Advertisement

ಕೋವಿಡ್ ಕರಿನೆರಳಲ್ಲೇ ಕಾರ ಹುಣ್ಣಿಮೆ ಸಂಭ್ರಮ

08:29 AM Jun 06, 2020 | Suhan S |

ಬಾಗಲಕೋಟೆ: ಕೋವಿಡ್ ವೈರಸ್‌ ಕರಿ ನೆರಳಿನ ಮಧ್ಯೆಯೂ ರೈತರ ಸಂಭ್ರಮದ ಹಬ್ಬ, ಕಾರ ಹುಣ್ಣಿಮೆ ಜಿಲ್ಲಾದ್ಯಂತ ಶುಕ್ರವಾರ ನಡೆಯಿತು.

Advertisement

ನಗರ ಪ್ರದೇಶಗಳಲ್ಲೂ ನಡೆಯುತ್ತಿದ್ದ ಕಾರ ಹುಣ್ಣಿಮೆ ಈ ಬಾರಿ ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿತ್ತು. ಆದರೂ, ಮುಧೋಳ ನಗರದ ಗಾಂಧಿ ವೃತ್ತದಲ್ಲಿ ಎತ್ತುಗಳನ್ನು ಓಡಿಸಿ, ಕಾರ ಹುಣ್ಣಿಮೆ ಆಚರಿಸಲಾಯಿತು. ಇದು ಕೆಲವರ ವಿರೋಧಕ್ಕೂ ಕಾರಣವಾಯಿತು.

ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ರೈತರು, ತಮ್ಮ ಜೀವದ ಗೆಳೆಯರಂತಿರುವ ಎತ್ತುಗಳಿಗೆ ಬಣ್ಣ ಹಚ್ಚಿ, ಕೊರಳಿಗೆ ಗೆಜ್ಜೆ ಕಟ್ಟಿ ಸಿಂಗರಿಸಿದ್ದರು. ಸಂಜೆ ಹೊತ್ತಿಗೆ ರೈತರೆಲ್ಲ ಕೂಡಿ ಎತ್ತುಗಳನ್ನು ಓಡಿಸಿ, ಸಂಭ್ರಮಿಸಿದರು. ಇದೇ ವೇಳೆ ಕೆಲವೆಡೆ ಸಂಪ್ರದಾಯದಂತೆ ಭಾರ ಎತ್ತುವ ಸ್ಪರ್ಧೆಗಳೂ ನಡೆದವು.

ಬಾಗಲಕೋಟೆ ನಗರದ ವಲ್ಲಭಬಾಯಿ ವೃತ್ತದಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಎತ್ತು ಓಡಿಸುವ ಸಂಪ್ರದಾಯ ಈ ಬಾರಿ ನಡೆಯಲಿಲ್ಲ. ಬಿಳಿ ಮತ್ತು ಕಂದು ಬಣ್ಣದ ಎತ್ತು ಓಡಿಸಿ, ಯಾವ ಎತ್ತು ಮುಂದೆ ಬರುತ್ತದೆಯೋ ಆ ಎತ್ತುಗಳ ಬಣ್ಣದ ಆಧಾರದ ಮೇಲೆ ಮುಂಗಾರು ಮತ್ತು ಹಿಂಗಾರು ಬೆಳೆ ಸಮೃದ್ಧವಾಗಿ ಬರುವ ಕುರಿತು ಮುನ್ಸೂಚನೆ ತಿಳಿಯುತ್ತಿದ್ದ ಸಂಪ್ರದಾಯ ಈ ಬಾರಿ ನಡೆಯಲಿಲ್ಲ. ಕಾರ ಹುಣ್ಣಿಮೆ ನಿಮಿತ್ತ ಮಹಿಳೆಯರು ಅಲ್ಲಲ್ಲಿ ವಟ ಸಾವಿತ್ರಿ ಪೂಜೆ ನಡೆಸಿದರು. ಅರಳಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪತಿಯ ಆರೋಗ್ಯ ಚೆನ್ನಾಗಿರಲೆಂದು ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next