ಸವದತ್ತಿ: ಕೋವಿಡ್ 19 ಮಹಾಮಾರಿಯೂ ವರ್ಷಪೂರ್ತಿ ಸುಕ್ಷೇತ್ರ ಯಲ್ಲಮ್ಮನ ದರ್ಶನಕ್ಕೆ ಅಡ್ಡಿಯಾಗಿದೆ. ಇತ್ತೀಚೆಗೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳಗಳಲ್ಲಿ ಕೋವಿಡ್-19 ರೂಪಾಂತರಿ ವೈರಾಣುವಿನ ಅಟ್ಟಹಾಸದಿಂದಾಗಿಮಹಾ ಗಡಿಯೂದ್ದಕ್ಕೂ ತೀವ್ರ ಕಟ್ಟೆಚ್ಚರ ವಹಿಸಿಎಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಪ್ರತಿವರ್ಷ ಭಾರತ ಹುಣ್ಣಿಮೆ ದಿನದಂದು ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ ಮಹಾರಾಷ್ಟ್ರ, ಗೋವಾ, ಆಂಧ್ರ, ತೆಲಂಗಾಣಸೇರಿದಂತೆ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ಸದ್ಯ ದೇವಸ್ಥಾನಕ್ಕೆ ಕೋವಿಡ್ ಮಾರ್ಗಸೂಚಿಗಳನ್ವಯ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ದೇವಸ್ಥಾನಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಈ ಭಾರತ ಹುಣ್ಣಿಮೆ ಜಾತ್ರೆಯಲ್ಲಿ ಉಧೋ ಉಧೋ ದೇವಿಯ ನಾಮಸ್ಮರಣೆ ಇಲ್ಲದೇ ದೇವಸ್ಥಾನ ಭಣಗುಡುತ್ತಿದೆ.
ಕಳೆದ 11 ತಿಂಗಳ ಕಾಲ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿದ್ದು, ಡಿಸೆಂಬರ್-ಜನವರಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರಿಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಫೆ. 1 ರಿಂದ 20ರವರೆಗೆ ದೇವಿ ದರ್ಶನಕ್ಕೆ ಅನುಮತಿ ನೀಡಿ ಮಹಾರಾಷ್ಟ್ರದಲ್ಲಿ ಹೊಸ ರೂಪದಸೋಂಕಿನ ಹಾವಳಿ ಜಾಸ್ತಿಯಾಗುತ್ತಿದ್ದಂತೆಮತ್ತೆ ಅನಿದಿ ìಷ್ಟಾವಧಿ ಯಗೆ ನಿರ್ಬಂಧ ಮುಂದುವರಿಸಲಾಯಿತು.
ದೇವಸ್ಥಾನದ ಜಾತ್ರೆಗಳಲ್ಲಿಯೇ ಅತೀ ಹೆಚ್ಚು ಭಕ್ತಗಣ ಸೇರುವ ಜಾತ್ರೆ ಇದಾಗಿದ್ದು, ಮತ್ತೆ ನಿರ್ಬಂಧ ಹೇರಿರುವುದು ಭಕ್ತರ ಅಸಮಾಧಾನಕ್ಕೆ ಅಸಂಖ್ಯಾತ ಭಕ್ತರು ಸ್ವಂತ ವಾಹನ, ಕಾಲ್ನಡಿಗೆ ಮತ್ತು ಚಕ್ಕಡಿಗಳ ಮೂಲಕ ಭಕ್ತರು ದೇವಸ್ಥಾನದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಡು ಬಿಟ್ಟಿದ್ದಾರೆ.