Advertisement
ರೋಲರ್ ಕೋಸ್ಟರ್, ಜಯಂಟ್ ವೀಲ್ ಸೇರಿದಂತೆ ಎಲ್ಲ ಥ್ರಿಲ್ಲಿಂಗ್ ಮನರಂಜನೆಯ ಸಾಧನಗಳನ್ನು ಪ್ರತಿಯೊಂದು ಪಾಳಿ ಮುಗಿದ ಸ್ಯಾನಿಟೈಸ್ ಮಾಡಲಾಗುತ್ತದೆ. ಪಾರ್ಕ್ ಒಳಗೆ ಪ್ರವೇಶಿಸುವಾಗಲೇ ಟೆಂಪರೇಚರ್ ಚೆಕ್ಕಿಂಗ್, ಮಾಸ್ಕ್, ಗ್ಲೌಸ್ ಇತ್ಯಾದಿ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾಜಿಕ ಅಂತರ ಪಾಲಿಸಬೇಕಾಗಿರುವುದರಿಂದ ಒಂದು ಸೀಟಿನಲ್ಲಿ ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿರುವುದರಿಂದ ಸಹಜವಾಗಿಯೇ ದರಗಳೆಲ್ಲ ಏರಿಕೆಯಾಗಿವೆ. ಇದೇ ವೇಳೆ ಗುಂಪುಗೂಡದೆ ಆಡುವ ಕೆಲವು ಥ್ರಿಲ್ಲಿಂಗ್ ಆಟಗಳನ್ನು ಹೊಸದಾಗಿ ಸೇರಿಸಿಕೊಂಡು ಆಕರ್ಷಣೆ ಹೆಚ್ಚಿಸಲಾಗಿದೆ. ಜನರಲ್ಲೂ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿರುವುದರಿಂದ ಇಂಥ ಆಟಗಳನ್ನು ಇಷ್ಟಪಡುತ್ತಿದ್ದಾರೆ.
ಮಾತಿನಲ್ಲಿ ಮನರಂಜನೆ ನೀಡುವವರು, ಹಾಂಟೆಡ್ ಹೌಸ್ ಸಿಬಂದಿ ಇಂಥವರಿಗೆಲ್ಲ ಮಾಸ್ಕ್ ಧರಿಸಿ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಲ್ಲಿ ಕನಿಷ್ಠ 1 ಮೀಟರ್ ಅಂತರದ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲಾಗಿದೆ. ಕಸ್ಟಮರ್ ಸರ್ವಿಸ್ ಬದಲಾವಣೆ
ಥೀಮ್ ಪಾರ್ಕ್‌ಗಳ ಗ್ರಾಹಕ ಸೇವೆಯಲ್ಲೂ ಭಾರೀ ಬದಲಾವಣೆಗಳಾಗಿವೆ. ಕಸ್ಟಮರ್ ಕೇರ್ ಕೇಂದ್ರದಲ್ಲಿರುವವರು ಮಾಸ್ಕ್ ಧರಿಸಿರುವುದರಿಂದ ಮಾಮೂಲು ಸುಂದರವಾದ ನಗೆಯೊಂದಿಗೆ ಗ್ರಾಹಕರಿಗೆ ಸ್ವಾಗತ ಕೋರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ಕಣ್ಣಿನಲ್ಲೇ ಸ್ವಾಗತಕೋರುವ ತರಬೇತಿ ನೀಡಲಾಗಿದೆ. ಜತೆಗೆ ಗ್ರಾಹಕರ ಜತೆಗೆ ಸಂವಹನ ನಡೆಸುವ ಹೊಸ ವಿಧಾನವನ್ನು ಕಲಿಸಿಕೊಡಲಾಗಿದೆ. ಇವೆಲ್ಲ ಸರಕಾರಿ ಮಾರ್ಗದರ್ಶನದಲ್ಲಿ ರೂಪಿಸಲಾದ ನಿಯಮಗಳು.
Related Articles
Advertisement
ನಿಯಮಗಳ ಪಾಲನೆತುರ್ತ ಪರಿಸ್ಥಿತಿಯಿಂದ ಜನರು ಬಿಡುಗಡೆಗೊಂಡರೂ ಕೂಡ ಲಾಕ್‌ಡೌನ್‌ನ ನಿಯಮಗಳನ್ನು ಮರೆಯುವಂತಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಿಂದಿನಷ್ಟೇ ಈಗಲೂ ಅಗತ್ಯ. ಮನೋರಂಜನೆಗೆ ತೆರಳುವೆಲ್ಲೆಡೆಗಳಲ್ಲಿ ಆರೋಗ್ಯ ತಪಾಸಣೆಗಳನ್ನು ಮಾಡಲಾಗುತ್ತದೆ.