇಂತಹ ಸ್ಥಿತಿಯಲ್ಲಿ ಜೀವನ ನಡೆಸುವುದೇ ಈ ಕುಟುಂಬಕ್ಕೆ ದುಸ್ಥಿತಿಯಾಗಿದೆ.

ಇಂತಹ ಸಂದರ್ಭದಲ್ಲಿ ಸರಕಾರ ಘೋಷಣೆ ಮಾಡಿದ ಪರಿಹಾರ ಹಣ ಇನ್ನೂ ನಮ್ಮ ಕೈ ಸೇರದೆ ಇರುವುದುನ್ನು ಕಂಡ ಇಂತಹ ಅನೇಕ ಕುಟುಂಬಗಳು ಕಣ್ಣೀರಿಡುವಂತಾಗಿದೆ. “ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ” ಎಂಬ ಗಾಧೆ ಮಾತಿನಂತೆ ಇವರ ಸ್ಥಿತಿಯಾಗಿದೆ. ಅಧಿಕಾರಿಗಳ ಎಡವಟ್ಟಿನಿಂದ ಅನೇಕ ಕುಟುಂಬಗಳ ಪರಿಹಾರ ಅರ್ಜಿಗಳು ಬಿಎಮ್‌ಎಸ್ ತಂತ್ರಾಂಶದಲ್ಲಿ ನೊಂದಣೆ ಆಗದೇ ಇರುವದರಿಂದ ಅನೇಕು ಕುಟುಂಬಗಳಿಗೆ ಪರಿಹಾರ ಹಣ ಸಿಗುತ್ತಿಲ್ಲ.

ಕುಷ್ಟಗಿ ತಾಲೂಕಿನಲ್ಲಿ ಕೊರೊನಾ ಸೊಂಕಿನಿಂದ ದುಡಿಯುವ ಸದಸ್ಯರನ್ನು ಕಳೆದು 112 ಜನ ಪರಿಹಾರ ಹಣಕ್ಕಾಗಿ ಅರ್ಜಿಸಲಿಸಿದ್ದರು ಇದರಲ್ಲಿ ಕೇವಲ 42 ಜನರಿಗೆ ಮಾತ್ರ ಪರಿಹಾರ ಹಣ ಸಿಕಿದೆ. ಉಳಿದವರಿಗೆ ಪರಿಹಾರ ಹಣ ಸಿಕಿಲ್ಲಾ. ಕಾರಣ ಬಿಎಮ್‌ಎಸ್ ತಂತ್ರಾಂಶದಲ್ಲಿ ದೋಷ. ತಾಲೂಕಿನ 70 ಅರ್ಜಿಗಳು ಬಿಎಮ್‌ಎಸ್ ತಂತ್ರಾಂಶದಲ್ಲಿ ನೊಂದಣೆ ಆಗದೇ ಇರುವದರಿಂದ ಅನೇಕು ಕುಟುಂಬಗಳಿಗೆ ಪರಿಹಾರ ಹಣ ದೊರೆತಿಲ್ಲ.

Advertisement

ಇದೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇನ್ನೂ ಪರಿಹಾರಕ್ಕೆ ಅರ್ಜಿಸಲಿದವರ ಅರ್ಜಿಗಳು ಬಿಎಮ್‌ಎಸ್ ತಂತ್ರಾಂಶದಲ್ಲಿ ನೊಂದಣೆವಾಗುತ್ತಿಲ್ಲ ಇದರ ಬಗ್ಗೆ ಹಿರಿಯ ಅಧಿಕಾರಿಗಳು ಇದರ ಬಗ್ಗೆ ಗಮನಿಸಿ ಸೂಕ್ತ ಕ್ರಮ ಕೈಕೊಂಡು ನೊಂದ ಕುಟಂಬಗಳಿಗೆ ಪರಿಹಾರ ಹಣ ಸಿಗುವಂತೆ ಮಾಡಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಕಳಕಳಿಯಾಗಿದೆ.

ಮನೆಯ ಯಜಮಾನನೇ ಕಳೆದುಕೊಂಡು, ಸಣ್ಣ ಮಕ್ಕಳ ಕಟ್ಟಿಕೊಂಡು ಜೀವನ ನಡೆಸುವುದು ಕಷ್ಟಕರವಾಗಿದೆ. ನಮಗೆ ಯಾವುದೇ ಆದಾಯದ ಮೂಲ ಇಲ್ಲ. ದುಡಿಯಲು ಕೆಲಸವಿಲ್ಲ. ಸರಕಾರ ಘೋಷಣೆ ಮಾಡಿದ ಪರಿಹಾರ ಹಣವು ಇನ್ನೂ ನಮ್ಮ ಸಿಕ್ಕಿಲ್ಲ.-ಕೊರೊನಾದಲ್ಲಿ ಗಂಡನ ಕಳೆದುಕೊಂಡ ಮಹಿಳೆ.

ತಾಲೂಕಿನಲ್ಲಿ 112 ಅರ್ಜೀಗಳು ಬಂದ್ದಿದು. ಇದರಲ್ಲಿ ಸದ್ಯ 42 ಜನರಿಗೆ ಮಾತ್ರ ಪರಿಹಾರ ಹಣ ನೀಡಲಾಗಿದೆ. ಕೆಲವು ಅರ್ಜಿಗಳು ಬಿಎಮ್‌ಎಸ್ ತಂತ್ರಾಂಶ ದೋಷದಿಂದ ನೊಂದಣೆವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಉಳಿದವರಿಗೂ ಪರಿಹಾರ ಹಣ ನೀಡುತ್ತೇವೆಎಂ.ಸಿದ್ದೇಶ ,ತಹಸಿಲ್ದಾರ ಕುಷ್ಟಗಿ

-ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next