ಯಲ್ಲಮ್ಮಗುಡ್ಡಕ್ಕೆ ಹೋಗಬೇಕೆಂದು ಬರುವ ಭಕ್ತರನ್ನು 15-20 ಕಿಮೀಯಿಂದಾಚೆಗೆ ಎಲ್ಲ ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸ್‌ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದಾರೆ.ಇದರಿಂದ ಏಳುಕೊಳ್ಳದಲ್ಲಿ ಸೇರಲಿದ್ದ ಭಕ್ತ ಸಮೂಹ ಯಲ್ಲಮ್ಮ ದೇವಸ್ಥಾನದ ಸುತ್ತಲಿನ ಗ್ರಾಮಗಳಲ್ಲಿ ಸೇರಿ ದೇವಿಯ ಪೂಜಾ ವಿಧಿ ವಿಧಾನ ಆಚರಿಸುವಂತಾಗಿದೆ. ದೇವಿಯ ದರ್ಶನ ಸಿಗದ ಲಕ್ಷಾಂತರ ಭಕ್ತರು ಅಸಮಾಧಾನವ್ಯಕ್ತಪಡಿಸಿ ಮರುಳುವಂತಹ ಸ್ಥಿತಿ ಸದ್ಯಕ್ಕಿದೆ. ಭಾರತ ಹುಣ್ಣಿಮೆ ಹೊರತುಪಡಿಸಿ ವರ್ಷದ ಎಲ್ಲ ದಿನಗಳು ಉಧೋ ಉಧೋ ಯಲ್ಲವ್ವ ನಿನ್ನಾಲ್ಕೂಧೋ ಎಂಬ ನಾದವೂ ಯಲ್ಲಮ್ಮಗುಡ್ಡದ ಮೂಲೆ ಮೂಲೆಯಲ್ಲಿಯೂ ಪ್ರತಿಧ್ವನಿಸುತ್ತಿತ್ತು. ಲಾಕ್‌ಡೌನ್ ಆರಂಭವಾದಾಗಿನಿಂದ ನಾಮಸ್ಮರಣೆ ಇಲ್ಲದೇ ದೇವಸ್ಥಾನ ಭಣಗುಡುವಂತಾಗಿದೆ.
ಹೊಲಗದ್ದೆಗಳಲ್ಲಿ ಪಡ್ಡಲಗಿ ತುಂಬಿಸಿದ ಭಕ್ತರು: ಪ್ರತಿವರ್ಷ ಲಕ್ಷಾಂತರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿ 4-5 ದಿನ ಅಲ್ಲಿಯೇ ಬಿಡಾರ ಹೂಡಿ ದೇವಿಯ ದರ್ಶನ ಪಡೆದುವಿವಿಧ ಖಾದ್ಯ ತಯಾರಿಸಿಕೊಂಡು ದೇವಿಗೆಪಡ್ಡಲಗಿ ತುಂಬಿಸುವ ಕಾರ್ಯ ಮಾಡುತ್ತಿದ್ದರು. ಆದರೆ ಇದೀಗ ದೇವಸ್ಥಾನಕ್ಕೆ ನಿರ್ಬಂಧದಕಾರಣ ಸುಮಾರು ಗುಡ್ಡದಿಂದ 15 ಕಿಮೀ ಆಚೆಗೆ ಭಕ್ತ ಸಮೂಹ ತಡೆಯಲಾಗಿದ್ದು,ರಸ್ತೆ, ಹೊಲ-ಗದ್ದೆ ಮತ್ತು ಗುಡಿ ಆವರಣದಲ್ಲಿದೇವಿಯ ನಾಮಸ್ಮರಣೆಯೊಂದಿಗೆ ಪಡ್ಡಲಗಿ ತುಂಬಿಸುವ ಮೂಲಕ ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ.
ದಕ್ಷಿಣ ಭಾರತದ ಶಕ್ತಿಪೀಠಗಳಲ್ಲಿ ಒಂದಾದ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನವೂ ಭಕ್ತರಿಲ್ಲದೇ ಭಣಗುಡುತ್ತಿದೆ. ಕೊರೊನಾ ತಡೆಗೆ ಸದ್ಯಕ್ಕೆ ಇದು ಅನಿವಾರ್ಯವಾಗಿದೆ.ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಬಂಧ ಹೇರಲಾಗಿದ್ದು, ಭಕ್ತರು ಸಹಕರಿಸಬೇಕು. –
ಆನಂದ ಮಾಮನಿ, ಶಾಸಕರು.
-ಡಿ.ಎಸ್.ಕೊಪ್ಪದ